ಮೇಷರಾಶಿ
ಶ್ರಮಪಟ್ಟರೂ ನಿರೀಕ್ಷಿ ಪ್ರಮಾಣದಲ್ಲಿ ಲಾಭ ದೊರಕದು, ಉದ್ಯೋಗದಲ್ಲಿ ಬಡ್ತಿ, ನಾನಾ ಮೂಲಗಳಿಂದ ಆದಾಯ, ಒಂದರ ಮೇಲೆ ಒಂದರಂತೆ ಅಡೆತಡೆಗಳು ಕಷ್ಟಗಳು ಎದುರಾಗುತ್ತದೆ, ಸವಾಲು ಎದುರಿಸಲೇ ಬೇಕು, ಮನಸ್ಸನ್ನು ಪ್ರಶಾಂತವಾಗಿಟ್ಟುಕೊಳ್ಳಿರಿ.
ವೃಷಭರಾಶಿ
ಕೃಷಿಯಲ್ಲಿ ಅಲ್ಪ ಲಾಭ, ಅನಾರೋಗ್ಯ, ವಿದ್ಯಾರ್ಥಿಗಳಲ್ಲಿ ಗೊಂದಲ, ಶತ್ರು ಬಾಧೆ, ದಾಂಪತ್ಯದಲ್ಲಿ ವಿರಸ,ಸ್ಥಳ ಬದಲಾವಣೆ. ದೈವಾನುಗ್ರಹವಿದೆ, ನಾನಾ ಕಡೆಗಳಿಂದ ಸಮಸ್ಯೆ ಎದುರಾಗಲಿದೆ, ಸಮಸ್ಯೆಗಳಿಂದ ಪಾರಾಗಲು ದೈವದ ಮೊರೆ ಹೋಗುವಿರಿ, ಸಹನೆ ಆತ್ಮವಿಶ್ವಾಸವಿರಲಿ.
ಮಿಥುನರಾಶಿ
ನಿಮ್ಮೆಣಿಸಿದ ಕಾರ್ಯಗಳೆಲ್ಲವೂ ನಿಧಾನವಾಗಿ ಆಗುತ್ತಲೇ ಹೋಗುತ್ತದೆ, ಸಂತೋಷ ಸಮಾರಂಭದಲ್ಲಿ ಭಾಗಿ, ಆರೋಗ್ಯದಲ್ಲಿ ಚೇತರಿಕೆ, ಚಿಂತೆ ಮಾಡದಿರಿ. ಋಣಭಾದೆ, ಸ್ನೇಹಿತರ ದುಃಖಕ್ಕೆ ಹಿತವಚನ ಹೇಳುವಿರಿ, ಹೊಸ ಉದ್ಯೋಗ ಲಭ್ಯ,ಕುಟುಂಬ ಸೌಖ್ಯ.
ಕಟಕರಾಶಿ
ಚಿತ್ತ ಚಾಂಚಲ್ಯದಿಂದ ಮನಸ್ಸು ದ್ವಿಗುಣ ವಾದೀತು, ವಿರೋಧಿಗಳ ಕುತಂತ್ರಕ್ಕೆ ಬಲಿಯಾಗುವಿರಿ, ಮನೆಯಲ್ಲಿ ಧಾರ್ಮಿಕ ಸಮಾರಂಭ, ಅತೀ ಚಿಂತೆ ಬೇಡ, ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿ ಕಂಡುಬರಲಿದೆ, ಮಕ್ಕಳ ವಿದ್ಯಾಪ್ರಗತಿಯಿಂದ ಮನಸ್ಸಿಗೆ ಸಮಾಧಾನವಾಗಲಿದೆ,
ಸಿಂಹರಾಶಿ
ಸ್ತ್ರೀಯರಿಗೆ ಹೆಚ್ಚಿನ ಜವಾಬ್ದಾರಿ, ಮನಶಾಂತಿ, ವಾಹನ ಖರೀದಿ, ಹಿರಿಯರ ಸಲಹೆ ಒಳಿತು, ಕಗ್ಗತ್ತಲಾವರಿಸಿದ ಮನಸ್ಸು ರೋಸಿ ಹೋದೀತು, ಹೇಗೆ, ಎತ್ತ, ಏನು ಎಂಬುದು ನಿಮಗೇ ಅರಿವಿಲ್ಲ ದಂತಾದೀತು, ನೀವು ಕೈಗೊಳ್ಳುವ ಕಾರ್ಯದಲ್ಲಿ ಜಯ ಸಿಗಲಿದೆ, ಜನರ ಬೆಂಬಲವು, ಪ್ರಶಂಸೆಯೂ ನಿಮ್ಮೊಂದಿಗಿರುತ್ತದೆ.
ಕನ್ಯಾರಾಶಿ
ಆರ್ಥಿಕ ಪರಿಸ್ಥಿತಿ ಉತ್ತಮ, ಅನ್ಯ ಜನರಲ್ಲಿ ಪ್ರೀತಿ, ಗುರು ಹಿರಿಯರಲ್ಲಿ ಭಕ್ತ, ಶುಭ ಮಂಗಲ ಕಾರ್ಯ ನಿಮಿತ್ತ ಪ್ರವಾಸವು ಕೂಡಿಬರಲಿದೆ, ಸಂಸಾರದಲ್ಲಿ ನೆಮ್ಮದಿ, ಸಂತೋಷ, ಸಮಾಧಾನ ಲಭಿಸಲಿದೆ, ಮನೆಯಲ್ಲಿ ಹಿರಿಯರ ಆರೋಗ್ಯವು ಉತ್ತಮ. ಅನಿರೀಕ್ಷಿತವಾಗಿ ಅತಿಥಿಗಳ ಭೇಟಿಯಿಂದ ಸಂತಸ. ವಿಪರೀತ ಖರ್ಚು, ಯತ್ನ ಕಾರ್ಯಗಳಲ್ಲಿ ಜಯ,
ತುಲಾರಾಶಿ
ತಂದೆ, ಮಕ್ಕಳೊಳಗೆ ಆಸ್ತಿ ಬಗ್ಗೆ ಸ್ವಲ್ಪ ತಕರಾರು ಇದ್ದರೂ ಸಂಧಾನದಿಂದ ಸರಿಯಾಗಲಿದೆ. ಮನೆಯಲ್ಲಿ ಶುಭಮಂಗಲ ಕಾರ್ಯದ ಪ್ರಯತ್ನ ನಡೆದೀತು. ಮಕ್ಕಳು ವಿದ್ಯಾಭ್ಯಾಸಕ್ಕಾಗಿ ವಿದೇಶಯಾನವಿದ್ದೀತು. ಪ್ರಚಾರಸಭೆಯಲ್ಲಿ ಭಾಗಿ, ಬದುಕಿಗೆ ಉತ್ತಮ ತಿರುವು, ಕಾರ್ಯ ವಿಕಲ್ಪ, ಮಹಿಳೆಯರಿಗೆ ಉತ್ತಮ ಲಾಭ.
ವೃಶ್ಚಿಕರಾಶಿ
ಮಕ್ಕಳ ವಿವಾಹವು ನಡೆದೀತು. ಅನೇಕ ರೀತಿಯಲ್ಲಿ ಖರ್ಚು ಕಂಡುಬರಲಿದೆ. ಉದ್ಯೋಗ, ವ್ಯವಹಾರದಲ್ಲಿ ನಿಮ್ಮೆಣಿಕೆಯಂತೆ ಲಾಭವಿದ್ದೀತು. ಜನರು ನಿಮ್ಮ ಪ್ರಶಂಸೆ, ಏಳಿಗೆ ಕಂಡು ಹೊಟ್ಟೆ ಉರಿಸಿಕೊಂಡಾರು. ಹೊಸ ವ್ಯಾಪಾರ ಪ್ರಾರಂಭಿಸುವಿರಿ, ಭೋಗವಸ್ತು ಪ್ರಾಪ್ತಿ, ಮಿತ್ರರ ಆಗಮನದಿಂದ ಸಂತಸ.
ಧನಸ್ಸುರಾಶಿ
ಸ್ತ್ರೀ ಲಾಭ, ಆತ್ಮೀಯರೊಂದಿಗೆ ಕಲಹ, ವ್ಯವಹಾರ ನಿಮಿತ್ತ ಪ್ರಯಾಣ ಕೂಡಿಬರಲಿದೆ. ಆದರೂ ಮೋಜಿಗಾಗಿ ಹೆಚ್ಚು ಖರ್ಚು ಮಾಡುವುದು ಬೇಡ. ಪತ್ನಿಯ ಉದ್ಯೋಗದ ನಿಮಿತ್ತ ನಿಮಗೆ ಚಿಂತೆ ಆವರಿಸಲಿದೆ. ಉದ್ಯೋಗದಲ್ಲಿ ಭಡ್ತಿ ಸಿಗುವ ಹಾಗಿದೆ. ವ್ಯಾಪಾರದಲ್ಲಿ ಧನಲಾಭ, ಆಭರಣ ಖರೀದಿ, ಮಹಿಳೆಯರಿಗೆ ಶುಭ.
ಮಕರರಾಶಿ
ಹೊಸ ಜವಾಬ್ದಾರಿ ಒಪ್ಪಿಕೊಳ್ಳುವ ಮುನ್ನ ಯೋಚಿಸಿ, ದೂರ ಪ್ರಯಾಣ, ಉದ್ಯೋಗರಂಗದಲ್ಲಿ ನಿಮಗೆ ತುಂಬಾ ಕಿರಿಕಿರಿ ಕಂಡುಬಂದೀತು, ಮೇಲಾಧಿಕಾರಿಗಳಿಂದ ಒತ್ತಡ, ಮನೆಯಲ್ಲಿ ಹಿರಿಯರಿಂದ ಕಿರಿಕಿರಿ ಕಂಡುಬಂದೀತು, ಮಕ್ಕಳಿಂದ ಸಮಾಧಾನವಿದೆ. ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ.
ಕುಂಭರಾಶಿ
ಮಕ್ಕಳ ಮನೆಗೆ ಪ್ರಯಾಣ ಮಾಡುವ ಅವಕಾಶ ಬರಲಿದೆ, ಯತ್ನ ಕಾರ್ಯ ಅನುಕೂಲ, ಸೇವಕ ವರ್ಗದಿಂದ ಸಹಾಯ, ಸ್ಥಳ ಬದಲಾವಣೆ, ದಾಂಪತ್ಯದಲ್ಲಿ ಪ್ರೀತಿ. ಕಾರ್ಯನಿಮಿತ್ತ ಪ್ರವಾಸ ಕಂಡುಬರುವುದು, ಆದರೂ ಅದು ವ್ಯರ್ಥವಾಗಲಿದೆ, ಆತ್ಮವಿಶ್ವಾಸ, ಧೈರ್ಯ ಹಾಗೂ ನೇರ ನುಡಿ, ನಡೆಯಿಂದ ಮುನ್ನಡೆಯಿರಿ.
ಮೀನರಾಶಿ
ಕಾರ್ಯರಂಗದಲ್ಲಿ ವಿಲಾಸೀ ಜೀವನಕ್ಕೆ ಮಾರು ಹೋಗಿ ನಿಮ್ಮ ಬಗ್ಗೆ ಜಾಗ್ರತೆ ಮಾಡುವುದು ಅತೀ ಅಗತ್ಯ, ಮನೆಯಲ್ಲಿ ಮಂಗಲಕಾರ್ಯದ ಪ್ರಯತ್ನ ನಡೆದರೂ ನೀವು ಒಪ್ಪುವುದು ಅತೀ ಅಗತ್ಯ, ಅಲಸ್ಯ ಮನೋಭಾವ, ಶತ್ರುಭಯ, ಚಂಚಲ ಮನಸ್ಸು, ಸಕಾಲಕ್ಕೆ ಬೋಜನ ಇಲ್ಲದಿರುವಿಕೆ, ಸಲ್ಲದ ಅಪವಾದ, ಧನ ನಷ್ಟ.