ಮಂಗಳವಾರ, ಏಪ್ರಿಲ್ 29, 2025
Homehoroscopeನಿತ್ಯಭವಿಷ್ಯ : ಶ್ರೀ ರವಿಶಂಕರ ಗುರೂಜಿ ( 20-10-2020)

ನಿತ್ಯಭವಿಷ್ಯ : ಶ್ರೀ ರವಿಶಂಕರ ಗುರೂಜಿ ( 20-10-2020)

- Advertisement -

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್ ಋತು, ಮಿಸ್ ಆಶ್ವಯುಜ ಮಾಸೆ, ಕೃಷ್ಣ ಪಕ್ಷದ ಚತುರ್ಥಿ ತಿಥಿ, ಅನುರಾಧ ನಕ್ಷತ್ರ, ಸೌಭಾಗ್ಯ ಯೋಗ, ಭದ್ರಂಕ್ ಕರಣ, ಅಕ್ಟೋಬರ್ 20 , ಮಂಗಳವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು ಅಮೃತ ಕಾಲ ಸಂಜೆ 6 ಗಂಟೆ 1 ನಿಮಿಷದಿಂದ 7 ಗಂಟೆ 30 ನಿಮಿಷದವರೆಗೂ ಇದೆ.

ಇಂದು ಜಗನ್ಮಾತೆಯನ್ನು ಕೂಷ್ಮಾಂಡ ರೂಪದಲ್ಲಿ ಪೂಜೆ ಮಾಡುವ ಅದ್ಭುತವಾದ ದಿನ. ಈ ದೇವಿಗೆ 8 ಭುಜಗಳು ಇರುವುದರಿಂದ ಅಷ್ಟಭುಜಾದೇವಿ ಎಂದೂ ಕೂಡ ಕರೆಯಲಾಗುತ್ತದೆ. ಕೂಷ್ಮಾಂಡ ದೇವಿಯನ್ನು ಈ ಜಗತ್ತಿನ ಸೃಷ್ಟಿಕರ್ತೆ ಎಂದು ಕೂಡ ಹೇಳಲಾಗುತ್ತದೆ. ಸೃಷ್ಟಿಯ ಅಸ್ತಿತ್ವವೇ ಇಲ್ಲದಿದ್ದಾಗ ಎಲ್ಲೆಡೆ ಕತ್ತಲೆ, ಮಾಯೆ ತುಂಬಿಕೊಂಡಿದ್ದಾಗ ಅಂತಹ ಸಂದರ್ಭದಲ್ಲಿ ಈ ದೇವಿಯು ತನ್ನ ತಪಶಕ್ತಿಯಿಂದ ಬ್ರಹ್ಮಾಂಡವನ್ನು ಸೃಷ್ಟಿಸುತ್ತಾರೆ. ಅಂಧಕಾರವನ್ನು ತೊಲಗಿಸಲು ಸೃಷ್ಟಿಯಾದ ಅವತಾರವೇ ಕೂಷ್ಮಾಂಡ ಅವತಾರ.

ತಾಯಿ ಸ್ವರೂಪವಾದ ಬೂದು ಕುಂಬಳ ಕಾಯಿಗೆ ಅರಿಶಿನ ಕುಂಕುಮವನ್ನು ಇಟ್ಟು ಕಪ್ಪು ದಾರದಲ್ಲಿ ಕಟ್ಟಿ ಮಾಟ ಮಂತ್ರ ತಂತ್ರಪ್ರಯೋಗ ಎಂದು ಬಳಲುತ್ತಿರುವವರಿಗೆ ಮನೆಯ ಮುಂದೆ ಕಟ್ಟಿಸಲಾಗುತ್ತದೆ. ಅದರಲ್ಲೂ ನವರಾತ್ರಿಯ ಸಂದರ್ಭದಲ್ಲಿ ಈ ಪರಿಭ್ರಮಣೆಯ ಭ್ರಮೆಯ ಚಿಂತೆಯಲ್ಲಿ ಬಳಲುತ್ತಿರುವವರಿಗೆ ಇದು ಒಳ್ಳೆಯ ಸುಸಮಯ. ನಮ್ಮಲ್ಲಿ ಕೆಟ್ಟತನದ ಚಿಂತನೆಗಳು ತೊಲಗಿ ಒಳ್ಳೆಯ ಚಿಂತನೆಗಳು ಹೆಚ್ಚಾಗಲಿ ಎಂದು ಇಂದು ಕೂಷ್ಮಾಂಡ ದೇವಿಯನ್ನು ಪೂಜಿಸಿ. ಇಂದು ಸಂಧ್ಯಾ ಕಾಲದಲ್ಲಿ ಒಂದು ಬೂದು ಕುಂಬಳ ಕಾಯಿಯನ್ನು ತಂದು ಮನೆಗೆ ದೃಷ್ಟಿ ತೆಗೆದು ಹೊಡೆಯಿರಿ ಒಳ್ಳೆಯದಾಗುತ್ತದೆ. ಫಸಲಿನ ಹೊರಗಡೆ ಒಂದು ಬೂದುಗುಂಬಳಕಾಯಿಯನ್ನು ಕಟ್ಟಿ. ಜೊತೆಗೆ ನವರಾತ್ರಿ ಮುಗಿಯುವುದರ ಒಳಗೆ ಅಷ್ಟ ದಿಗ್ಬಂಧನವನ್ನು ಕಟ್ಟಿ ಮನೆಗೆ ಒಳ್ಳೆಯದಾಗುತ್ತದೆ.

ಐದರ ಬಳಿ ಯಾವಾಗಲೂ ಎಚ್ಚರಿಕೆಯಿಂದ ಇರಬೇಕು. ದೇಹವನ್ನು ಕೊಟ್ಟಂತ ತಾಯಿಗೆ, ದೇಹದೊಳಗೆ ಆತ್ಮವನ್ನು ಶಕ್ತಿಯನ್ನು ತುಂಬಿಸಿದವರು ತಂದೆ, ನಮ್ಮ ಜ್ಞಾನದ ಶಿಖರ ವೇನು ಎಂಬುದನ್ನು ತೋರಿಸುವ ಗುರುವಿಗೆ ಅಪಮಾನವನ್ನು ಮಾಡಬಾರದು, ಇನ್ನು ಬಹು ವಿಶೇಷವಾಗಿ ಬೆಂಕಿಯ ಬಳಿ ತುಂಬಾ ಎಚ್ಚರಿಕೆಯಿಂದ ಇರಬೇಕು. ಹಾಗೆ ನಾವು ಕೂಡ ಒಂದು ಬೆಂಕಿಯೆ, ನಾವು ಸರಿಯಾದ ಮಾರ್ಗದಲ್ಲಿ ಹೋಗದಿದ್ದರೆ ಅದು ನಮ್ಮನ್ನೇ ಸುಟ್ಟಿ ಹಾಕುತ್ತದೆ. ಅದು ಕುಟುಂಬವನ್ನೇ ಸುಟ್ಟು ಹಾಕುತ್ತದೆ. ಆದ್ದರಿಂದ ತಪ್ಪಾದ ಹೆಜ್ಜೆ ತಪ್ಪಾದ ಮಾರ್ಗದಲ್ಲಿ ನಡೆಯಬಾರದು. ನಿಮ್ಮ ರಾಶಿ ಫಲದ ಬಗ್ಗೆ ಮಾಹಿತಿ ಹೀಗಿದೆ :

ಮೇಷ ರಾಶಿ
ಚೆನ್ನಾಗಿದೆ ದಿನದ ಆರಂಭ ವಿಘ್ನ ಗಳಿಂದಾಗಿ ನಿಧಾನವಾದರೂ ದೇವಿಯ ಮಹಾತ್ಮೆ ಯಿಂದ ದಿನದ ಮುಂದುವರಿದ ಭಾಗದಲ್ಲಿ ಲಾಭಾಂಶ ದೊರೆಯುತ್ತದೆ, ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ.

ವೃಷಭ ರಾಶಿ
ಚೆನ್ನಾಗಿದೆ ಚಂದ್ರ ಶನಿ ಸಾರದಲ್ಲಿದ್ದು ಶನಿ ಭಾಗ್ಯ ಸ್ಥಾನದಲ್ಲಿರುವುದರಿಂದ ಸರಕಾರಿ ಮಟ್ಟದ ಕೆಲಸ ಕಾರ್ಯಗಳಲ್ಲಿ ಪ್ರಗತಿ.

ಮಿಥುನ ರಾಶಿ
ಸ್ವಲ್ಪ ತೊಳಲಾಟ ಗಾಬರಿಯಾದರೂ ಕೂಡ ಒಡಹುಟ್ಟಿದವರ ಹಿರಿಯರ ಸಹಕಾರ ದೊರೆಯುತ್ತದೆ.

ಕರ್ಕಾಟಕ ರಾಶಿ
ವಿಪರೀತವಾದ ಲೆಕ್ಕಾಚಾರ ಮಾಡಲು ಹೋಗಬೇಡಿ .

ಸಿಂಹ ರಾಶಿ
ಶತ್ರು ಧ್ವಂಸ ಯಾವುದೇ ಕಾರ್ಯವನ್ನು ದಿಟ್ಟತನದಿಂದ ಗೆದ್ದುಕೊಂಡು ಬರುತ್ತೀರಾ.

ಕನ್ಯಾ ರಾಶಿ
ಪಂಚಮ ಶನಿಯ ದೋಷ ಇರುವುದರಿಂದ ಇವರು ಯಾವಾಗಲೂ ಹನುಮಾನ್ ಚಾಲೀಸ್ ಉಪಾಸನೆ ಮಾಡಿ, ದೇವಿಯ ಉಪಾಸನೆ ಮಾಡಿ ,

ತುಲಾ ರಾಶಿ
ಅರ್ಧಾಷ್ಟಮ ಶನಿಯ ಪ್ರಭಾವ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೋಗಬೇಡಿ ಅನುಭವಸ್ಥರ ಮಾತುಗಳನ್ನು ಕೇಳಿ.

ವೃಶ್ಚಿಕ ರಾಶಿ
ಸ್ವಲ್ಪ ನಿದ್ರಾ ಪ್ರಭಾವವಿರುತ್ತದೆ ಬ್ರಾಹ್ಮಿಯ ಸಮಯದಲ್ಲಿ ಇಲ್ಲವೇ ಸಂಧ್ಯಾಕಾಲದಲ್ಲಿ ದೇವಿಯ ಪೂಜೆ ಮಾಡಿಕೊಳ್ಳಿ ಅವರ ಹತ್ತಿರದ ಅಮ್ಮನವರ ದೇವಸ್ಥಾನದಲ್ಲಿ ಹೋಗಿ ಬೋಧಕ ಮೂಲಕ ಈ ದೀಪವನ್ನು ಹಚ್ಚಿ ಬನ್ನಿ. ಮಾಡದ ತಪ್ಪಿಗೆ ಆಪಾದನೆ ಮಾಡುವ ದುಷ್ಟ ಕ್ರಿಮಿಗಳು ಹುಟ್ಟಿಕೊಳ್ಳುತ್ತಿವೆ ಎಚ್ಚರಿಕೆ.

ಧನಸ್ಸು ರಾಶಿ
ದುರಭ್ಯಾಸಗಳ ಚಟಗಳಿದ್ದರೆ ಎಚ್ಚರಿಕೆ. ಒಂಬತ್ತು ದಿನಗಳ ಕಾಲ ಆದಷ್ಟು ದೂರವೇ ಇರಿ .

ಮಕರ ರಾಶಿ
ಚಂದ್ರ ನಿಮ್ಮ ಮನೆಯಲ್ಲಿದ್ದು ಶನಿ ಸಾರದಲ್ಲಿ ಇರುವುದರಿಂದ ಚೆನ್ನಾಗಿದೆ. ತೊಂದರೆ ಏನೂ ಇಲ್ಲ ಪರಿಶ್ರಮಕ್ಕೆ ತಕ್ಕ ಫಲ.

ಕುಂಭ ರಾಶಿ
ಪರಿಶ್ರಮಕ್ಕೆ ತಕ್ಕಂತೆ ಫಲ ದೊರೆಯುತ್ತದೆ ಅದಕ್ಕೂ ಮೀರಿದ ಖರ್ಚು ವೆಚ್ಚಗಳ ಗುತ್ತವೆ.

ಮೀನ ರಾಶಿ
ಲಾಭ ಸ್ಥಾನದಲ್ಲಿ ಶನಿ ಇರುವುದರಿಂದ ಯಾವುದಾದರೂ ರೂಪದಲ್ಲಿ ನೀವು ಲಾಭವನ್ನು ಪಡೆಯುತ್ತಿರಿ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular