ಕೋಟ : ನೀವೆನಾದ್ರೂ ಮನೆಯಲ್ಲಿ ನಾಯಿ ಸಾಕಿದ್ರೆ, ಹಾಗಾದ್ರೆ ಇನ್ನು ಮೂರು ದಿನ ನಾಯಿಯನ್ನು ಮನೆಯಿಂದ ಹೊರ ಬಿಡಬೇಡಿ. ಹೀಗಂತಾ ಕೋಟತಟ್ಟು ಗ್ರಾಮ ಪಂಚಾಯತ್ ಪರ್ಮಾನು ಹೊರಡಿಸಿದೆ.

ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಮತ್ತು ಲಸಿಕೆ (ಎನಿಮಲ್ ಬರ್ತ್ ಕಂಟ್ರೋಲ್ ಡಾಗ್ ರೂಲ್ಸ್ -2001 ರಂತೆ ) ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಫೆಬ್ರವರಿ 12 ರಿಂದ ಮೂರು ದಿನಗಳ ಕಾಲ ತಮ್ಮ ಮನೆಯ ಸಾಕು ನಾಯಿಗಳನ್ನು ಸಾರ್ವಜನಿಕ ಸ್ಥಳದಲ್ಲಿ ಬಿಡಬಾರದು ಅಂತಾ ಕೋಟತಟ್ಟು ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಶೈಲಾ ಎಸ್. ಪೂಜಾರಿ ಪ್ರಕಟಣೆ ಹೊರಡಿಸಿದ್ದಾರೆ.