ಮಂಗಳವಾರ, ಏಪ್ರಿಲ್ 29, 2025
Homedistrict NewsMangalore : ಶಾಕಿಂಗ್ : ಸಹಪಾಠಿಗಳ ಎದುರಲ್ಲೇ ವಿದ್ಯಾರ್ಥಿನಿಗೆ ಕಿಸ್​ ಮಾಡಿದ ವಿದ್ಯಾರ್ಥಿ :ವಿಡಿಯೋ ವೈರಲ್​

Mangalore : ಶಾಕಿಂಗ್ : ಸಹಪಾಠಿಗಳ ಎದುರಲ್ಲೇ ವಿದ್ಯಾರ್ಥಿನಿಗೆ ಕಿಸ್​ ಮಾಡಿದ ವಿದ್ಯಾರ್ಥಿ :ವಿಡಿಯೋ ವೈರಲ್​

- Advertisement -

ಮಂಗಳೂರು : ಮಕ್ಕಳು ಚೆನ್ನಾಗಿ ಓದಿ ಮುಂದೆ ಜೀವನದಲ್ಲಿ ಉದ್ಧಾರ ಆಗಲಿ ಅಂತಾ ಪೋಷಕರು ಪೈಸೆ ಪೈಸೆ ಕೂಡಿಟ್ಟು ಮಕ್ಕಳನ್ನು ಒಳ್ಳೊಳ್ಳೆ ಕಾಲೇಜಿಗೆ ಕಳಿಸ್ತಾರೆ. ಕಾಲೇಜಿನಲ್ಲಿ ಉತ್ತಮ ಜ್ಞಾನಾರ್ಜನೆ ಮಾಡಿಕೊಳ್ಳಬೇಕಾದ ಮಕ್ಕಳು ಸೋಶಿಯಲ್​ ಮೀಡಿಯಾ ಜೀವನವನ್ನು ನೋಡಿ ಅವರೂ ಹಾದಿ ತಪ್ಪುತ್ತಾರೆ. ಮಕ್ಕಳು ಕಾಲೇಜಿನಲ್ಲಿ ಓದುತ್ತಿದ್ದಾರೆ ಎಂಬ ನಂಬಿಕೆಯಲ್ಲಿ ಪೋಷಕರಿದ್ದರೆ ಕಾಲೇಜಿನಲ್ಲಿ ಮಕ್ಕಳ ಹುಚ್ಚಾಟ ಮಿತಿಮೀರಿ ಇರುತ್ತದೆ. ಇದೇ ಮಾತಿಗೆ ಪ್ರತ್ಯಕ್ಷ ಉದಾಹರಣೆ ಎಂಬಂತಹ ಘಟನೆಯೊಂದು (Mangalore student kissed) ಮಂಗಳೂರಿನ ಪ್ರತಿಷ್ಠಿತ ಪಿಯು ಕಾಲೇಜಿನಲ್ಲಿ ನಡೆದಿದೆ.

ಪ್ರತಿಷ್ಠಿತ ಪಿ.ಯು ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಪಾಠ ಕಲಿಯೋದನ್ನು ಬಿಟ್ಟು ಟ್ರತ್​ & ಡೇರ್​ ಎಂಬ ಆಟವನ್ನು ಆಡಿದ್ದಾರೆ. ಈ ಪಂದ್ಯದ ನಿಯಮದಂತೆ ವಿದ್ಯಾರ್ಥಿಯು ವಿದ್ಯಾರ್ಥಿನಿಯನ್ನು ಚುಂಬಿಸಬೇಕಿತ್ತು. ಆದರೆ ಇದನ್ನು ಮಾಡಲು ಒಂಚೂರು ಹಿಂಜರಿಕೆ, ಅವಮಾನ ಮಾಡಿಕೊಳ್ಳದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ತಮ್ಮ ಸಹಪಾಠಿಗಳ ಸಮ್ಮುಖದಲ್ಲಿಯೇ ಖುಲ್ಲಂ ಖುಲ್ಲಾ ಚುಂಬಿಸಿಕೊಂಡಿದ್ದಾರೆ.

ಈ ಸಂಪೂರ್ಣ ದೃಶ್ಯವನ್ನು ಸಹಪಾಠಿಗಳು ತಮ್ಮ ಮೊಬೈಲ್​ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ. ಹದಿ ಹರೆಯದ ವಿದ್ಯಾರ್ಥಿಗಳು ಈ ರೀತಿ ದಾರಿ ತಪ್ಪಿದ್ದನ್ನು ಕಂಡು ಸೋಶಿಯಲ್​ ಮೀಡಿಯಾದಲ್ಲಿ ನೆಟ್ಟಿಗರು ತೀವ್ರ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಮಂಗಳೂರು ಪೊಲೀಸರು ಅಲರ್ಟ್ ಆಗಿದ್ದು ಈ ಸಂಬಂಧ ತನಿಖೆ ಕೈಗೆತ್ತಿಕೊಂಡಿದ್ದಾರೆ. ಅದೇನೆ ಇರ್ಲಿ ಓದಿ ಮುಂದೆ ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕಾದ ವಿದ್ಯಾರ್ಥಿಗಳು ಈ ರೀತಿ ದಾರಿ ತಪ್ಪುತ್ತಿರೋದು ನಿಜಕ್ಕೂ ದುರಂತವೇ ಸರಿ.

ಇದನ್ನು ಓದಿ : Virat Kohli form : ವಿರಾಟ್ ಕೊಹ್ಲಿ ಫಾರ್ಮ್ ಕಂಡುಕೊಳ್ಳಲು ಬಿಸಿಸಿಐ ಬಳಿಯಿದೆ ಜಬರ್ದಸ್ತ್ ಪ್ಲಾನ್

ಇದನ್ನೂ ಓದಿ : ಮಕ್ಕಳ ಕೈಗೆ ಚಾಕಲೇಟ್‌ ನೀಡುವ ಮುನ್ನ ಹುಷಾರ್‌ : ಬೈಂದೂರಲ್ಲಿ ಚಾಕಲೇಟ್ ನುಂಗಿ ಉಸಿರುಗಟ್ಟಿ ಶಾಲಾ ಬಾಲಕಿ ಸಾವು

ಇದನ್ನೂ ಓದಿ : woman kills husband : ಜೀನ್ಸ್​ ಪ್ಯಾಂಟ್​ ಧರಿಸಿದ್ದನ್ನು ವಿರೋಧಿಸಿದ್ದಕ್ಕೆ ಪತಿಯನ್ನೇ ಕೊಂದ ಪತ್ನಿ

A student kissed a student in front of his classmates in Mangalore

RELATED ARTICLES

Most Popular