ರಾಯಚೂರು : car accident : ಅವರು ಕುಟುಂಬ ಸಮೇತರಾಗಿ ಹೈದರಾಬಾದ್ನಿಂದ ಗೋವಾದ ಕಡೆಗೆ ಪ್ರಯಾಣ ಬೆಳೆಸಿದ್ದರು. ಹೈದರಾಬಾದ್ನಿಂದ ಗೋವಾಕ್ಕೆ ಹೊರಡುವ ಆ ಮಾರ್ಗ ಅವರ ಪಾಲಿಗೆ ಯಮಪಾಶವಾಗಬಹುದು ಎಂಬ ಕಿಂಚಿತ್ತು ಸುಳಿವು ಕೂಡ ಯಾರಿಗಿರಲಿಲ್ಲ. ಆದರೆ ವಿಧಿಯಾಟ ಬೇರೆಯದ್ದೇ ಇತ್ತು. ಯಮನಾಗಿ ಎದುರಿಗೆ ಬಂದ ಲಾರಿ ಗುದ್ದಿದ ಪರಿಣಾಮ ಒಂದೇ ಕುಟುಂಬ ನಾಲ್ವರು ಬಲಿಯಾಗಿದ್ದಾರೆ. ರಾಯಚೂರು ಜಿಲ್ಲೆಯ ಸಿಂಧನೂರು ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ.
ಮೃತಪಟ್ಟವರನ್ನು 35 ವರ್ಷದ ಪ್ರದೀಪ್, ಮೂವತ್ತು ವರ್ಷದ ಪೂರ್ಣಿಮಾ ಹಾಗೂ ಮಕ್ಕಳಾದ 12 ವರ್ಷದ ಜಿತಿನ್ ಹಾಗೂ ಏಳು ವರ್ಷದ ಮಾಹಿನ್ ಎಂದು ಗುರುತಿಸಲಾಗಿದೆ. ಮೃತರು ಕಾರಿನಲ್ಲಿ ಹೈದರಾಬಾದ್ ನಿಂದ ಗೋವಾದ ಕಡೆಗೆ ತೆರಳುತ್ತಿದ್ದರು ಎನ್ನಲಾಗಿದೆ. ಬಾಲಯ್ಯ ಕ್ಯಾಂಪ್ ಬಳಿಯಲ್ಲಿ ಲಾರಿ ಗುದ್ದಿದ ಪರಿಣಾಮ ನಾಲ್ವರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಬಳಗಾನೂರು ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಾಲ್ವರ ಮೃತದೇಹಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅಪಘಾತ ಸಂಭವಿಸುತ್ತಿದ್ದಂತೆಯೇ ಲಾರಿ ಚಾಲಕ ಸ್ಥಳದಿಂದ ಕಾಲ್ಕಿತ್ತಿದ್ದು ಆತನ ಪತ್ತೆಗೆ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಕುಟುಂಬಸ್ಥರಿಗೆ ಪೊಲೀಸರೇ ಮಾಹಿತಿ ನೀಡಿದ್ದು ಮರಣೋತ್ತರ ಪರೀಕ್ಷೆ ಬಳಿಕ ಶವಗಳನ್ನು ಹಸ್ತಾಂತರಿಸುವ ಪ್ರಕ್ರಿಯೆ ನಡೆಯಲಿದೆ. ಬಳಗನೂರು ಪೊಲೀಸ್ ಠಾಣೆಗೆ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಮರಕ್ಕೆ ಡಿಕ್ಕಿ ಹೊಡೆದ ಕಾರು : ಇಬ್ಬರು ದುರ್ಮರಣ, ಮೂವರ ಸ್ಥಿತಿ ಗಂಭೀರ
ಆನೇಕಲ್ : ಮಳೆಗಾಲದ ಈ ಸಂದರ್ಭದಲ್ಲಿ ಎಷ್ಟು ಎಚ್ಚರಿಕೆಯಿಂದ ವಾಹನ ಚಲಾಯಿಸಿದರೂ ಸಹ ಒಂದಿಲ್ಲೊಂದು ಅವಘಡಗಳು ಸಂಭವಿಸುತ್ತಲೇ ಇರುತ್ತದೆ. ಈ ಸಮಯದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಕೂಡ ಹೆಚ್ಚಿರುತ್ತದೆ. ಆನೇಕಲ್ನ ಸೋಲೂರು ಗೇಟ್ ಬಳಿಯಲ್ಲಿ ರಸ್ತೆ ಅಪಘಾತವೊಂದು ಸಂಭವಿಸಿದೆ. ರಸ್ತೆಗೆ ಅಂಟಿಕೊಂಡಿದ್ದ ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ದಾರುಣವಾಗಿ ಮೃತಪಟ್ಟ ಘಟನೆಯೊಂದು ವರದಿಯಾಗಿದೆ.
ಕಾರು ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದರೆ ಮೂವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಮೃತ ಪಟ್ಟವರನ್ನು ಹೊಂಗಸಂದ್ರ ನಿವಾಸಿ ಮೂವತ್ತೊಂದು ವರ್ಷದ ಶಶಿಧರ್ ಹಾಗೂ ಕುಣಿಗಲ್ ಮೂಲದ ಮೂವತ್ನಾಲ್ಕು ವರ್ಷದ ಭೈರೇಶ್ ಎಂದು ಗುರುತಿಸಲಾಗಿದೆ. ಮೃತರಿಬ್ಬರೂ ಕೂಡ್ಲು ಬಳಿಯ ಗಾರ್ಮೆಂಟ್ಸ್ವೊಂದರ ನೌಕರರಾಗಿದ್ದರು ಎನ್ನಲಾಗಿದೆ.
ಇನ್ನು ಕಾರಿನ ಹಿಂಬಧಿ ಸೀಟಿನಲ್ಲಿ ಕುಳಿತುಕೊಂಡಿದ್ದ ರಾಹುಲ್. ಮಿಥುನ್ ಹಾಗೂ ತಿಪ್ಪೇಶ್ ಗಂಭೀರವಾಗಿ ಗಾಯಗೊಂಡಿದ್ದು ಇವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಯಗೊಂಡ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಆನೇಕಲ್ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಹಾಗೂ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ರಸ್ತೆಗೆ ಅಂಟಿಕೊಂಡೇ ಮರ ಇರುವುದರ ಬಗ್ಗೆ ಇಲ್ಲಿನ ನಿವಾಸಿಗಳು ಅನೇಕ ಬಾರಿ ವಲಯ ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದರು ಎನ್ನಲಾಗಿದೆ. ಆದರೆ ಈ ರೀತಿಯ ಮರಗಳನ್ನು ವಿಲೇವಾರಿ ಮಾಡುವ ಬಗ್ಗೆ ವಲಯ ಅರಣ್ಯಾಧಿಕಾರಿಗಳು ನಿರ್ಲಕ್ಷ್ಯ ತೋರಿರುವುದೇ ಈ ಅವಘಡಕ್ಕೆ ಕಾರಣ ಎನ್ನವುದು ಸ್ಥಳೀಯ ನಿವಾಸಿಗಳ ಆರೋಪವಾಗಿದೆ.
ಇದನ್ನೂ ಓದಿ : rishi sunak tops : ಬ್ರಿಟನ್ ಪ್ರಧಾನಿ ರೇಸ್ನ ಅಂತಿಮ ಸುತ್ತಿನಲ್ಲೂ ಅಗ್ರಸ್ಥಾನದಲ್ಲಿ ರಿಷಿ ಸುನಕ್
4 dies in car accident at raichur