ಮೇ 25 ರಿಂದ ಮಂಗಳೂರಿನಿಂದ ವಿಮಾನ ಹಾರಾಟ ಆರಂಭ

0

ಮಂಗಳೂರು : ಕೊರೊನಾ ವೈರಸ್ ಸೋಂಕಿನಿಂದ ಸ್ಥಗಿತವಾಗಿದ್ದ ದೇಶೀಯ ವಿಮಾನಯಾನ ಸೇವೆ ಸೋಮವಾರದಿಂದ ಆರಂಭವಾಗಲಿದೆ. ಈ ಕುರಿತು ವಿಮಾನಯಾನ ಸಚಿವಾಲಯ ಸೂಚನೆಯನ್ನು ನೀಡಿದ್ದು, ಮಂಗಳೂರಿನಿಂದ ಬೆಂಗಳೂರು, ಚೆನೈಗೆ ವಿಮಾನ ಹಾರಾಟ ನಡೆಸಲಿದೆ.

ಸ್ಪೈಸ್ ಜೆಟ್ ವಿಮಾನ ಬೆಳಗ್ಗೆ 8.30, ರಾತ್ರಿ 7 ಗಂಟೆ ಹಾಗೂ ಇಂಡಿಗೋ ವಿಮಾನ ಸಂಜೆ 5.55ಕ್ಕೆ ಬೆಂಗಳೂರಿನಿಂದ ಮಂಗಳೂರಿಗೆ ಹಾಗೂ ಮಂಗಳೂರಿನಿಂದ ಬೆಂಗಳೂರಿಗೆ ಸ್ಪೈಸ್ ಜೆಟ್ ವಿಮಾನ ಬೆಳಗ್ಗೆ 10.20ಕ್ಕೆ, ರಾತ್ರಿ 9.35 ಹಾಗೂ ಇಂಡಿಗೋ ಸಂಜೆ 7.30ಕ್ಕೆ ಸಂಚರಿಸಲಿದೆ. ಇನ್ನು ಚೆನ್ನೈನಿಂದ ಮಂಗಳೂರಿಗೆ ಸಂಜೆ 5.45ಕ್ಕೆ ಹಾಗೂ ಮಂಗಳೂರಿನಿಂದ ಚೆನ್ನೈಗೆ ರಾತ್ರಿ 8.05ಕ್ಕೆ ಇಂಡಿಗೋ ವಿಮಾನ ಸಂಚರಿಸಲಿದೆ.

ಅಲ್ಲದೇ ಮುಂಬೈನಿಂದ ಸ್ಪೈಸ್ ಜೆಟ್ ವಿಮಾನ ಬೆಳಗ್ಗೆ 7.05ಕ್ಕೆ, ಇಂಡಿಗೋ ಬೆಳಗ್ಗೆ 9.30ಕ್ಕೆ ಮಂಗಳೂರಿಗೆ ಹೊರಡಲಿವೆ. ಮಂಗಳೂರಿನಿಂದ ಮುಂಬೈಗೆ ಸ್ಪೈಸ್ ಜೆಟ್ ವಿಮಾನ ಬೆಳಗ್ಗೆ 9.05ಕ್ಕೆ, ಇಂಡಿಗೋ 11.40 ಕ್ಕೆ ತೆರಳಲಿ

ಇಂಡಿಗೋ ಸಂಸ್ಥೆಯ 3 ವಿಮಾನಗಳು ಮುಂಬೈ, ಚೆನೈ ಹಾಗೂ ಬೆಂಗಳೂರಿಗೆ ಹಾರಾಟ ನಡೆಸಲಿದ್ರೆ, ಸ್ಪೈಸ್ ಚೆಜ್ ಸಂಸ್ಥೆಯ 3 ವಿಮಾನಗಳು ಬೆಂಗಳೂರು ಹಾಗು ಮುಂಬೈ ನಡುವೆ ಸಂಚರಿಸಲಿದೆ ಎಂದು ಇಂಡಿಗೋ ಮತ್ತು ಸ್ಪೈಸ್ ಜೆಟ್ ಪ್ರಕಟಣೆ ತಿಳಿಸಿದೆ. ಆದರೆ ಏರ್ ಇಂಡಿಯಾ ಸಂಸ್ಥೆ ವಿಮಾನಗಳ ವೇಳಾಪಟ್ಟಿಯನ್ನು ಪ್ರಕಟಿಸಿಲ್ಲ.

Leave A Reply

Your email address will not be published.