ಮಂಗಳವಾರ, ಏಪ್ರಿಲ್ 29, 2025
Homehoroscopeವಾರ ಭವಿಷ್ಯ : ಮಾರ್ಚ್ 29 ರಿಂದ ಎಪ್ರಿಲ್ 04

ವಾರ ಭವಿಷ್ಯ : ಮಾರ್ಚ್ 29 ರಿಂದ ಎಪ್ರಿಲ್ 04

- Advertisement -

ಮೇಷರಾಶಿ
ಈ ವಾರ ನಿಮ್ಮ ಮನಸ್ಸಿಗೆ ಖುಷಿಕೊಡುವ ಕೆಲಸ ಮಾಡಲಿದ್ದೀರಿ. ಉದ್ಯೋಗ ಕ್ಷೇತ್ರದಲ್ಲಿ ಕ್ರಿಯಾತ್ಮಕ ಯೋಚನೆಗಳಿಗೆ ಬೆಂಬಲ ಸಿಗಲಿದೆ. ಸಂಗಾತಿ ಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳ ಬೇಕಾಗುತ್ತದೆ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚವಾಗಲಿದೆ. ಕುಟುಂಬದಲ್ಲಿ ಶಾಂತಿ ವಾತಾವರಣ ಏರ್ಪಡಲಿದೆ.
ಅದೃಷ್ಟ ಬಣ್ಣ: ಕೆಂಪು
ಶುಭ ಸಂಖ್ಯೆ, 3, 9

ವೃಷಭ ರಾಶಿ
ಈ ವಾರ ಕಾರ್ಯನಿಮಿತ್ತವಾಗಿ ಅನಿರೀಕ್ಷಿತವಾಗಿ ದೂರ ಸಂಚಾರ ಮಾಡಬೇಕಾಗುತ್ತದೆ. ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ ಅಗತ್ಯ. ಮನೆಯಲ್ಲಿ ಕಳ್ಳತನದ ಭೀತಿ ಎದುರಾಗಲಿದೆ. ಅಪರಿಚಿತರೊಂದಿಗೆ ವ್ಯವಹಾರ ಮಾಡುವಾಗ ಎಚ್ಚರಿಕೆಯಿಂದಿರಿ. ತಾಳ್ಮೆ ಇರಲಿ, ಮಕ್ಕಳೊಂದಿಗೆ ಪ್ರೀತಿಯಿಂದ ಇರಿ.
ಅದೃಷ್ಟ ಬಣ್ಣ: ಬಿಳಿ ಬಣ್ಣ
ಶುಭ ಸಂಖ್ಯೆ :  6, 8

ಮಿಥುನರಾಶಿ
ಈ ವಾರ ನಿಮ್ಮ ಬೆಲೆ ಬಾಳುವ ವಸ್ತುಗಳ ಮೇಲೆ ಬೇರೆಯವರ ದೃಷ್ಟಿ ಬೀಳಲಿದೆ. ಎಚ್ಚರಿಕೆಯಿಂದ ಕಾಪಾಡಿ. ಹಿರಿಯರ ಸಲಹೆಗಳು ಉಪಯೋಗಕ್ಕೆ ಬರಲಿದೆ. ಸಂಗಾತಿಯ ದೇಹಾರೋಗ್ಯದಲ್ಲಿ ಏರುಪೇರಾದೀತು. ಕಾಳಜಿ ವಹಿಸಿ. ಉದ್ಯೋಗದಲ್ಲಿ ಮಹಾ ಧನಾತ್ಮಕ ಬದಲಾವಣೆ, ವ್ಯಾಪಾರದಲ್ಲಿ ಶುಭ.
ಅದೃಷ್ಟ ಬಣ್ಣ: ತಿಳಿ ಹಸಿರು ಬಣ್ಣ
ಶುಭ ಸಂಖ್ಯೆ : 5, 2

ಕರ್ಕಾಟಕರಾಶಿ
ಮನಸ್ಸಿನ ಆಸೆ ಪೂರೈಸಲು ಕೆಲವೊಂದು ತ್ಯಾಗ ಮಾಡಬೇಕಾಗುತ್ತದೆ. ಮಹಿಳೆಯರಿಗೆ ತವರಿನ ಕಡೆಯವರ ಭೇಟಿಯಾಗುವ ಯೋಗವಿದೆ. ಹಿರಿಯರಿಗೆ ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ಮನಸ್ಸಿಗೆ ನೆಮ್ಮದಿ ಸಿಗುವುದು. ಮಕ್ಕಳಿಂದ ಶುಭ ಸುದ್ದಿ.
ಅದೃಷ್ಟ ಬಣ್ಣ: ತಿಳಿ ಹಳದಿ
ಶುಭ ಸಂಖ್ಯೆ : 1, 5

ಸಿಂಹರಾಶಿ
ಅನಗತ್ಯ ಚಿಂತೆಗಳಿಗೆ ಕಡಿವಾಣ ಹಾಕುವುದು ಒಳಿತು. ಮಿತ್ರರ ಕಷ್ಟಗಳಿಗೆ ಸ್ಪಂದಿಸಲು ಹೋಗಿ ತೊಂದರೆಗೆ ಸಿಲುಕಿಕೊಳ್ಳಲಿದ್ದೀರಿ. ಆರ್ಥಿಕವಾಗಿ ಭವಿಷ್ಯದ ದೃಷ್ಟಿಯಿಂದ ಕೂಡಿಡುವ ಯೋಚನೆಗಳು ಬರಲಿವೆ. ತಾಳ್ಮೆಯಿರಲಿ. ಪಾಲುದಾರರ ಜೊತೆ ಚೆನ್ನಾಗಿರಿ, ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ.
ಅದೃಷ್ಟ ಬಣ್ಣ: ಆರೆಂಜ್ ಬಣ್ಣ
ಶುಭ ಸಂಖ್ಯೆ : 9, 1

ಕನ್ಯಾರಾಶಿ
ಉದ್ಯೋಗ ಕ್ಷೇತ್ರದಲ್ಲಿ ಹಲವು ಅವಕಾಶಗಳು ಎದುರಾಗಲಿದ್ದು, ಯಾವುದನ್ನು ಬಳಸಬೇಕು ಎಂಬ ಗೊಂದಲಗಳು ಕಾಡೀತು. ಸಂಗಾತಿಯ ಅಭಿಪ್ರಾಯಗಳು ಮುಖ್ಯವಾಗಲಿದೆ. ಮಕ್ಕಳ ದೇಹಾರೋಗ್ಯದ ಬಗ್ಗೆ ಚಿಂತೆಯಾದೀತು. ಔಷದಿ ಖರ್ಚುಗಳು, ಹಾಗೂ ಆಸ್ಪತ್ರೆಯ ಖರ್ಚುಗಳು, ಮತ್ತು ಸ್ನೇಹಿತರೊಂದಿಗೆ ಕಲಹ, ಹಳೇ ಸಾಲದ ಗಲಾಟೆ ಸಾಧ್ಯತೆ.
ಅದೃಷ್ಟ ಬಣ್ಣ: ಪಚ್ಚೆ ಬಣ್ಣ
ಶುಭ ಸಂಖ್ಯೆ : 5, 8

ತುಲಾರಾಶಿ
ಯೋಗ್ಯ ವಯಸ್ಕರಿಗೆ ಸದ್ಯದಲ್ಲೇ ಮನಸ್ಸಿಗೆ ಹಿಡಿಸಿದ ಸಂಬಂಧಗಳು ಕೂಡಿಬಂದೀತು. ನೆರೆಹೊರೆಯವ ರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಾಗಲಿದೆ. ದೇವತಾ ಪ್ರಾರ್ಥನೆ ಮಾಡಿ.ವಿವಾಹ ಯೋಗ, ಮನೆಯಲ್ಲಿ ಶುಭ ಕಾರ್ಯ,
ಅದೃಷ್ಟ ಬಣ್ಣ: ಬಿಳಿ ಬಣ್ಣ
ಶುಭ ಸಂಖ್ಯೆ : 6, 3

ವೃಶ್ಚಿಕರಾಶಿ
ಮಾನಸಿಕವಾಗಿ ಋಣಾತ್ಮಕ ಚಿಂತೆಗಳು ಕಾಡಲಿದ್ದು, ಕೆಲಸ ಕಾರ್ಯಗಳಿಗೆ ನಿರುತ್ಸಾಹ ಕಂಡುಬಂದೀತು. ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಕೈಗೊಂಡ ಕೆಲಸಗಳು ಯಶಸ್ವಿಯಾಗಲಿದೆ. ಚಿಂತೆ ಬೇಡ. ಮನೆಯಲ್ಲಿ ಕಲಹಗಳು, ವ್ಯಾಪಾರದಲ್ಲಿ ಅಲ್ಪ ಲಾಭ.
ಕೋರ್ಟ್ ವಿಚಾರ ಅತಂತ್ರ ವಾರ್ತೆ.
ಅದೃಷ್ಟ ಬಣ್ಣ: ಕೆಂಪು ಬಣ್ಣ
ಶುಭ ಸಂಖ್ಯೆ : 9, 4

ಧನುರಾಶಿ
ಮನೆಯಲ್ಲಿ ಧನ ದಾನ್ಯಾದಿ ಸಂಪತ್ತು ವೃದ್ಧಿಯಾಗಲಿದೆ. ಸರಿಯಾದ ನಿರ್ಧಾರ ಕೈಗೊಂಡರೆ ಭವಿಷ್ಯದಲ್ಲಿ ಯಾವುದೇ ತೊಂದರೆಯಾಗದು. ಪ್ರೀತಿ ಪಾತ್ರರ ಭೇಟಿಯಾಗಲಿದ್ದು, ಮನಸ್ಸಿಗೆ ಸಂತಸ ವಾಗಲಿದೆ. ಕಿರು ಓಡಾಟ ನಡೆಸಬೇಕಾಗಬಹುದು. ಆಕಸ್ಮಿಕ ಧನಲಾಭ, ಗುರುಗಳ ಭೇಟಿ. ಹಿರಿಯರ ಸಹಾಯ.
ಅದೃಷ್ಟ ಬಣ್ಣ: ಹಳದಿ ಬಣ್ಣ
ಶುಭ ಸಂಖ್ಯೆ : 3, 6

ಮಕರರಾಶಿ
ಕಾರ್ಯಕ್ಷೇತ್ರದಲ್ಲಿ ನಿಮ್ಮ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡುವವರನ್ನು ದೂರವಿಡುವುದೇ ಉತ್ತಮ. ಸರಕಾರಿ ಅಧಿಕಾರಿಗಳಿಗೆ ಕಾರ್ಯದೊತ್ತಡವಿರಲಿದೆ. ಕೋರ್ಟು ಕಚೇರಿ ವ್ಯವಹಾರಗಳಿಗಾಗಿ ಓಡಾಟ ನಡೆಸಬೇಕಾದೀತು. ಧನದ ಚಿಂತೆ, ವೃಥಾ ಖರ್ಚುಗಳು.
ಅದೃಷ್ಟ ಬಣ್ಣ: ಕಪ್ಪು ಬಣ್ಣ
ಶುಭ ಸಂಖ್ಯೆ : 8, 4

ಕುಂಭರಾಶಿ
ದೇಹಾರೋಗ್ಯದ ಬಗ್ಗೆ ಅತೀವ ಕಾಳಜಿ ವಹಿಸಬೇಕಾದ ಸಮಯವಿದು. ಹಿತಶತ್ರುಗಳ ಹುನ್ನಾರಗಳು ಬೆಳಕಿಗೆ ಬರಲಿವೆ. ಮಹಿಳೆಯರಿಗೆ ಉದ್ಯೋಗದಲ್ಲಿ ಬಡ್ತಿ ಸಂಭವವಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಏಕಾಗ್ರತೆ ವಹಿಸುವುದು ಅಗತ್ಯ. ಅಧಿಕಾರಿಗಳ ಕಿರಿಕಿರಿ, ತಾಳ್ಮೆ ಮುಖ್ಯ, ಹೊಂದಾಣಿಕ ಅವಶ್ಯಕ.
ಅದೃಷ್ಟ ಬಣ್ಣ: ನೀಲಿ ಬಣ್ಣ
ಶುಭ ಸಂಖ್ಯೆ : 7, 1

ಮೀನರಾಶಿ
ಅನಗತ್ಯ ಮಾತು, ಚಿಂತನೆಗಳಿಗೆ ಕಿವಿಗೊಡುವುದನ್ನು ಬಿಟ್ಟು, ನಿಮ್ಮ ಮನಸ್ಸಿನ ಮಾತಿನಂತೆ ನಡೆದುಕೊಳ್ಳಿ. ಸಂಗಾತಿಯ ಆಯ್ಕೆ ವಿಚಾರದಲ್ಲಿ ಗೊಂದಲಗಳು ಕಾಡೀತು. ಆರ್ಥಿಕವಾಗಿ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕುವುದು ಒಳಿತು. ಮನೆ ರಿಪೇರಿ ಖರ್ಚು, ಮಕ್ಕಳ ಪೀಜುಗಳ ವೆಚ್ಚ. ಅಕ್ಕ ತಂಗಿಯರಿಗೆ ಸಹಾಯ ಸಾಧ್ಯತೆ.
ಅದೃಷ್ಟ ಬಣ್ಣ : ಬಿಳಿ ಹಾಗೂ ಹಳದಿ ಬಣ್ಣ
ಶುಭ ಸಂಖ್ಯೆ : 5, 1

ಶುಭಂಭವತು
ಡಾ.ಬಸವರಾಜ್ ಗುರೂಜಿ
ವೈದಿಕ ಜ್ಯೋತಿಷಿ
9972848937

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular