ಸೋಮವಾರ, ಏಪ್ರಿಲ್ 28, 2025
Homehoroscopeನಿತ್ಯ ಭವಿಷ್ಯ : 20-09-2020

ನಿತ್ಯ ಭವಿಷ್ಯ : 20-09-2020

- Advertisement -

ಮೇಷರಾಶಿ

ಯತ್ನ ಕಾರ್ಯ ಭಂಗ, ಮನಕ್ಲೇಷ, ಅಗ್ನಿಯಿಂದ ಭೀತಿ, ರೈತಾಪಿ ಜನರಿಗೆ ಬೆಳೆ ಕೊಯ್ಲುವಿನ ಸಮಯದಲ್ಲಿ ಈ ತರಹ ಮಳೆ ಹಾಗೂ ಬಿಸಿಲು ಸಮಸ್ಯೆಗಳನ್ನು ತಂದೊಡ್ಡಲಿದೆ. ಆರ್ಥಿಕವಾಗಿ ಉನ್ನತ ಅಭಿವೃದ್ಧಿ ಇದ್ದರೂ ಮನಸ್ಸಿಗೆ ಸಮಾಧಾನವಿಲ್ಲ. ಕೋರ್ಟ್ ಗೆ ಅಲೆದಾಟ, ವಾಹನ ಅಪಘಾತ, ಬಂಧು ಮಿತ್ರರಲ್ಲಿ ಕಲಹ.

ವೃಷಭರಾಶಿ

ಆದಾಯಕ್ಕಿಂತ ಖರ್ಚು ಜಾಸ್ತಿ, ಕುಟುಂಬದಲ್ಲಿ ಕಲಹ, ನಿಮ್ಮ ಮಿತ್ರರು ನಿಮ್ಮ ಸಹಾಯಕ್ಕೆ ಬೆನ್ನೆಲುಬು ಆಗಿ ನಿಂತಾರು. ಕಾರ್ಯರಂಗದಲ್ಲಿ ಉತ್ತಮ ಅಭಿವೃದ್ಧಿ ಇದ್ದರೂ ಮನಸ್ಸಿಗೆ ಬಿಡುವಿರದ ಕೆಲಸ. ಬಿಟ್ಟು ಬಿಟ್ಟು ಬರುವ ಮಳೆಯಿಂದ ಕಿರಿಕಿರಿ ಇದ್ದೀತು, ಅಧಿಕ ತಿರುಗಾಟ ಅನಾರೋಗ್ಯ, ಅಭ್ಯಾಸದಲ್ಲಿ ತೊಂದರೆ, ಋಣಭಾದೆ, ದೂರ ಪ್ರಯಾಣ, ಶತ್ರು ಭಾದೆ

ಮಿಥುನರಾಶಿ

ಅಧಿಕಾರಿಗಳಲ್ಲಿ ಕಲಹ, ಸಲ್ಲದ ಅಪವಾದ, ರಾಜಕೀಯ ದಲ್ಲಿರುವ ವ್ಯಕ್ತಿಗಳಿಗೆ ಒಳ್ಳೆಯ ದಿನಗಳಿವು. ಅಭಿವೃದ್ಧಿಯ ಹಂತಕ್ಕೆ ಮೇಲಕ್ಕೇರುತ್ತಾ ಇದ್ದೀರಾ. ಆದರೂ ಜಾಗ್ರತೆಯಿಂದ ಮುಂದುವರಿಯುವುದು ಅಗತ್ಯ. ಆತ್ಮೀಯರೊಬ್ಬರಿಂದ ಸಹಾಯಹಸ್ತ. ದುಃಖದಾಯಕ ಪ್ರಸಂಗಗಳು, ಸಾಲಭಾದೆ, ನಂಬಿದ ಜನರಿಂದ ಅಶಾಂತಿ, ಮಾತಾಪಿತರಲ್ಲಿ ದ್ವೇಷ.

ಕಟಕರಾಶಿ

ಆರೋಗ್ಯದಲ್ಲಿ ವೃದ್ಧಿ, ಕಾರ್ಯಬಾಹುಳ್ಯದಿಂದ ಅಧಿಕ ಒತ್ತಡವು ಕಂಡುಬಂದೀತು. ಜನಪರ ಕೆಲಸ ಕಾರ್ಯಗಳಿಂದ ಉತ್ತಮ ಹೆಸರು ಗಳಿಕೆಯ ಸಾಧ್ಯತೆ ಇರುತ್ತದೆ. ಆಧ್ಯಾತ್ಮಿಕದಲ್ಲಿ ಬಹು ಅಭಿರುಚಿ ತೋರಿಬಂದು ಸಮಾಧಾನ. ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ವಾಹನ ಖರೀದಿ ಯೋಗ, ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಎಚ್ಚರ, ಕೃಷಿಯಲ್ಲಿ ನಷ್ಟ, ಅಧಿಕ ತಿರುಗಾಟ.

ಸಿಂಹರಾಶಿ

ಮಿತ್ರರಿಂದ ತೊಂದರೆ, ಮನಸ್ತಾಪ, ಧನಹಾನಿ ಕಷ್ಟದ ಮೇಲೆ ಕಷ್ಟ ಬಂದೊದಗಿದರೂ ನಿಮಗೆ ಉತ್ತಮ ದೈವಾನುಗ್ರಹವಿರುವುದು. ಅದರಿಂದ ಪಾರಾಗುವಿರಿ. ಶೀತ, ಕಫ‌ ಬಾಧೆಯಿಂದ ವೈದ್ಯರ ಭೇಟಿಯ ಸಾಧ್ಯತೆ ಇರುತ್ತದೆ. ಇದ್ದುದರಲ್ಲೇ ತೃಪ್ತಿ ಪಡೆಯಿರಿ. ಪತ್ನಿಗೆ ಅನಾರೋಗ್ಯ, ಇಲ್ಲಸಲ್ಲದ ತಕರಾರು, ಉದ್ಯೋಗದಲ್ಲಿ ಬದಲಾವಣೆ, ಶತ್ರುಗಳಿಂದ ತೊಂದರೆ.

ಕನ್ಯಾರಾಶಿ

ಉನ್ನತ ಸ್ಥಾನಮಾನದ ಉದ್ಯೋಗ ಪ್ರಾಪ್ತಿ, ನಾನಾ ರೀತಿಯ ಸಂಪಾದನೆ, ದ್ರವ್ಯಲಾಭ, ವೃತ್ತಿರಂಗದಲ್ಲೂ ಆರ್ಥಿಕ ರಂಗದಲ್ಲೂ ಅಭಿವೃದ್ಧಿದಾಯಕ ಬೆಳವಣಿಗೆ ಇರುತ್ತದೆ. ಕೃಷಿಕರಿಗೆ ಸ್ವಲ್ಪ ಸಮಾಧಾನಕರ ದಿನಗಳಿವು. ಮನೆಯ ಪರಿಸರದ ವ್ಯಕ್ತಿಗಳೊಂದಿಗೆ ಆತ್ಮೀಯ ಮಿಲನದಿಂದ ಸಂತೋಷ. ಪರರ ಧನ ಪ್ರಾಪ್ತಿ, ಧೈರ್ಯದಿಂದ ಎಲ್ಲಾ ಕೆಲಸಗಳಲ್ಲಿ ಮುನ್ನುಗ್ಗುವಿರಿ, ಭಾಗ್ಯ ವೃದ್ಧಿ.

ತುಲಾರಾಶಿ

ದಾರಿದ್ರ್ಯ, ಪರರಿಗೆ ವಂಚಿಸುವುದು, ಋಣಭಾದೆ, ಕಲಾರಂಗದಲ್ಲಿರುವವರಿಗೆ ಒಳ್ಳೆಯ ಪ್ರೋತ್ಸಾಹ ಹಾಗೂ ಬಹುಮಾನ ದೊರಕೀತು. ಮಾತಿನಲ್ಲಿ ಒಳ್ಳೆಯ ಹಿಡಿತ ಸಾಧಿಸಿರುವ ನಿಮಗೆ ಎಲ್ಲರನ್ನೂ ಆಕರ್ಷಿಸುವ ಕಲೆಗಾರಿಕೆ ಗೊತ್ತಿರುತ್ತದೆ. ಕಿರು ಸಂಚಾರವಿದ್ದೀತು. ಶುಭವಾರ್ತೆ ಕೇಳುವಿರಿ, ನೀಚ ಜನರ ಸಹವಾಸ, ಗುರು ಹಿರಿಯರಲ್ಲಿ ಭಕ್ತಿ, ತೀರ್ಥಯಾತ್ರೆ

ವೃಶ್ಚಿಕರಾಶಿ

ದ್ರವ್ಯನಾಶ, ಚರ್ಮವ್ಯಾಧಿ, ಅಧಿಕ ಖರ್ಚು, ಅಪಕೀರ್ತಿ, ದಾಯಾದಿ ಕಲಹ, ವ್ಯಾಸಂಗದಲ್ಲಿ ತೊಂದರೆ, ಜನರಿಂದ ಒಳ್ಳೆಯ ಪ್ರೋತ್ಸಾಹದ ಹಾಗೂ ಮನ್ನಣೆಯ ಮಾತುಗಳನ್ನು ಕೇಳುವಿರಿ. ಸೌಮ್ಯ ಸ್ವಭಾವದವರಾದ ನಿಮಗೆ ಮಾತು ಕಡಿಮೆ ಆದರೂ ನಡವಳಿಕೆಯಿಂದ ಮೆಚ್ಚುಗೆ ಸಿಗಲಿದೆ. ಉದಾರತೆ ಬಗ್ಗೆ ಜಾಗ್ರತೆ. ಸೇವಕರಿಂದ ತೊಂದರೆ, ವಾಹನ ರಿಪೇರಿಯಿಂದ ಅಧಿಕ ಖರ್ಚು.

ಧನಸ್ಸುರಾಶಿ

ದ್ರವ್ಯಲಾಭ, ಆಕರ್ಷಕ ವ್ಯಕ್ತಿತ್ವದ ನೀವು ಗಜ ಗಾಂಭೀರ್ಯ ದವರಾಗಿರುತ್ತೀರಿ. ಪತ್ನಿಯ ಸಂಬಂಧಿಕರೊಬ್ಬರ ಭೇಟಿ, ನೆಂಟರಿಷ್ಟರ ಆಗಮನದಿಂದ ಮನೆಯಲ್ಲಿ ಸಂತಸ. ಕುಲದೇವತಾ ಭೇಟಿಯ ಸಂದರ್ಭ ಒದಗಿಬಂದೀತು. ಆರೋಗ್ಯ ವೃದ್ಧಿ, ಉದ್ಯೋಗದಲ್ಲಿ ಬಡ್ತಿ, ಇಷ್ಟಾರ್ಥ ಸಿದ್ಧಿ, ಮಂಗಳ ಕಾರ್ಯಗಳಲ್ಲಿ ಭಾಗಿ, ಸುಖ ಭೋಜನ.

ಮಕರರಾಶಿ

ವಸ್ತ್ರ ಖರೀದಿ, ಅನೇಕ ಜನರಿಗೆ ವಿವಾಹಯೋಗ, ಆಧ್ಯಾತ್ಮಿಕದತ್ತ ಒಲವು ಹರಿದೀತು. ಮಕ್ಕಳಿಗೂ ಅಧ್ಯಾತ್ಮದ ಅಭಿರುಚಿ ಇರುತ್ತದೆ. ಕಲೆ, ಗುಡಿಕೈಗಾರಿಕಾ ವೃತ್ತಿಯವರಿಗೆ ಉತ್ತಮ ಪ್ರೋತ್ಸಾಹ ದೊರಕಲಿದೆ. ಸರಕಾರೀ ವೃತ್ತಿಯವರಿಗೆ ಪ್ರೋತ್ಸಾಹದಾಯಕ ಅಭಿವೃದ್ಧಿ, ಸ್ತ್ರೀಯಿಂದ ಲಾಭ, ಮನೆ ಕಟ್ಟುವ ಯೋಗ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ಕೈ ಹಾಕಿದ ಕೆಲಸಗಳಲ್ಲಿ ಮುನ್ನಡೆ.

ಕುಂಭರಾಶಿ

ಕುಟುಂಬದಲ್ಲಿ ಅಹಿತಕರ ವಾತಾವರಣ, ನೆರೆಹೊರೆಯವರೊಡನೆ ಸ್ವಲ್ಪ ಜಟಾಪಟಿ ಕಂಡುಬಂದೀತು. ಕುಟುಂಬದಲ್ಲಿ ಮಂಗಲ ಕಾರ್ಯದ ಸಂಭ್ರಮ. ಹಿರಿಯರೊಡನೆ ಆತ್ಮೀಯ ಸಂಬಂಧ. ಕುಲವೃತ್ತಿಯಲ್ಲಿ ಅಭಿವೃದ್ಧಿ ತೋರಿ ಬರುವುದು. ಶುಭವಿದೆ. ದೂರ ಪ್ರಯಾಣ, ಹಿತಶತ್ರುಗಳಿಂದ ತೊಂದರೆ, ಮನಸ್ತಾಪ ಯಾರನ್ನು ನಂಬಬೇಡಿ.

ಮೀನರಾಶಿ

ವಿರೋಧಿಗಳಿಂದ ತೊಂದರೆ, ಹಣದ ಸಮಸ್ಯೆ,ಗೃಹ ಖರೀದಿಯ ಸಂಭವವು ತೋರಿಬಂದೀತು. ಜನರೊಡನೆ ಮುಕ್ತವಾಗಿ ಬೆರೆಯುವ ಗುಣ ಜನರನ್ನು ನಿಮ್ಮತ್ತ ಆಕರ್ಷಿಸಲಿದೆ. ಮಂಗಲ ಕಾರ್ಯದ ಬಗ್ಗೆ ಆಲೋಚಿಸಿದರೆ ಉತ್ತಮ. ಒಳ್ಳೆಯ ಸಮಯವಾಗಿದೆ. ದಾಂಪತ್ಯದಲ್ಲಿ ಕಲಹ ಅನಾರೋಗ್ಯ, ಕೃಷಿಯಲ್ಲಿ ನಷ್ಟ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular