ಭಾನುವಾರ, ಜೂನ್ 15, 2025
Homehoroscopeನಿತ್ಯಭವಿಷ್ಯ : 17-05-2020

ನಿತ್ಯಭವಿಷ್ಯ : 17-05-2020

- Advertisement -

ಮೇಷರಾಶಿ
ಭವಿಷ್ಯದ ಆಲೋಚನೆ, ಚಂಚಲ ಸ್ವಭಾವ, ಹೆತ್ತವರಲ್ಲಿ ದ್ವೇಷ, ಆರೋಗ್ಯದಲ್ಲಿ ವ್ಯತ್ಯಾಸ, ಅಲ್ಪ ಧನ ಲಾಭ, ವೈಯಕ್ತಿಕವಾಗಿ ಕೆಲಸ ಕಾರ್ಯಗಳಲ್ಲಿ ಒತ್ತಡ ಹೆಚ್ಚಲಿದೆ. ಕೋಪಾತಾಪಗಳಲ್ಲಿ ಹಿಡಿತವಿರಲಿ. ವಿದ್ಯಾರ್ಥಿಗಳು ತಮ್ಮ ಅಭ್ಯಾಸದಲ್ಲಿ ಗಮನಹರಿಸುವುದು ಅಗತ್ಯವಿರುತ್ತದೆ. ಹೇಳಿಕೆ ಮಾತನ್ನು ಕೇಳುವ ಸಾಧ್ಯತೆ, ವಾರಾಂತ್ಯದಲ್ಲಿ ದಾಂಪತ್ಯದಲ್ಲಿ ಅನ್ಯೋನ್ಯತೆ.

ವೃಷಭರಾಶಿ
ನಿಮ್ಮ ಕ್ರಿಯಾಶೀಲತೆಯು ವೃತ್ತಿರಂಗದಲ್ಲಿ ಇತರರಿಗೆ ಪ್ರೇರಣೆಯಾಗಲಿದೆ. ದೂರ ಸಂಚಾರದ ಸಿದ್ಧತೆ ಇನ್ನೂ ವಿಳಂಬವಾದೀತು. ಆರ್ಥಿಕವಾಗಿ ಹಂತ ಹಂತವಾಗಿ ಉನ್ನತಿಯು ತೋರಿಬರುವುದು. ಕ್ರಯ ವಿಕ್ರಯಗಳಿಂದ ಲಾಭ, ಕುಟುಂಬದಲ್ಲಿ ದ್ವೇಷ, ಇಲ್ಲ ಸಲ್ಲದ ಅಪವಾದ ನಿಂದನೆ, ಅನ್ಯರ ಷಡ್ಯಂತ್ರಕ್ಕೆ ಬೀಳುವಿರಿ, ಅಪರಿಚಿತರಿಂದ ಎಚ್ಚರಿಕೆ, ಶತ್ರುಗಳ ಬಾಧೆ, ದುಷ್ಟ ಚಿಂತನೆ, ಮಾತಿನ ಚಕಮಕಿ.

ಮಿಥುನರಾಶಿ
ಸಾಮಾನ್ಯ ನೆಮ್ಮದಿಗೆ ಧಕ್ಕೆ, ಸ್ಥಳ ಬದಲಾವಣೆ, ನೀಚ ಜನರ ಸಹವಾಸ, ದುಶ್ಚಟಗಳಿಂದ ತೊಂದರೆ, ಬದಲಾಗುವ ಹವಾಮಾನದಿಂದ ನಿಮ್ಮ ದೇಹ ಸ್ಥಿತಿಯಲ್ಲಿ ಬದಲಾವಣೆಯಾಗಲಿದೆ. ಆರ್ಥಿಕವಾಗಿ ಹೆಚ್ಚಿನ ಜಾಗ್ರತೆ ವಹಿಸುವುದು ಮುಖ್ಯ. ವೃತ್ತಿರಂಗದಲ್ಲಿ ಅನಿರೀಕ್ಷಿತ ಬದಲಾವಣೆಯ ಸಾಧ್ಯತೆ ಇರುತ್ತದೆ. ವಿದ್ಯಾರ್ಥಿಗಳಲ್ಲಿ ಹಿನ್ನಡೆ, ಕೆಲಸ ಕಾರ್ಯಗಳಲ್ಲಿ ಜಯ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ.

ಕಟಕರಾಶಿ
ಮಾನಸಿಕ ಒತ್ತಡ, ದುಷ್ಟ ಆಲೋಚನೆ, ತೀರ್ಥಕ್ಷೇತ್ರ ದರ್ಶನ, ಕಾರ್ಯಕ್ಷೇತ್ರದಲ್ಲಿ ನಿಮ್ಮ ವಿರೋಧಿಗಳು ನಿಮ್ಮನ್ನು ಮಣಿಸಲು ಯತ್ನಿಸಲಿದ್ದಾರೆ. ಇತರರ ವಿಚಾರಗಳ ಋಣಾತ್ಮಕ ಚಿಂತನೆಯನ್ನು ಮಾಡದಿರಿ. ಅದು ನಿಮ್ಮನ್ನು ಇಕ್ಕಟ್ಟಿಗೆ ನೂಕಲಿದೆ. ಜಾಗ್ರತೆ ವಹಿಸುವುದು. ಸಾಲಗಾರರಿಂದ ತೊಂದರೆ, ಆಲಸ್ಯ ಮನೋಭಾವ, ವೃಥಾ ತಿರುಗಾಟ, ದೂರ ಪ್ರಯಾಣಕ್ಕೆ ಮನಸ್ಸು, ವಾರಾಂತ್ಯದಲ್ಲಿ ಮನಸ್ಸಿನಲ್ಲಿ ಭಯ ನಿವಾರಣೆ.

ಸಿಂಹರಾಶಿ
ಅಧಿಕ ಧನವ್ಯಯ, ಉಳಿತಾಯದ ಬಗ್ಗೆ ಗಮನಹರಿಸಿ, ಯಾವುದೇ ವಿಚಾರದಲ್ಲಿ ಮಹತ್ವದ ನಿರ್ಧಾರ ತಾಳುವುದು ಅಗತ್ಯವಿದೆ. ತುಸು ಮಟ್ಟಿನ ಹೂಡಿಕೆ ಆರ್ಥಿಕವಾಗಿ ತುಸು ಲಾಭದಾಯಕವಾಗಲಿದೆ. ನಿಮ್ಮ ಮನಸ್ಸಿನ ಭಾವನೆಗಳನ್ನು ಅದುಮಿಟ್ಟುಕೊಳ್ಳಬೇಕು. ಅಮೂಲ್ಯ ವಸ್ತುಗಳ ಕಳೆದುಕೊಳ್ಳುವಿರಿ, ದ್ರವ್ಯ ನಷ್ಟ, ಅತಿಯಾದ ಕೋಪ, ದಾಂಪತ್ಯದಲ್ಲಿ ವಿರಸ, ಸಣ್ಣ ವಿಚಾರಗಳಿಂದ ಕಲಹ, ಉತ್ತಮ ಬುದ್ಧಿ ಶಕ್ತಿ.

ಕನ್ಯಾರಾಶಿ
ಹಿರಿಯರಿಂದ ಬೆಂಬಲ, ಆಧ್ಯಾತ್ಮಿಕ ವಿಚಾರದಲ್ಲಿ ಆಸಕ್ತಿ, ಯಾವುದೇ ವಿಚಾರ ಯೋಚಿಸಿ, ಚಿಂತಿಸಿ ಮುಂದುವರಿಯಿರಿ. ಕೌಟುಂಬಿಕರ ಜತೆ ವಾಗ್ವಾದ ಸಂಭವಿಸಬಹುದು. ಅನಾವಶ್ಯಕವಾಗಿ ಕ್ಲಿಷ್ಟಕರ ಪರಿಸ್ಥಿತಿಗೆ ಸಿಲುಕಲಿದ್ದೀರಿ. ಕೋಪವನ್ನು ನಿಯಂತ್ರಿಸಿಕೊಳ್ಳಿರಿ. ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅಪಘಾತವಾಗುವ ಸಾಧ್ಯತೆ, ಉದ್ಯೋಗದಲ್ಲಿ ಕಿರಿಕಿರಿ, ಆರ್ಥಿಕ ಪರಿಸ್ಥಿತಿ ಏರುಪೇರು, ವಾರಾಂತ್ಯದಲ್ಲಿ ಮನಃಕ್ಲೇಷ.

ತುಲಾರಾಶಿ
ಉದ್ಯೋಗ ಸ್ಥಳದಲ್ಲಿ ತೊಂದರೆ, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ, ವೃತ್ತಿ ಬದುಕು ಮತ್ತು ಖಾಸಗಿ ಬದುಕಿನ ಮಧ್ಯೆ ಸಮತೋಲನವನ್ನು ಸಾಧಿಸಬೇಕು. ಸಾಂಸಾರಿಕ ಬದುಕಿನಲ್ಲಿ ಬಿರುಕು ಕಾಣಿಸಬಹುದು. ಆರ್ಥಿಕವಾಗಿ ಆತಂಕ ತಂದೀತು. ದಿನಾಂತ್ಯ ಶುಭವಾರ್ತೆ ಬರಲಿದೆ. ನೀವಾಡುವ ಮಾತಿನಿಂದ ಮನಃಕ್ಲೇಷ, ಆಸ್ತಿ ವಿಚಾರದಲ್ಲಿ ಕಲಹ, ಮಾನಸಿಕ ಕಿರಿಕಿರಿ, ಬಂಧುಗಳಿಂದ ನಿಂದನೆ, ಈ ವಾರ ಅಲ್ಪ ಲಾಭ.

ವೃಶ್ಚಿಕರಾಶಿ
ಉದ್ದಿಮೆ, ವ್ಯಾಪಾರ, ವ್ಯವಹಾರದಲ್ಲಿ ಅಭಿವೃದ್ಧಿಯು ಸಂತೃಪ್ತಿ ತರಲಿದೆ. ಆಗಾಗ ಅನಾವಶ್ಯಕವಾಗಿ ಕೋಪ ತಾಪಗಳಿಗೆ ಬಲಿಯಾಗದಿರಿ. ನಿರುದ್ಯೋಗಿಗಳು ಉತ್ತಮ ಅವಕಾಶದಿಂದ ಉದ್ಯೋಗ ಹೊಂದಲಿರುವರು. ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಮಾತಿನ ಮೇಲೆ ಹಿಡಿತ ಅಗತ್ಯ, ಋಣ, ಸಾಲ ಬಾಧೆ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಚಂಚಲ ಮನಸ್ಸು, ಶೀತ ಸಂಬಂಧಿತ ರೋಗ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅಪಘಾತವಾಗುವ ಸಾಧ್ಯತೆ.

ಧನಸ್ಸುರಾಶಿ
ಉತ್ತಮ ಬುದ್ಧಿಶಕ್ತಿ, ಶತ್ರುಗಳ ಬಾಧೆ, ಯಾವುದೇ ವಿಚಾರವನ್ನು ಬಹಿರಂಗಗೊಳಿಸದಿರಿ. ಆಗಾಗ ಕೆಲಸ ಕಾರ್ಯಗಳಲ್ಲಿ ನಿರಾಶೆ ತೋರಿಬರುತ್ತದೆ. ವಿದ್ಯಾರ್ಥಿಗಳು ಉತ್ತಮ ಅವಕಾಶವನ್ನು ಪಡೆಯಲಿದ್ದಾರೆ. ಸಾಂಸಾರಿಕವಾಗಿ ಸಾಮರಸ್ಯವನ್ನು ಕಾಪಾಡಿಕೊಳ್ಳಿರಿ. ಅನ್ಯರಿಗೆ ಉಪಕಾರ ಮಾಡುವಿರಿ, ಆರೋಗ್ಯದಲ್ಲಿ ಏರುಪೇರು, ಅಧಿಕ ತಿರುಗಾಟ, ಹಣಕಾಸು ನಷ್ಟ, ಕೆಲಸದಲ್ಲಿ ವಿಳಂಬ, ಋಣ ವಿಮೋಚನೆ.

ಕರರಾಶಿ
ವೃತ್ತಿರಂಗದಲ್ಲಿ ಸಮಾಧಾನಕರ ವಾತಾವರಣ ಮುನ್ನಡೆಗೆ ಸಹಕಾರಿಯಾಗಲಿದೆ. ಸಾಂಸಾರಿಕವಾಗಿ ಹೊಂದಾಣಿಕೆ ಮನಸ್ಸಿಗೆ ಸಮಾಧಾನ ತರಲಿದೆ. ಉದ್ಯೋಗಿಗಳಿಗೆ ಹಲವಾರು ಅವಕಾಶಗಳು ಒದಗಿಬರುವುದು. ದೂರ ಪ್ರಯಾಣ, ಗೆಳೆಯರಿಂದ ಸಹಾಯ, ಅತಿಯಾದ ಕೋಪ, ಚೋರ ಭಯ, ಕುತಂತ್ರದಿಂದ ಹಣ ಸಂಪಾದನೆ, ಪ್ರಯಾಣ ಮಾಡುವ ಪ್ರಸಂಗ, ಸ್ತ್ರೀಯರಿಗೆ ತಾಳ್ಮೆ ಅತ್ಯಗತ್ಯ.

ಕುಂಭರಾಶಿ
ಕೆಲಸ ಕಾರ್ಯಗಳಲ್ಲಿ ನಿಧಾನಗತಿ, ಆಗಾಗ ಕೋಪತಾಪಗಳಿಂದ ಸಾಂಸಾರಿಕವಾಗಿ ಸಮಸ್ಯೆಗಳು ತೋರಿಬಂದಾವು. ನಿಯಂತ್ರಿಸಿಕೊಳ್ಳಿರಿ. ವಿದ್ಯಾರ್ಥಿಗಳಿಗೆ ಕಠಿಣ ಪ್ರಯತ್ನದಿಂದಲೇ ಉತ್ತಮ ಫ‌ಲಿತಾಂಶವನ್ನು ಪಡೆಯಬಹುದು. ಶುಭವಿದೆ. ವಿಪರೀತ ದುಶ್ಚಟ, ಸಾಧಾರಣ ಪ್ರಗತಿ, ಸ್ವಯಂಕೃತ್ಯಗಳಿಂದ ನಷ್ಟ, ಆರೋಗ್ಯದಲ್ಲಿ ಏರುಪೇರು, ಹಣಕಾಸು ಮುಗ್ಗಟ್ಟು, ಅಲ್ಪ ಲಾಭ.

ಮೀನರಾಶಿ
ಸಾಂಸಾರಿಕವಾಗಿ ಯಾರಲ್ಲೂ ಹೇಳಲಾಗದಂತಹ ಪರಿಸ್ಥಿತಿ ಕಂಡುಬರಲಿದೆ. ಸರಕಾರಿ ಅಧಿಕಾರಿ ವರ್ಗದವರಿಗೆ ಉತ್ತಮ ಅವಕಾಶಗಳು ಒದಗಿಬರುತ್ತವೆ. ಬಂದ ಅವಕಾಶವನ್ನು ಸದುಪಯೋಗಿಸುವುದು ನಿಮ್ಮ ಕರ್ತವ್ಯವಾಗಿದೆ. ನೌಕರಿಯಲ್ಲಿ ಹೆಚ್ಚಿನ ಜವಾಬ್ದಾರಿ, ಆರೋಗ್ಯದಲ್ಲಿ ವ್ಯತ್ಯಾಸ, ಹಿರಿಯರಿಂದ ಹಿತನುಡಿ, ಅಲ್ಪ ಲಾಭ, ಅಧಿಕ ಖರ್ಚು, ಸ್ತ್ರೀಯರಿಗೆ ಅನುಕೂಲ, ಇಷ್ಟವಾದ ವಸ್ತಗಳ ಖರೀದಿ ಯೋಗ, ಮಾನಸಿಕ ನೆಮ್ಮದಿ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular