ಉಡುಪಿ : ಕೋಟದಲ್ಲಿರುವ ಅಘೋರೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿದೆ. ಎಪ್ರಿಲ್ 7ರಂದು ಅಘೋರೇಶ್ವರನ ಸನ್ನಿಧಿಯಲ್ಲಿ ಅದ್ದೂರಿ ಬ್ರಹ್ಮಕಲಶೋತ್ಸವ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ದೇವಸ್ಥಾನದ ಜೀರ್ಣೋದ್ದಾರ ಕಾರ್ಯಗಳಿಗೆ ಚಾಲನೆ ನೀಡಲಾಯಿತು. ಉದ್ಯಮಿ ಆನಂದ ಸಿ.ಕುಂದರ್ ಜೀರ್ಣೋದ್ದಾರ ಕಾರ್ಯಗಳಿಗೆ ಚಾಲನೆ ನೀಡಿದ್ರು.

ಆಡಳಿತ ಮೊಕ್ತೇಸರ ಚಂದ್ರಶೇಖರ ಕಾರಂತ, ಅರ್ಚಕ ಬಾಲಕೃಷ್ಣ ನಕ್ಷತ್ರಿ, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯದರ್ಶಿ ಉಮೇಶ್ ನ್ಯಾರಿ, ಕೋಶಾಧಿಕಾರಿ ಪ್ರಕಾಶ್ ಮಧ್ಯಸ್ಥ, ರಾಮಚಂದ್ರ ನ್ಯಾರಿ, ಶ್ಯಾಮಸುಂದರ ನ್ಯಾರಿ ಹಾಗೂ ಭಕ್ತರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.