ನೀವು ಕ್ರೆಡಿಟ್-ಡೆಬಿಟ್ ಕಾರ್ಡ್ ಬಳಸ್ತಿರಾ…? ಹಾಗಿದ್ದರೇ ನಿಮಗೂ ಕಾದಿದೆ ಅಪಾಯ…!

ನವದೆಹಲಿ: ನೀವು ಡೆಬಿಟ್/ಕ್ರೆಡಿಟ್ ಕಾರ್ಡ್ ಬಳಸ್ತಿರಾ…? ಹಾಗಿದ್ದರೇ ನಿಮ್ಮ ಪೋನ್ ನಂಬರ್, ಅಕೌಂಟ್‌ ನಂಬರ್ ಹೀಗೆ ಎಲ್ಲ ಮಾಹಿತಿಗಳು ಮಾರಾಟವಾಗಿರಬಹುದು ಹುಶಾರ್….!

ಭಾರತದ ೧೦ ಕೋಟಿಗೂ ಅಧಿಕ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಕೆದಾರರ ಡಾಟಾವನ್ನು ಭಾರಿ ಹಣಕ್ಕೆ‌ ಮಾರಾಟಮಾಡಲಾಗಿದೆ ಎಂದು ಸೈಬರ್ ಭದ್ರತಾ ಸಂಶೋಧಕ ರಾಜಶೇಖರ ರಜಾಹರಿಯ ಅನುಮಾನಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಾಜಶೇಖರ್, ದೇಶದ ಕಾರ್ಡ್ ಬಳಕೆದಾರರ ಸಂಪೂರ್ಣ ಡೇಟಾವನ್ನು ಡಾರ್ಕ್ ವೆಬ್ ಗೆ ಬೆಂಗಳೂರು ಮೂಲದ ಡಿಜಿಟಲ್‌ ಪೇಮೆಂಟ್ ಗೇಟ್ ವೇ ಜಸ್ ಪೇ ಮೂಲಕ ಮಾರಾಟವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಬಗ್ಗೆ ಮಾಹಿತಿ‌ ನೀಡಿರುವ ರಾಜಶೇಖರ್, ಜನರ ಡೇಟಾವನ್ನು ಅಘೋಷಿತ ಹಣಕ್ಕೆ ಮಾರಾಟಮಾಡಲಾಗಿದೆ. ಈ ವ್ಯವಹಾರ ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್ ಮೂಲಕ ನಡೆದಿದೆ. ಈ ಡೇಟಾಗಳಿಗೆ ಹ್ಯಾಕರ್ ಗಳು ಟೆಲಿಗ್ರಾಂ ಮೂಲಕವು ಪ್ರಯತ್ನ ನಡೆಸಿದ್ದಾರೆ ಎಂದು ವಿವರಣೆ ನೀಡಿದ್ದಾರೆ.

ಇನ್ನು ಈ ಡೇಟಾ ಪಡೆದವರು ಕಾರ್ಡ್ ಗಳ ಸಂಪೂರ್ಣ ಡಿಟೇಲ್ಸ್, 10 ಸಂಖ್ಯೆಗಳನ್ನು ಪತ್ತೆಹಚ್ಚುವ ಸಾಮರ್ಥ್ಯ ಹೊಂದಿರೋದರಿಂದ 10 ಕೋಟಿ ಕಾರ್ಡ್ ಮಾಲೀಕರು ಆತಂಕದಲ್ಲಿದ್ದಾರೆ ಎಂದಿದ್ದಾರೆ.

ಈ‌ ಕುರಿತು ತಕ್ಷಣ ಆರ್.ಬಿ.ಐ ತನಿಖೆ ನಡೆಸಬೇಕೆಂದು ರಾಜಶೇಖರ ಒತ್ತಾಯಿಸಿದ್ದಾರೆ.

Comments are closed.