ಸಾಲದ ಇಎಂಐ ಪಾವತಿಸಿದ್ರೆ ಕೇಂದ್ರ ಸರಕಾರದಿಂದ ಸಿಗುತ್ತೆ ಭರ್ಜರಿ ಗಿಫ್ಟ್ !!

ನವದೆಹಲಿ : ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಸಾಲದ ಮೇಲಿನ ಇಎಂಐ ಪಾವತಿಗೆ ಸುಮಾರು 6 ತಿಂಗಳ ಕಾಲಾವಕಾಶವನ್ನು ನೀಡಿತ್ತು. ಈ ನಡುವಲ್ಲೇ ಸಾಲದ ಮೇಲಿನ ಬಡ್ಡಿ ಮನ್ನಾ ವಿಚಾರದ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಈ ನಡುವಲ್ಲೇ ಮೊರಟೋರಿಯಂ ಅವಧಿಯಲ್ಲಿ ಇಎಂಐ ಪಾವತಿಸಿದವರಿಗೆ ಭರ್ಜರಿ ಗಿಫ್ಟ್ ನೀಡಲು ಕೇಂದ್ರ ಸರಕಾರ ಮುಂದಾಗಿದೆ.

ಮಾರ್ಚ್ 1ರಿಂದ ಸಪ್ಟೆಂಬರ್ 28ರ ವರೆಗಿನ ಮೊರಟೋರಿಯಂ ಅವಧಿಯಲ್ಲಿನ ಬಡ್ಡಿ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವ ಪ್ರಸ್ತಾವನೆಯ ಕುರಿತು ಪರಿಶೀಲನೆ ನಡೆಯುತ್ತಿದೆ. ನ್ಯಾಯಲಯ ಇನ್ನಷ್ಟು ತಿಂಗಳ ಕಾಲ ಸಾಲ ಮರುಪಾವತಿಗೆ ಕಾಲಾವಕಾಶ ನೀಡುವಂತೆಯೂ ಕೇಂದ್ರ ಸರಕಾರಕ್ಕೆ ಸೂಚನೆಯನ್ನು ಕೊಟ್ಟಿತ್ತು.

ಈ ಕುರಿತು ನ್ಯಾಯಾಲಯದಲ್ಲಿ ವಿಚಾರಣೆಯೂ ನಡೆಯುತ್ತಿದೆ. ಈ ನಡುವಲ್ಲೇ ಇದೀಗ ಮಾರಟೋರಿಯಂ ಅವಧಿಯಲ್ಲಿ ಸಾಲ ಮರುಪಾವತಿಸಿದವರಿಗೆ ದೀಪಾವಳಿಯ ಹೊತ್ತಲ್ಲಿ ರಿವಾರ್ಡ್ ಸಿಗೋದು ಪಕ್ಕಾ ಆಗಿದೆ.

2 ಕೋಟಿ ವರೆಗಿನ ಸಾಲಕ್ಕೆ ಈ ಹೊಸ ಯೋಜನೆ ಅನ್ವಯವಾಗಲಿದೆ.ಆದರೆ ವೈಯಕ್ತಿಕ ಸಾಲಕ್ಕೆ ಮಾತ್ರವೇ ರಿವಾರ್ಡ್ ನೀಡಲಾಗುತ್ತಾ ಇಲ್ಲಾ ಗೃಹ ಸೇರಿದಂತೆ ಇತರ ಸಾಲಕ್ಕೂ ಕೂಡ ಅನ್ವಯಿಸುತ್ತಾ ಅನ್ನೋದು ತಿಳಿದುಬಂದಿಲ್ಲ.

ಮಾರಟೋರಿಯಂ ಅವಧಿಯಲ್ಲಿ ಬಹುತೇಕರು ಸಾಲ ಮರುಪಾವತಿ ಮಾಡದೇ ಇದ್ರೆ, ಕೆಲವರು ಸಾಲವನ್ನು ಸಕಾಲದಲ್ಲಿ ಪಾವತಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಆರು ತಿಂಗಳ ಕಾಲ ಇಎಂಐ ತುಂಬಿದವರಿಗೆ ಕೇಂದ್ರ ಸರಕಾರ ನೀಡಲು ಲಾಭ ದೊರೆಯಲಿದೆ.

Comments are closed.