Aishwarya Rai Pregnant : 2ನೇ ಮಗುವಿಗೆ ತಾಯಿಯಾಗ್ತಿದ್ದಾರಾ ಐಶ್ವರ್ಯಾ ರೈ ಬಚ್ಛನ್​ : ಅನುಮಾನ ಹುಟ್ಟಿಸಿದ ವೈರಲ್​ ವಿಡಿಯೋ

ಮುಂಬೈ : Aishwarya Rai Pregnant : ಬಾಲಿವುಡ್​ ನಟಿ ಐಶ್ವರ್ಯಾ ರೈ ಬಚ್ಛನ್​ ಉತ್ತಮ ತಾಯಿ ಎಂಬ ವಿಚಾರದಲ್ಲಿ ಯಾವುದೇ ಸಂದೇಹವಿಲ್ಲ. ತಮ್ಮ ಬ್ಯುಸಿ ಶೆಡ್ಯೂಲ್​ನ ನಡುವೆಯೂ ನಟಿ ಐಶ್ವರ್ಯಾ ರೈ ಬಚ್ಛನ್​ ತಮ್ಮ ಪುತ್ರಿ ಆರಾಧ್ಯಾ ಬಚ್ಛನ್​ಗೆ ಸಮಯ ಕೊಡೋದನ್ನು ಮಿಸ್​ ಮಾಡೋದೇ ಇಲ್ಲ. ಇವೆಲ್ಲದರ ನಡುವೆ ಇದೀಗ ಐಶ್ವರ್ಯಾ ರೈ ಬಚ್ಛನ್​​ ಮತ್ತೆ ಗರ್ಭಿಣಿಯಾಗಿರಬಹುದಾ ಎಂಬ ಪ್ರಶ್ನೆ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೇ ಮುಂಬೈ ವಿಮಾನ ನಿಲ್ದಾಣದಲ್ಲಿ ಐಶ್ವರ್ಯಾ ರೈ ಬಚ್ಛನ್​, ಅಭಿಷೇಕ್​ ಬಚ್ಛನ್​ ಹಾಗೂ ಪುತ್ರಿ ಆರಾಧ್ಯ ಬಚ್ಛನ್​​ ಕ್ಯಾಮರಾ ಕಣ್ಣಿಗೆ ಬಿದ್ದಿದ್ದು ಇದರ ವಿಡಿಯೋ ಹಾಗೂ ಫೋಟೋಗಳನ್ನು ನೋಡಿದ ನೆಟ್ಟಿಗರು ಐಶ್ವರ್ಯಾ ಗರ್ಭಿಣಿಯಾಗಿದ್ದಾರೆಂದು ಮಾತನಾಡಿಕೊಳ್ತಿದ್ದಾರೆ.


ಉದ್ದನೆಯ ಕಪ್ಪು ಬಣ್ಣದ ಉಡುಪನ್ನು ಧರಿಸಿದ್ದ ನಟಿ ಐಶ್ವರ್ಯಾ ರೈ ಬಚ್ಛನ್​ ತಮ್ಮ ಪುತ್ರಿ ಆರಾಧ್ಯ ಬಚ್ಛನ್​ ಕೈ ಹಿಡಿದು ನಡೆದುಕೊಂಡು ಬಂದಿದ್ದಾರೆ. ಬೂದು ಬಣ್ಣ ಜಾಗರ್ಸ್​ ಹಾಗೂ ಗುಲಾಬಿ ಬಣ್ಣದ ಸ್ವೆಟ್​ ಶರ್ಟ್​ ಧರಿಸಿದ್ದ ಅಭಿಷೇಕ್​ ಕೂಡ ಪತ್ನಿ ಹಾಗೂ ಪುತ್ರಿಯ ಹಿಂದೆ ನಡೆದುಕೊಂಡು ಬಂದಿದ್ದಾರೆ.


ಇನ್​ಸ್ಟಾಗ್ರಾಂನ ಫ್ಯಾನ್​ ಪೇಜ್​​ನಲ್ಲಿ ವಿಡಿಯೋ ಅಪ್​ಲೋಡ್​ ಆಗುತ್ತಿದ್ದಂತೆಯೇ ನೆಟ್ಟಿಗರು ಕಮೆಂಟ್​ನ ಸುರಿಮಳೆಯನ್ನೇ ಹರಿಸಿದ್ದಾರೆ. ಕಪ್ಪು ಬಣ್ಣದ ಉಡುಪನ್ನು ಧರಿಸುವ ಮೂಲಕ 48 ವರ್ಷದ ನಟಿ ಐಶ್ವರ್ಯಾ ರೈ ತಮ್ಮ ಬೇಬಿ ಬಂಪ್​ನ್ನು ಮುಚ್ಚಿಡಲು ಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.


ಈ ಎಲ್ಲಾ ಊಹಾಪೋಹಗಳ ನಡುವೆಯೇ ಐಶ್ವರ್ಯಾ ರೈ ಬಚ್ಛನ್​ ತಮ್ಮ ಮುಂಬರುವ ಸಿನಿಮಾ ಪೊನ್ನಿಯಿನ್​ ಸೆಲ್ವನ್​ ಸಿನಿಮಾದ ಪೋಸ್ಟರ್ ಹಂಚಿಕೊಂಡಿದ್ದು ಸಖತ್​ ಆಗಿ ಕಾಣಿಸ್ತಿದ್ದಾರೆ. ಈ ಸಿನಿಮಾದಲ್ಲಿ ನಟಿ ಐಶ್ವರ್ಯಾ ರೈ ದ್ವಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.


ನಿನ್ನೆಯಷ್ಟೇ ನಟಿ ಕರೀನಾ ಕಪೂರ್​ ಕೂಡ ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿತ್ತು. ಆದರೆ ಈ ವದಂತಿಗಳಿಗೆ ಖುದ್ದು ತೆರೆ ಎಳೆದ ಕರೀನಾ ಕಪೂರ್​ ಸೈಫ್​ ಅಲಿ ಖಾನ್​ ಈಗಾಗಲೇ ದೇಶದ ಜನಸಂಖ್ಯೆಗೆ ತುಂಬಾನೇ ಕೊಡುಗೆ ನೀಡಿದ್ದಾರೆ. ಮತ್ತೆ ಗರ್ಭಿಣಿಯಾಗುವ ಮಾತೇ ಇಲ್ಲ ಎಂದು ನಗೆ ಚಟಾಕಿ ಹಾರಿಸಿದ್ದರು.

ಇದನ್ನು ಓದಿ : SSC Applications 2022 : ಹಿಂದಿ ಅನುವಾದಕರಿಗೆ ಇಲ್ಲಿದೆ ಸುವರ್ಣವಕಾಶ

ಇದನ್ನೂ ಓದಿ : Virat Kohli form : ವಿರಾಟ್ ಕೊಹ್ಲಿ ಫಾರ್ಮ್ ಕಂಡುಕೊಳ್ಳಲು ಬಿಸಿಸಿಐ ಬಳಿಯಿದೆ ಜಬರ್ದಸ್ತ್ ಪ್ಲಾನ್

Aishwarya Rai Pregnant With Second Child Netizens Claim She Was Hiding ‘Baby Bump’ At The Airport In Recent Pics & Videos

Comments are closed.