ಚಿಕ್ಕಬಳ್ಳಾಪುರ : Minister Dr. K Sudhakar : ರಾಜ್ಯದಲ್ಲಿ ಮೊದಲೇ ಸರಣಿ ಕೊಲೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದಾದರ ಮೇಲೊಂದರಂತೆ ಕೊಲೆ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಆತಂಕ ಇನ್ನಷ್ಟು ಹೆಚ್ಚಿದೆ. ಈ ಎಲ್ಲದರ ನಡುವೆ ಇದೀಗ ಚಿಕ್ಕಬಳ್ಳಾಪುರದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಶರ್ಟ್ನ ಒಳಗಡೆ ಡ್ಯಾಗರ್ ಹಿಡಿದು ಬಂದಿದ್ದ ವ್ಯಕ್ತಿಯನ್ನು ಗುಡಿಬಂಡೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿಯಲ್ಲಿ ಈ ಘಟನೆ ಸಂಭವಿಸಿದೆ. ಇಂದು ಈ ಗ್ರಾಮದಲ್ಲಿ ಸಚಿವ ಡಾ. ಕೆ ಸುಧಾಕರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದೇ ಕಾರ್ಯಕ್ರಮದಲ್ಲಿ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಓಡಾಡಿದ್ದಾನೆ. ಈತನನ್ನು ಗಂಗರಾಜು ಎಂದು ಗುರುತಿಸಲಾಗಿದ್ದು ಈತನನ್ನು ಗುಡಿಬಂಡೆ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಚಿವ ಡಾ.ಕೆ ಸುಧಾಕರ್ಗೆ ಇದರ ಅರಿವಿರಲಿಲ್ಲ. ಅವರು ಜನರನ್ನು ಮಾತನಾಡಿಸುತ್ತಿದ್ದ ಸಂದರ್ಭದಲ್ಲಿ ಗಂಗರಾಜು ಜನರನ್ನು ತಳ್ಳಿದ್ದಾನೆ. ಅಲ್ಲದೇ ಶರ್ಟ್ನ ಒಳಗಡೆ ಡ್ಯಾಗರ್ ಇಟ್ಟುಕೊಂಡು ಸಚಿವರ ಹತ್ತಿರಕ್ಕೆ ಬಂದಿದ್ದಾನೆ. ಆದರೆ ಈತನ ಅನುಮಾನಾಸ್ಪದ ವರ್ತನೆಯನ್ನು ಗಮನಿಸುತ್ತಿದ್ದ ಗುಂಡಿಬಂಡೆ ಠಾಣಾ ಪೊಲೀಸರು ಗಂಗರಾಜುವನ್ನು ಬಂಧಿಸಿದ್ದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈತ ಯಾವ ಕಾರಣಕ್ಕೆ ಈ ಕಾರ್ಯಕ್ರಮದಲ್ಲಿದ್ದ..? ಈತನ ಉದ್ದೇಶ ಏನಾಗಿತ್ತು..? ಈತ ಡ್ಯಾಗರ್ ಹಿಡಿದು ಸಚಿವರ ಸಮೀಪಕ್ಕೆ ಬಂದಿದ್ದಾದರೂ ಏಕೆ ..? ಎಂಬೆಲ್ಲ ಪ್ರಶ್ನೆಗಳಿಗೆ ವಿಚಾರಣೆಯ ಮೂಲಕ ಉತ್ತರ ತಿಳಿಯಬೇಕಿದೆ.
ಇದನ್ನು ಓದಿ : Dr. C Aswattha Narayan : ಅಗತ್ಯಬಿದ್ದರೆ ದುಷ್ಕರ್ಮಿಗಳ ಎನ್ಕೌಂಟರ್ ಮಾಡಲೂ ಸರ್ಕಾರ ಸಿದ್ಧವಿದೆ : ಸಚಿವ ಡಾ. ಅಶ್ವತ್ಥ ನಾರಾಯಣ ಗುಡುಗು
ಇದನ್ನೂ ಓದಿ : Siddaramaiah : ಬಿಜೆಪಿ ಸರ್ಕಾರಕ್ಕೆ ಚಪ್ಪಲಿಯಲ್ಲಿ ಹೊಡೆಯಬೇಕೆಂದು ಹೇಳಿ ಮರುಕ್ಷಣವೇ ಹೇಳಿಕೆ ವಾಪಸ್ ಪಡೆದ ಸಿದ್ದರಾಮಯ್ಯ
ಇದನ್ನೂ ಓದಿ : KCET ಫಲಿತಾಂಶ 2022 ನಾಳೆ ಪ್ರಕಟ : ಫಲಿತಾಂಶಕ್ಕಾಗಿ kea.kar.nic.in ಕ್ಲಿಕ್ ಮಾಡಿ
ಇದನ್ನೂ ಓದಿ : closure of shops : ದಕ್ಷಿಣ ಕನ್ನಡದ ಎಲ್ಲಾ ಅಂಗಡಿ ಮುಂಗಟ್ಟುಗಳು ಸಂಜೆ 6 ಗಂಟೆಗೆ ಬಂದ್ : ಜಿಲ್ಲಾಧಿಕಾರಿ ಆದೇಶ
Arrest of a person carrying a dagger near Minister Dr. K Sudhakar