ಶ್ರೀ ಶಾರ್ವರಿನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್ ಋತು, ಆಶ್ವಯುಜ ಮಾಸೆ, ಶುಕ್ಲ ಪಕ್ಷದ ಸಪ್ತಮಿ ತಿಥಿ, ಪೂರ್ವಾಷಾಢ ನಕ್ಷತ್ರ, ಸುಕರ್ಮ ಯೋಗ, ವನಿಜಕರಣ, ಅಕ್ಟೋಬರ್ 23 , ಶುಕ್ರವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ. ಇಂದು ಅಮೃತ ಕಾಲ ಸಂಜೆ 6 ಗಂಟೆ 56 ನಿಮಿಷದಿಂದ ರಾತ್ರಿ 8 ಗಂಟೆ 34 ನಿಮಿಷದವರೆಗೂ ಇದೆ.

ಇಂದು ಅಮ್ಮನವರ ಏಳನೇ ದಿನ. ಸಪ್ತಮಿ ಅತ್ಯಂತ ಭಯಂಕರ, ಭೀಭತ್ಸ ರೂಪ ಮಹಾ ಕಾಳರಾತ್ರಿ ಸ್ವರೂಪ ದ ದಿನ. ಕಪ್ಪು ವರ್ಣವಾಗಿ ಶುಭಂಕರಿಯಾಗಿ ಕಾಲ ರಾತ್ರಿ ಸ್ವರೂಪವಾಗಿ ನಿಂತುಕೊಳ್ಳುವಂತಹ ಸ್ವರೂಪ. ಇಂದು ಜಗನ್ಮಾತೆಯು ರಕ್ತಬೀಜಾಸುರನನ್ನು ಸಂಹಾರ ಮಾಡಿದಂತಹ ದಿನ. ಸಪ್ತಮಿಯ ದಿನ ಶುಕ್ರವಾರ ಬಹುಶಃ ವಿಶೇಷವಾಗಿ ಪ್ರತಿಯೊಬ್ಬರ ಒಳಗೆ ಭೀಭತ್ಸ ವ್ಯಾಘ್ರ ಮಹಾಕಾಲ ಇದ್ದಾನೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ನೋಡಿ. ನಿಮ್ಮ ರಾಶಿ ಫಲದ ಬಗ್ಗೆ ಮಾಹಿತಿ ಹೀಗಿದೆ :

ಮೇಷರಾಶಿ
ಚೆನ್ನಾಗಿದೆ, ಚಂದ್ರ ಶುಕ್ರನ ಸಾರದಲ್ಲಿ ಇರುವುದರಿಂದ ಶುಕ್ರ ತ್ರಿಕೋನದಲ್ಲಿ ಚಂದ್ರನನ್ನೇ ನೋಡುತ್ತಿರುವುದರಿಂದ ಅಮ್ಮನವರ ಸೇವೆ ಅಮ್ಮನವರ ಪೂಜೆ ಎಲ್ಲವೂ ಕೂಡಿ ಬರುವಂತಹ ಅದ್ಭುತವಾದ ದಿನ.
ವೃಷಭರಾಶಿ
ಅನುಕೂಲಕರವಾದ ದಿನ, ಖರ್ಚುವೆಚ್ಚಗಳು ಸ್ವಲ್ಪ ಜಾಸ್ತಿ ಇರುತ್ತದೆ ಅದರೆ ತೊಂದರೆಯೇನೂ ಇಲ್ಲ.

ಮಿಥುನರಾಶಿ
ಸ್ವಲ್ಪ ತುಂಟತನ ಅಲಂಕಾರ ವಯ್ಯಾರ ಎಲ್ಲವೂ ಜಾಸ್ತಿ ಇರುತ್ತದೆ.
ಕರ್ಕಾಟಕರಾಶಿ
ಸೊಂಟ ನೋವು ಹೊಟ್ಟೆ ನೋವಿನಿಂದ ಬಳಲುತ್ತೀರ, ಸ್ವಲ್ಪ ದೃಷ್ಟಿಯ ಪ್ರಭಾವ ಹೆಚ್ಚಾಗಿ ಇರುತ್ತದೆ. ಹೆಚ್ಚಾಗಿ ದೃಷ್ಟಿ ಆಗುವವರು ರಾಹು ರಕ್ಷಾ ಕವಚವನ್ನು ಧರಿಸಿ.
ಸಿಂಹರಾಶಿ
ಇಂದು ಅಂದ, ಚಂದ, ಮಾತು ಅದ್ಭುತ, ದೃಷ್ಟಿಯನ್ನ ತೆಗೆಸಿಕೊಳ್ಳಲೇಬೇಕು. ಇಂದು 17ಜನ ವೃದ್ಧ ಅನಾಥರಿಗೆ ವಸ್ತ್ರವನ್ನ ಕೊಡಿ. ರಾಜ ರಾಜನ ಆಗೇ ಇರುತ್ತಾನೆ ಹಾಗೆ ನೀವೂ ಕೂಡ.

ಕನ್ಯಾರಾಶಿ
ತುಂಬಾ ದಿನಗಳ ನಂತರ ನಿಮ್ಮ ಮುಖದಲ್ಲಿ ಮಂದಹಾಸದ, ನಗು, ಖುಷಿಯ ಸಿಂಚನ, ಅಂದುಕೊಳ್ಳುವ ಕೆಲಸ ಕಾರ್ಯಗಳಲ್ಲಿ ಪ್ರಗತಿ.
ತುಲಾರಾಶಿ
ಚೆನ್ನಾಗಿದೆ ರಾಶಿ ಅಧಿಪತಿಯಾಗಿರುವ ಶುಕ್ರ ಹನ್ನೊಂದನೇ ಮನೆಯಲ್ಲಿರುವುದರಿಂದ ಅಂದುಕೊಂಡಿರುವ ಕೆಲಸ ಕಾರ್ಯಗಳೆಲ್ಲಿ ಪ್ರಗತಿ ಸೋದರಿ ವರ್ಗದಿಂದ ನೆರವು.
ವೃಶ್ಚಿಕರಾಶಿ
ಕಲಾ ಮಾಧ್ಯಮದಲ್ಲಿ ಇರುವಂಥವರಿಗೆ, ಟ್ರಾನ್ಸ್ ಪೋರ್ಟೆಷನ್, ಸುಗಂಧ ವಸ್ತುಗಳ ವ್ಯಾಪಾರ, ಪೂಜಾ ಸಾಮಗ್ರಿಗಳ ವ್ಯಾಪಾರಗಳಲ್ಲಿ ತೊಡಗಿರುವವರಿಗೆ ಅನುಕೂಲಕರವಾದ ದಿನ.

ಧನಸ್ಸುರಾಶಿ
ಗುರುವಿಗೂ ಶುಕ್ರನಿಗೂ ಅಷ್ಟಕ್ಕಷ್ಟೆ , ಶುಕ್ರನ ಛಾಯೆಯಲ್ಲಿ ಚಂದ್ರನಿದ್ದು, ತ್ರಿಕೋನದಲ್ಲಿ ಶುಕ್ರ ರಾಹು ಇರುವುದರಿಂದ ಕಲಾ ಮಾಧ್ಯಮದಲ್ಲಿ ಇರುವಂತಹ ರೈಟರ್ಸ್, ಡ್ಯಾನ್ಸರ್ಸ, ಆ್ಯಕ್ಟರ್ಸ, ಮ್ಯೂಸಿಷಿಯನ್ ಗಳಿಗೆ ಸಣ್ಣ ಪ್ರಭಂಜನ ಆರಂಭವಾಗಿದೆ ಚೇತರಿಸಿಕೊಳ್ಳುತ್ತೀರ.
ಮಕರರಾಶಿ
ಖರ್ಚು ವೆಚ್ಚಗಳ ದಿನವಾದರೂ ಒಳ್ಳೆಯದಕ್ಕೆ ಖರ್ಚು ಮಾಡುತ್ತೀರಿ, ಮನೆಯ ಹೆಣ್ಣುಮಕ್ಕಳಿಗೆ ಬಾಗೀನವನ್ನು ಕೊಡಿ.

ಕುಂಭರಾಶಿ
ಲಾಭ ಸ್ಥಾನದಲ್ಲಿ ಚಂದ್ರ ಕೇಂದ್ರ ಸ್ಥಾನದಲ್ಲಿ ಶುಕ್ರ ಇರುವುದರಿಂದ ದೇವಿಯ ಪರಿಪೂರ್ಣ ಅನುಗ್ರಹ, ಮಿತ್ರರ ಸಹಕಾರ, ಸಂಗಾತಿಯ ಒಲವು ದೊರೆಯುತ್ತದೆ.
ಮೀನರಾಶಿ
ಶುಕ್ರನಿಗೂ ನಿಮಗೂ ಅಷ್ಟಕ್ಕಷ್ಟೆ, ಸ್ತ್ರೀ ಬಾಸ್, ಅಕ್ಕ ತಂಗಿ, ಅತ್ತಿಗೆ, ನಾದಿನಿ, ಮುಂತಾದ ಸ್ತ್ರೀಯರ ಜೊತೆ ಕಿರಿಕಿರಿ ಗಲಿಬಿಲಿ ಉಂಟಾಗುತ್ತದೆ. ಬೆಳಿಗ್ಗೆಯೇ ತುಳಸಿ ಗಿಡದ ಹತ್ತಿರ 1ದೀಪವನ್ನು ಹಚ್ಚಿ ಎಲ್ಲ ದೋಷಗಳು ನಿವಾರಣೆಯಾಗುತ್ತದೆ.