ಮಂಡ್ಯ : ಕಳಪೆ ರಸ್ತೆ ಕಾಮಗಾರಿ ನಡೆಸಿದ ಗುತ್ತಿಗೆದಾರರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ಮಂಡ್ಯದಲ್ಲಿ ನಡೆದಿದೆ. ಕಿಕ್ಕೇರಿ ತೆಂಗಿನಘಟ್ಟ ಗ್ರಾಮದಲ್ಲಿ ಭೂಸೇನಾ ನಿಗಮದ ವತಿಯಿಂದ ಸಬ್ ಏಜೆನ್ಸಿಯ ಮೂಲಕ ರಸ್ತೆ ಅಭಿವೃದ್ಧಿ ಕೆಲಸವನ್ನು ಪಡೆದುಕೊಂಡಿರುವ ಗುತ್ತಿಗೆದಾರ ಕಳಪೆ ಕಾಮಗಾರಿ ನಡೆಸಿದ್ದ. ಗುತ್ತಿಗೆದಾರ ಕಮಿಷನ್ ನೀಡಿ ನಡೆಸುತ್ತಿರುವ ಕಳಪೆ ಕಾಮಗಾರಿಯನ್ನು ಪ್ರಶ್ನಿಸಿದ ಗ್ರಾಮಸ್ಥರಿಗೆ ಸಮರ್ಥನೆ ನೀಡಲು ಮುಂದಾಗಿದ್ದಾನೆ. ಇದರಿಂದ ಕೆರಳಿದ ಗ್ರಾಮಸ್ಥರು ಕಿಕ್ಕೇರಿ ಕ್ಷೇತ್ರದ ಜಿಲ್ಲಾ ಪಂಚಾಯತಿ ಸದಸ್ಯ ಕೋಡಿಮಾರನಹಳ್ಳಿ ದೇವರಾಜು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮೇಲಧಿಕಾರಿಗಳು ಬಂದು ಕಳಪೆ ಕೆಲಸವನ್ನು ವೀಕ್ಷಿಸಿ ಕಾಮಗಾರಿಯನ್ನು ಸರಿಪಡಿಸುವವರೆಗೂ ಕಾಮಗಾರಿ ಮುಂದುವರಿಸಬಾರದು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಗ್ರಾಮಸ್ಥರು ಬಿಗಿಪಟ್ಟು ಹಿಡಿದಿದ್ದರಿಂದಾಗಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ.