Rishi sunak tops : ಬ್ರಿಟನ್​ ಪ್ರಧಾನಿ ರೇಸ್​ನ ಅಂತಿಮ ಸುತ್ತಿನಲ್ಲೂ ಅಗ್ರಸ್ಥಾನದಲ್ಲಿ ರಿಷಿ ಸುನಕ್​​​

ಬ್ರಿಟನ್​ : rishi sunak tops : ಸಾಕಷ್ಟು ಹಗರಣಗಳನ್ನು ಎದುರಿಸುತ್ತಿದ್ದ ಬೋರಿಸ್​ ಜಾನ್ಸನ್​ ಅನಿವಾರ್ಯವಾಗಿ ಬ್ರಿಟನ್​ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಈ ಅತ್ಯುನ್ನತ ಹುದ್ದೆಯನ್ನು ಯಾರು ಅಲಂಕರಿಸುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಮನೆ ಮಾಡಿದೆ. ಬ್ರಿಟನ್​ನಲ್ಲಿ ನೂತನ ಪ್ರಧಾನ ಮಂತ್ರಿ ಆಯ್ಕೆಗೆ ಕಸರತ್ತುಗಳು ನಡೆಯುತ್ತಿದೆ. ಸಂತೋಷಕರ ವಿಚಾರ ಅಂದರೆ ಬ್ರಿಟನ್​ ಪ್ರಧಾನಿ ರೇಸ್​ನಲ್ಲಿ ಕೇವಲ ನಾಲ್ಕುಮಂದಿ ಮಾತ್ರ ಉಳಿದುಕೊಂಡಿದ್ದು ಇವರಲ್ಲಿ ಭಾರತೀಯ ಮೂಲದ ರಿಷಿ ಸುನಕ್​ ಮೊದಲ ಸ್ಥಾನದಲ್ಲಿದ್ದಾರೆ.

ಬ್ರಿಟಿಷ್​ ಇಂಡಿಯನ್​ ಹಾಗೂ ಇನ್ಫೋಸಿಸ್​ ಸಂಸ್ಥಾಪಕ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್​ ಮೂರನೇ ಸುತ್ತಿನ ಮತದಾನದ ಸಂದರ್ಭದಲ್ಲಿ ಒಟ್ಟು 155 ಮತಗಳನ್ನು ಗಳಿಸುವಲ್ಲಿ ಯಶಸ್ಚಿಯಾಗಿದ್ದಾರೆ. ರಿಷಿ ಸುನಕ್​ ಬೋರಿಸ್​ ಜಾನ್ಸನ್​ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದರು. ಬೋರಿಸ್​ ಜಾನ್ಸನ್​ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮುನ್ನಾ ದಿನ ರಿಷಿ ಸುನಕ್​ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಇನ್ನು ಪ್ರಧಾನಿ ಸ್ಥಾನದ ಆಕಾಂಕ್ಷಿಯಾಗಿರುವ ಬ್ರಿಟನ್​ನ ಮಾಜಿ ವ್ಯಾಪಾರ ಸಚಿವ ಪೆನ್ನಿ ಮೊರ್ಡಾಂಟ್​ 82 ಮತಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನುಳಿದಂತೆ ವಿದೇಶಾಂಗ ಕಾರ್ಯದರ್ಶಿ ಲಿಜ್​ ಟ್ರಸ್​ 71 ಮತಗಳು ಹಾಗೂ ಮಾಜಿ ಸಮಾನತೆ ಸಚಿವ ಕೆಮಿ ಬಡೆನೋಚ್​​ 58 ಮತಗಳನ್ನು ಪಡೆಯುವ ಮೂಲಕ ನಂತರದ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಈ ಪ್ರಧಾನಿ ರೇಸ್​ನಲ್ಲಿದ್ದ ಟಾಮ್​ ತುಗೆಂಧತ್​​ ಕಡಿಮೆ ಮತಗಳನ್ನು ಪಡೆದು ಸ್ಪರ್ಧೆಯಿಂದ ಹೊರ ಬಿದ್ದಿದ್ದಾರೆ. ಮಾಜಿ ಚಾನ್ಸಲರ್​ ರಿಷಿ ಸುನಕ್​ ಮಾತ್ರ ಸೋಮವಾರಂದು ಸಂಸತ್ತಿನ ಕನ್ಸರ್ವೇಟಿವ್​ ಪಕ್ಷದ ಸದಸ್ಯರ ನಡುವಿನ ಮೂರನೇ ಸುತ್ತಿನ ಮತದಾನದಲ್ಲಿ ಟಾಪರ್ ಎನಿಸಿದ್ದಾರೆ.

ಇದನ್ನು ಓದಿ : Ben stokes: ಏಕದಿನ ಕ್ರಿಕೆಟ್​ಗೆ ಇಂಗ್ಲೆಂಡ್​ ಸ್ಟಾರ್​ ಆಲ್ರೌಂಡರ್​​ ಬೆನ್​ ಸ್ಟೋಕ್ಸ್​ ದಿಢೀರ್​ ವಿದಾಯ

ಇದನ್ನೂ ಓದಿ : ಇಂಗ್ಲೆಂಡ್ ನೆಲದಲ್ಲಿ ಸರಣಿ ಗೆಲ್ಲಿಸಿಕೊಟ್ಟ ‘’ಪಾಂಡು’’ಗೆ ವಿಶೇಷ ಅಭಿನಂದನೆ ತಿಳಿಸಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

ಇದನ್ನೂ ಓದಿ : BJP MLAs will fall to 60 : ಹಗರಣ, ವಿವಾದದ ಸೈಡ್ ಎಫೆಕ್ಟ್ : ಮುಂದಿನ ಚುನಾವಣೆಯಲ್ಲಿ 60 ಕ್ಕೆ ಕುಸಿಯಲಿದೆ ಬಿಜೆಪಿ ಶಾಸಕರ ಸಂಖ್ಯೆ

rishi sunak tops new uk prime minister vote as only 4 remain in race

Comments are closed.