ವಂದೆ ಭಾರತ್ ಮಿಷನ್ : ಇಂದು ದುಬೈ, ಸಿಂಗಾಪುರದಿಂದ ಬರ್ತಾರೆ ಕನ್ನಡಗಿಗರು

0

ಬೆಂಗಳೂರು : ಲಾಕ್​ಡೌನ್​ ಹಿನ್ನೆಲೆಯಲ್ಲಿ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ದೇಶಕ್ಕೆ ಕರೆತರುವ ನಿಟ್ಟಿನಲ್ಲಿ ವಂದೇ ಭಾರತ್ ಮಿಷನ್​ನಡಿ ವಾಪಾಸ್ ಕರೆತರಲಾಗುತ್ತಿದೆ. ಇಂದೂ ಕೂಡ 2 ವಿಮಾನಗಳು ಭಾರತಕ್ಕೆ ಮರಳಲಿದ್ದು, ಕನ್ನಡಿಗರು ಮಂಗಳೂರು ಹಾಗೂ ಬೆಂಗಳೂರಿಗೆ ವಾಪಾಸಾಗಲಿದ್ದಾರೆ.

ಮೊದಲ ಹಂತದ ಕಾರ್ಯಾಚರಣೆ ಈಗಾಗಲೇ ಆರಂಭವಾಗಿದ್ದು ಮೇ 13ಕ್ಕೆ ಮುಕ್ತಾಯವಾಗಲಿದೆ. ಇದರ ಭಾಗವಾಗಿಯೇ ವಿದೇಶದಲ್ಲಿರುವ ಭಾರತೀಯನ್ನು ಹೊತ್ತ ವಿಮಾನಗಳು ಸ್ವದೇಶಕ್ಕೆ ಮರಳುತ್ತಿವೆ. ಈ ಹಿಂದೆ ನಿಗದಿಯಾಗಿದ್ದಂತೆ ದುಬೈನಿಂದ ಮೇ 14ರಂದು ಬರಬೇಕಿದ್ದ ವಿಮಾನ ಎರಡು ದಿನಗಳ ಮುಂಚಿತವಾಗಿ ಆಗಮಿಸಲಿದೆ.

ಇಂದು ಸಂಜೆ 5.30ಕ್ಕೆ ದುಬೈನಿಂದ ವಿಶೇಷ ವಿಮಾನ ಮಂಗಳೂರಿಗೆ ಆಗಮಿಸಿದ್ರೆ, ಸಿಂಗಾಪುರದಿಂದ ರಾತ್ರಿ 9 ಗಂಟೆಗೆ ಇನ್ನೊಂದು ವಿಮಾನ ಬೆಂಗಳೂರಿಗೆ ಬರಲಿದೆ. ಅಹಮದಾಬಾದ್​, ಹೈದರಾಬಾದ್, ಮುಂಬೈ, ದೆಹಲಿ, ಶ್ರೀನಗರ, ಕೊಚ್ಚಿ, ಚೆನ್ನೈ, ಕಣ್ಣೂರು ವಿಮಾನ ನಿಲ್ದಾಣಗಳಿಗೆ ಈಗಾಗಲೇ ವಿದೇಶದಲ್ಲಿರುವ ಭಾರತೀಯರು ಬಂದಿಳಿಯಲಿದ್ದಾರೆ.

ಈಗಾಗಲೇ ಇಂಗ್ಲೆಂಡ್​ನಿಂದ 250 ಕನ್ನಡಿಗರು ಬೆಂಗಳೂರಿಗೆ ಬಂದಿಳಿದಿದ್ದಾರೆ. ಅವರಿಗೆ ಉಳಿದುಕೊಳ್ಳಲು ಹೋಟೆಲ್, ರೆಸಾರ್ಟ್​ಗಳನ್ನು ಬುಕ್ ಮಾಡಲಾಗಿದೆ. ಮೇ 13ಕ್ಕೆ ವಂದೇ ಭಾರತ್​ ಮಿಷನ್​ನ ಮೊದಲ ಹಂತ ಮುಕ್ತಾಯವಾಗಲಿದೆ. ಮೇ 15ರಿಂದ 2ನೇ ಹಂತದ ಕಾರ್ಯಾಚರಣೆ ಆರಂಭವಾಗಲಿದೆ.

Leave A Reply

Your email address will not be published.