ಆರ್.ಟಿ.ಸಿ ಒಟ್ಟುಗೂಡಿಸಲು ಲಂಚ : ಎಸಿಬಿ ಬಲೆಗೆ ಬಿದ್ದ ಶಿರಸ್ತೇದಾರ್

0

ಮಂಡ್ಯ : ಆರ್.ಟಿ.ಸಿ ಒಟ್ಟುಗೂಡಿಸುವ ಕೆಲಸಕ್ಕಾಗಿ ರೈತರಿಂದ ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಶಿರಸ್ತೇದಾರ್ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬಂದಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಕೃಷ್ಣರಾಜಪೇಟೆ ಪಟ್ಟಣದ ತಾಲೂಕು ಕಚೇರಿಯ ಭೂಮಿ ಶಾಖೆಯ ಶಿರಸ್ತೇದಾರ್ ಆಗಿರುವ ಮಹಾದೇವ ಗೌಡ ಎಂಬವರೇ ಬಂದಿತ ಆರೋಪಿ. ರೈತ ಮೋಹನ್ ಅವರಿಂದ 12ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಭ್ರಷ್ಟ ಅಧಿಕಾರಿ ಶಿರಸ್ತೇದಾರ್ ಮಹದೇವೇಗೌಡನಿಗೆ ಎಸಿಬಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಅಲಂಬಾಡಿ ಕಾವಲು ಗ್ರಾಮದ ರೈತ ಎಂ.ಮೋಹನ್ ಅವರು ತಮ್ಮ ಜಮೀನಿನ ಆರ್.ಟಿ.ಸಿ ಒಟ್ಟುಗೂಡಿಸಿ ಕೊಡುವ ಹಾಗೂ ಕಾರ್ ಬಂದ್ ತಯಾರು ಮಾಡಿಕೊಡುವ ಸಲುವಾಗಿ 2019ನೇ ಸೆಪ್ಟೆಂಬರ್ 16ರಂದು ಭೂಮಿ ಶಾಖೆಗೆ ಅರ್ಜಿ ಸಲ್ಲಿಸಿದ್ದರು. ಈ ಕೆಲಸಕ್ಕಾಗಿ 25ಸಾವಿರ ರೂಗಳ ಲಂಚ ನೀಡಬೇಕು ಎಂದು ಬೇಡಿಕೆ ಇಟ್ಟು ಇಲ್ಲದ ಸಬೂಬು ಹೇಳಿ ಸುಮಾರು 5 ತಿಂಗಳಿನಿಂದ ಕೆಲಸ ಮಾಡಿಕೊಡಲು ಸತಾಯಿಸುತ್ತಿದ್ದರು.

ಇದರಿಂದ ಬೇಸತ್ತ ರೈತ ಮೋಹನ್ ಅವರು ಭ್ರಷ್ಠಾಚಾರಿ ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ನಿರ್ಧರಿಸಿ, ಎಸಿಬಿ ಅಧಿಕಾರಿಗಳಿಗೆ ದೂರು ನೀಡಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳೂ 12ಸಾವಿರ ಅಡ್ವಾನ್ ನೀಡುತ್ತೇವೆ ಎಂದು ಹೇಳಿ ಮಹಾದೇವೇಗೌಡರೊಂದಿಗೆ ಒಪ್ಪಂದ ಮಾಡಿಕೊಂಡು ಈ ವಿಚಾರವನ್ನು ಎಸಿಬಿ ಅಧಿಕಾರಿಗಳಿಗೂ ತಿಳಿಸಿದ್ದರು. ಈ ವೇಳೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳಾದ ಎಸ್.ಪಿ. ಜೆ.ರಶ್ಮಿ, ಡಿ.ಎಸ್.ಪಿ ಮಂಜುನಾಥ್, ಇನ್ಸ್ಪೆಕ್ಟರ್ ಸತೀಶ್, ರವಿಶಂಕರ್, ಸಿಬ್ಬಂದಿಯವರಾದ ವೆಂಕಟೇಶ್, ಮಹಾದೇವ್, ಪಾಪಣ್ಣ, ಕುಮಾರ್ ಮತ್ತಿತರರಿದ್ದ ಎಸಿಬಿ ಅಧಿಕಾರಿಗಳ ತಂಡವು ರವರು ಸಂಜೆ ಸುಮಾರು 5 ಗಂಟೆ  ಸಮಯದಲ್ಲಿ ದಾಳಿ ನಡೆಸಿ 12ಸಾವಿರ ರೂ ಲಂಚ ಪಡೆಯುತ್ತಿದ್ದ ಮಹಾದೇವೇಗೌಡ ಅವರನ್ನು ಲಂಚದ ಹಣದ ಸಮೇತ ವಶಕ್ಕೆ ಪಡೆದಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

Leave A Reply

Your email address will not be published.