ಮಂಗಳವಾರ, ಏಪ್ರಿಲ್ 29, 2025
Homehoroscopeನಿತ್ಯಭವಿಷ್ಯ : 12-05-2020

ನಿತ್ಯಭವಿಷ್ಯ : 12-05-2020

- Advertisement -

ಮೇಷರಾಶಿ
ಅಧಿಕವಾದ ಖರ್ಚು, ಕಾರ್ಯರಂಗದಲ್ಲಿ ಕೆಲವೊಂದು ಗೊಂದಲ ಗಳು ಉದ್ಭವಿಸಲಿವೆ. ಎಲ್ಲವನ್ನೂ ಹೊಂದಾಣಿಕೆಯಿಂದ ಎದುರಿಸಿರಿ. ವೃತ್ತಿರಂಗದಲ್ಲಿ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಿರಿ. ಸಹಾಕರ ಸಿಗಲಿದೆ. ನಂಬಿಕಸ್ಥರಿಂದ ಮೋಸ, ಅಲ್ಪ ಕಾರ್ಯ ಸಿದ್ಧಿ, ಶತ್ರುಗಳ ನಾಶ, ಉದ್ಯೋಗದಲ್ಲಿ ಕಿರಿಕಿರಿ, ಈ ದಿನ ತಾಳ್ಮೆ ಅತ್ಯಗತ್ಯ.

ವೃಷಭರಾಶಿ
ವ್ಯಾಪಾರದಲ್ಲಿ ಅಲ್ಪ ಲಾಭ, ಕುಟುಂಬ ಸೌಖ್ಯ, ಎಲ್ಲರೊಂದಿಗೆ ಒಳ್ಳೆಯ ಬಾಂಧವ್ಯದಿಂದ ಇರುವುದು ಉತ್ತಮ. ಹೆಚ್ಚು ಹೆಚ್ಚು ಆತ್ಮವಿಶ್ವಾಸವನ್ನು ಬೆಳೆಸಿಕೊಂಡಲ್ಲಿ ಉತ್ತಮ ಮುನ್ನಡೆ ಗೋಚರಕ್ಕೆ ಬರಲಿದೆ. ದಿನಾಂತ್ಯ ಅತಿಥಿಗಳ ಆಗಮನವಿದೆ. ಸುಖ ಭೋಜನ ಪ್ರಾಪ್ತಿ, ಬಂಧುಗಳಿಂದ ನಿಂದನೆ, ಆತ್ಮೀಯರಲ್ಲಿ ವೈಮನಸ್ಸು.

ಮಿಥುನರಾಶಿ
ಹೊಸ ಕೆಲಸ ಕಾರ್ಯದಲ್ಲಿ ವಿಶೇಷ ಆಸಕ್ತಿ ಕಂಡುಬರಲಿದೆ. ಹಿತಶತ್ರುಗಳ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿರಿ. ಕೆಲವು ಸಂದರ್ಭಗಳಲ್ಲಿ ಅತೀ ಆತ್ಮವಿಶ್ವಾಸವನ್ನು ಪ್ರದರ್ಶಿಸಲಿರುವಿರಿ. ಜಾಗ್ರತೆ. ಆಸ್ತಿ ವಿಚಾರದಲ್ಲಿ ಕಲಹ, ಸ್ವಯಂಕೃತ ಅಪರಾಧದಿಂದ ನಷ್ಟ, ಮಾನಸಿಕ ವ್ಯಥೆ, ವಾದ-ವಿವಾದಗಳು ಹೆಚ್ಚಾಗುವುದು, ಕೆಲಸ ಕಾರ್ಯಗಳಲ್ಲಿ ಹಿನ್ನಡೆ.

ಕಟಕರಾಶಿ
ಮನೆಯಲ್ಲಿ ಸಂತಸ, ಋಣ ಬಾಧೆ, ಯಾವುದೇ ಸಂದರ್ಭದಲ್ಲಿ ಪಕ್ಷಪಾತಿ ಎಂಬ ಅಪಮಾನ ಬರಬಹುದು. ಜಾಗ್ರತೆ ವಹಿಸುವುದು ಆಪ್ತರು ಬೇಜವಾಬ್ದಾರಿಯಿಂದ ವರ್ತಿಸಿ ನಿಮ್ಮ ಹೆಸರನ್ನು ಕೆಡಿಸಲಿದ್ದಾರೆ. ಖರ್ಚು ವೆಚ್ಚದಿಂದ ಆತಂಕ ಇದೆ. ಕೃಷಿಕರಿಗೆ ಲಾಭ, ಆರೋಗ್ಯದಲ್ಲಿ ವ್ಯತ್ಯಾಸ, ಮನಸ್ಸಿನಲ್ಲಿ ನಾನಾ ರೀತಿಯ ಚಿಂತೆ, ಚಿನ್ನಾಭರಣ-ಹಣ ನಷ್ಟ ಸಾಧ್ಯತೆ.

ಸಿಂಹರಾಶಿ
ಮಕ್ಕಳಿಂದ ನೋವು, ಮನಸ್ಸಿಗೆ ಬೇಸರ, ಸಾಲ ಬಾಧೆ, ಸಾಮಾಜಿಕ ಕೆಲಸ ಕಾರ್ಯಗಳಿಂದ ದೂರವಿದ್ದಷ್ಟೂ ಉತ್ತಮ. ಕೌಟುಂಬಿಕ ಸಂಬಂಧಗಳು ನೀವು ನಿರೀಕ್ಷಿಸಿದಂತೆ ಸಾಗಲಾರದು. ಬಾಂಧವ್ಯ ಕೆಡಬಹುದು. ಎನಿದ್ದರೂ ಇದು ತಾತ್ಕಾಲಿಕ ಪರಿಸ್ಥಿತಿ. ವಿದ್ಯಾರ್ಥಿಗಳಿಗೆ ಹಿನ್ನಡೆ, ಕುಟುಂಬದಲ್ಲಿ ಪ್ರೀತಿ, ಆಕಸ್ಮಿಕ ಧನವ್ಯಯ.

ಕನ್ಯಾರಾಶಿ
ಆರೋಗ್ಯದ ಕಡೆ ಗಮನಹರಿಸಿ, ವೃತ್ತಿರಂಗದಲ್ಲಿ ಮೇಲಧಿಕಾರಿಗಳೊಂದಿಗೆ ಜಟಾಪಟಿ ನಡೆಯಲಿದೆ. ಮಿತಿಮೀರಿದ ಖರ್ಚುಗಳಿಂದ ಅನಾವಶ್ಯಕ ತೊಂದರೆಗೆ ಒಳಗಾಗುವಿರಿ. ದುಸ್ಸಾಹಸದಿಂದ ಹಾನಿಯೇ ಹೆಚ್ಚಾದೀತು. ಜಾಗ್ರತೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಿರಿ, ಹಿರಿಯರಲ್ಲಿ ಶ್ರದ್ಧೆ ವಿನಯತೆ, ಕೆಲಸ ಕಾರ್ಯಗಳಲ್ಲಿ ಅಲ್ಪ ಮುನ್ನಡೆ, ಹಣಕಾಸು ಪರಿಸ್ಥಿತಿ ಚೇತರಿಕೆ.

ತುಲಾರಾಶಿ
ತೃಪ್ತಿಕರವಾದ ದಿನಗಳಿವು. ಕಾರ್ಯಕ್ಷೇತ್ರದಲ್ಲಿ ಮುನ್ನಡೆ, ಯಶಸ್ಸು ದೊರಕಲಿದೆ. ಮುಖ್ಯವಾಗಿ ಮಾನಸಿಕ ಭಾವನೆಗಳನ್ನು ನಿಯಂತ್ರಿಸಿಕೊಳ್ಳಿರಿ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸುವುದು. ಮಿತ್ರರಿಂದ ಸಲಹೆ, ವಾಸಗೃಹದಲ್ಲಿ ತೊಂದರೆ, ತಾಳ್ಮೆ ವಹಿಸುವುದು ಉತ್ತಮ, ಸಣ್ಣ ಪುಟ್ಟ ವಿಚಾರಗಳಿಂದ ಕಿರಿಕಿರಿ, ಅನಗತ್ಯ ಮನಃಸ್ತಾಪ, ಯೋಚಿಸಿ ನಿರ್ಧಾರ ಕೈಗೊಳ್ಳಿ.

ವೃಶ್ಚಿಕರಾಶಿ
ಯಾರನ್ನೂ ಹೆಚ್ಚು ನಂಬಬೇಡಿ, ಶೀತ ಸಂಬಂಧಿತ ರೋಗ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಹಣಕಾಸು ನಷ್ಟ, ಕಾರ್ಯಕ್ಷೇತ್ರದಲ್ಲಿ ಕೆಲಸದ ಒತ್ತಡ ಹೆಚ್ಚಾದರೂ ನಿಮ್ಮ ಕಠಿಣ ದುಡಿಮೆಗೆ ತಕ್ಕ ಪ್ರತಿಫ‌ಲ ದೊರಕಲಿದೆ. ಕೌಟುಂಬಿಕವಾಗಿ ಸಂತಸದ ದಿನಗಳಿವು. ಕಾರ್ಯ ಒತ್ತಡಗಳು ದೇಹಾರೋಗ್ಯಕ್ಕೆ ಸಮಸ್ಯೆ ತಂದೀತು. ಆತ್ಮೀಯರಲ್ಲಿ ಮನಃಸ್ತಾಪ, ಅಕಾಲ ಭೋಜನ.

ಧನಸ್ಸುರಾಶಿ
ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಅನಿರೀಕ್ಷಿತ ವರ್ತನೆ ಮೂಲಕ ಇತರರಲ್ಲಿ ಅಸಹನೆ ಮೂಡಿಸಲಿದ್ದೀರಿ. ಯಾರ ಮಾತಿಗೂ ಕಿವಿಗೊಡುವುದಿಲ್ಲ. ಶಾಂತಿ ಸಮಾಧಾನವನ್ನು ಕಾಯ್ದುಕೊಳ್ಳಿರಿ. ಆರ್ಥಿಕವಾಗಿ ಖರ್ಚುವೆಚ್ಚದಲ್ಲಿ ಹಿಡಿತವಿರಲಿ. ವಿಚಾರಗಳ ಬಗ್ಗೆ ಚರ್ಚೆ ಮಾಡುವಿರಿ, ಮಾನಸಿಕ ವೇದನೆ, ಮನೆಯಲ್ಲಿ ಗೊಂದಲದ ವಾತಾವರಣ, ಮನಸ್ಸಿನಲ್ಲಿ ಆತಂಕ.

ಮಕರರಾಶಿ
ಆತುರ ಸ್ವಭಾವ, ಭವಿಷ್ಯದ ಆಲೋಚನೆ, ಸಾಂಸಾರಿಕ ಸಂಬಂಧಗಳು ಸುಗಮವಾಗಿ ಸಾಗಲಿವೆ. ಆರ್ಥಿಕ ವಿಚಾರದಲ್ಲಿ ನಿಯಂತ್ರಣವಿರಲಿ. ಸಣ್ಣ ಪ್ರಯಾಣ ಸಂಭವ. ದಿನಾಂತ್ಯದಲ್ಲಿ ಶುಭ ಸಮಾಚಾರ ಸಂತಸ ತಂದೀತು. ಆರೋಗ್ಯ ಸುಧಾರಣೆ. ಅಧಿಕವಾದ ಖರ್ಚು, ಮಾತಿನ ಮೇಲೆ ಹಿಡಿತ ಅಗತ್ಯ, ಕೆಲಸದಲ್ಲಿ ಅಧಿಕ ಒತ್ತಡ.

ಕುಂಭರಾಶಿ
ಅನ್ಯ ಜನರಲ್ಲಿ ವೈಮನಸ್ಸು, ಯತ್ನ ಕಾರ್ಯಗಳಲ್ಲಿ ವಿಳಂಬ, ಅನಿರೀಕ್ಷಿತ ಘಟನೆಗಳನ್ನು ಅವಗಣಿಸದಿರಿ. ನಿಮ್ಮ ಬದುಕಿನ ಮೇಲೆ ಪರಿಣಾಮ ಬೀರಲಿದೆ ಹಾಗೂ ನಿಮ್ಮಿಂದ ಪ್ರಮಾದವಾಗುವ ಸಾಧ್ಯತೆ ಇದೆ. ಆರ್ಥಿಕವಾಗಿ ಏರುಪೇರು ಸಂಭವಿಸೀತು. ಉತ್ತಮ ಬುದ್ಧಿಶಕ್ತಿ, ಆರೋಗ್ಯದಲ್ಲಿ ವ್ಯತ್ಯಾಸ, ಸಮಾಧಾನವಾಗಿರುವುದು ಉತ್ತಮ.

ಮೀನರಾಶಿ
ಅನ್ಯರಿಗೆ ಉಪಕಾರ ಮಾಡುವಿರಿ, ತೃಪ್ತಿಕರವಾದ ದಿನಗಳಿವು. ಸಂಬಂಧದಲ್ಲಿ ಮಹತ್ವದ ಬೆಳವಣಿಗೆ ಕಂಡುಬರಲಿದೆ. ಮನಸ್ಸಿನ ಭಾವನೆಗಳನ್ನು ನಿಯಂತ್ರಿಸಿಕೊಳ್ಳಿರಿ. ನಿಮ್ಮ ಸಾಮರ್ಥ್ಯವನ್ನು ತೋರಿಸಿಕೊಡುವ ಸಮಯವಿದು. ಶತ್ರುಗಳ ಬಾಧೆ, ವ್ಯಾಪಾರದಲ್ಲಿ ಲಾಭ, ದಾಂಪತ್ಯದಲ್ಲಿ ವಿರಸ, ಆರೋಗ್ಯದಲ್ಲಿ ವಿಪರೀತ ತೊಂದರೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular