ಸೋಮವಾರ, ಜೂನ್ 16, 2025
HomeBreakingಕೊರೊನಾ ನಡುವಲ್ಲೇ ನಿಗೂಢ ರೋಗಕ್ಕೆ ಒಂದೇ ಗ್ರಾಮದ 26 ಮಂದಿ ಸಾವು..!!

ಕೊರೊನಾ ನಡುವಲ್ಲೇ ನಿಗೂಢ ರೋಗಕ್ಕೆ ಒಂದೇ ಗ್ರಾಮದ 26 ಮಂದಿ ಸಾವು..!!

- Advertisement -

ಕಲಬುರಗಿ: ಕರೊನಾ ವೈರಸ್ ಸೋಂಕು ಜನರನ್ನು ತತ್ತರಿಸಿ ಹೋಗುವಂತೆ ಮಾಡಿದೆ. ಕೊರೊನಾ ನಡುವಲ್ಲೇ ಈ‌ ಗ್ರಾಮದಲ್ಲಿ ನಿಗೂಢ ರೋಗವೊಂದು ಕಾಣಿಸಿಕೊಂಡಿದ್ದು, 26 ಜನರನ್ನು ಬಲಿ‌ ಪಡೆದಿದೆ.

ಕಳೆದೊಂದು ವಾರದ ಅವಧಿಯಲ್ಲಿ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ‌ ಮುನ್ನಹಳ್ಳಿ ಗ್ರಾಮದಲ್ಲಿನ  ಬರೋಬ್ಬರಿ 26 ಮಂದಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದ ಬಹುತೇಕರಿಗೆ ಶೀತ, ಕೆಮ್ಮು, ಜ್ವರ ಬಾಧಿಸುತ್ತಿದ್ದು, ಗ್ರಾಮಸ್ಥರಿಗೆ ಆತಂಕ‌ ಶುರುವಾಗಿದೆ.

ಮೇಲ್ನೋಟಕ್ಕೆ ಕೊರೊನಾ ಸೋಂಕಿನ ಲಕ್ಷಣಗಳನ್ನೇ ಹೋಲುತ್ತಿದ್ದರೂ ಕೂಡ ಕೊರೊನಾ ಸೋಂಕು ಅನ್ನೋದು ಖಚಿತವಾಗಿಲ್ಲ. ಗ್ರಾಮದಲ್ಲಿ ಜನರು ಸಾಲು ಸಾಲು ಸಾವನ್ನಪ್ಪುತ್ತಿದ್ದರೂ ಕೂಡ ಇದುವರೆಗೂ ಅಧಿಕಾರಿಗಳು ಗ್ರಾಮದತ್ತ ಸುಳಿದಿಲ್ಲ. ಇದು ಗ್ರಾಮದ ಜನರ ಆಕ್ರೋಶ ಕ್ಕೆ ಕಾರಣವಾಗಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular