ಮಂಗಳೂರು : ಏಸುವೊಬ್ಬನೇ ದೇವರು ಎಂಬ ಮನಸ್ಥಿತಿ ಹೊಂದಿದ್ದ ವೃದ್ಧನೊಬ್ಬ ಹಿಂದೂ ಹಾಗೂ ಮುಸ್ಲಿಂ ಧಾರ್ಮಿಕ ಕೇಂದ್ರಗಳಿಗೆ ಅಪಚಾರ ಎಸಗಿದ್ದು ಈತನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿಯ ಉಣ್ಕಲ್ ಮೂಲದ 62 ವರ್ಷದ ದೇವದಾಸ್ ದೇಸಾಯಿ ಎಂಬಾತ ಇದೀಗ ಪೊಲೀಸ್ ಠಾಣೆ (Accused arrest) ಅತಿಥಿಯಾಗಿದ್ದಾನೆ.
ಕಳೆದ 20 ವರ್ಷಗಳಿಂದ ಕೋಟೆಕಾರ್ನಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ದೇವದಾಸ್ ದೇಸಾಯಿ ಚರಂಡಿಗಳಲ್ಲಿ ಸಿಗುತ್ತಿದ್ದ ಕಾಂಡೋಮ್ಗಳನ್ನು ಆಯುತ್ತಿದ್ದ ಎನ್ನಲಾಗಿದೆ. ಬಳಿಕ ಇದರ ಜೊತೆಯಲ್ಲಿ ಏಸು ಕ್ರಿಸ್ತನಿಗೆ ಸಂಬಂಧಿಸಿದ ಬರಹಗಳನ್ನು ಹಾಕುತ್ತಿದ್ದ ಈತ ಧಾರ್ಮಿಕ ಕೇಂದ್ರಗಳಲ್ಲಿ ಇದನ್ನು ಹಾಕುವ ಮೂಲಕ ಅಪಚಾರ ಎಸಗುತ್ತಿದ್ದ. ಭೂಮಿಯು ಅಂತ್ಯಕ್ಕೆ ಬಂದಿದೆ ಎಂಬ ಮನೋಸ್ಥಿತಿಯಲ್ಲಿ ಈತ ಈ ಎಲ್ಲ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ಉಳ್ಳಾಲದ ದರ್ಗಾ ಕಾಣಿಕೆ ಡಬ್ಬಿ, ಎಜೆ ಶೆಟ್ಟಿ ಬಳಿ ಇರುವ ದರ್ಗಾ ಹಾಗೂ ಬಂಗ್ರಹ ಕುಳೂರು ಗುರುದ್ವಾರ ಸೇರಿದಂತೆ ಒಟ್ಟು 18 ಧಾರ್ಮಿಕ ಕೇಂದ್ರಗಳಲ್ಲಿ ಈತ ಅಪಚಾರ ಎಸಗಿದ್ದ ಎನ್ನಲಾಗಿದೆ. ಏಸುವೊಬ್ಬನೇ ದೇವರು ಎಂದುಕೊಂಡಿದ್ದ ವ್ಯಕ್ತಿಯು ಈ ರೀತಿ ಕೃತ್ಯ ಎಸಗಿದ್ದ. ಈತನ ವಿರುದ್ಧ ಸೆಕ್ಷನ್ 153 ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆಯುವುದಾಗಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಹೇಳಿದ್ದಾರೆ.
ಈತ ಎರಡು ದಿನಗಳ ಹಿಂದಷ್ಟೇ ಮಾರ್ನಮಿಕಟ್ಟೆಯಲ್ಲಿರುವ ಕೊರಗಜ್ಜ ಗುಡಿಯನ್ನು ಈತ ಅಪವಿತ್ರಗೊಳಿಸಿದ್ದ ಎನ್ನಲಾಗಿದೆ. ಸಿಸಿ ಕ್ಯಾಮರಾದ ದೃಶ್ಯ ಆಧರಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯ ಮಾನಸಿಕ ಸ್ಥಿಮಿತತೆ ಬಗ್ಗೆ ವೈದ್ಯರಲ್ಲಿ ವರದಿ ಸಲ್ಲಿಸುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.
ಇದನ್ನು ಓದಿ : Sangolli Rayanna statue: ಸಂಗೊಳ್ಳಿ ರಾಯಣ್ಣ ಮೂರ್ತಿ ಭಗ್ನಗೊಳಿಸಿದ ಆರೋಪಿಗಳ ಗುರುತು ಪತ್ತೆ..!
ಇದನ್ನೂ ಓದಿ : Omicron Symptoms: ಈ ಲಕ್ಷಣಗಳಿದ್ದರೆ ಓಮಿಕ್ರಾನ್ ಸೋಂಕು ತಗುಲಿರಬಹುದು ಎಚ್ಚರ; ಓಮಿಕ್ರಾನ್ ಬಂದರೆ ದೇಹದಲ್ಲಿ ಆಗುವ ಬದಲಾವಣೆಗಳಿವು
ಇದನ್ನೂ ಓದಿ : Goa New Year Alert : ಗೋವಾಕ್ಕೆ ಪಾರ್ಟಿಗೆ ಹೋಗೋ ಮುನ್ನ ಎಚ್ಚರ: ಸರ್ಕಾರ ಜಾರಿಗೆ ತಂದಿದೆ ಖಡಕ್ ರೂಲ್ಸ್
ಇದನ್ನೂ ಓದಿ :Night Curfew Effect : ಕರಾವಳಿಯಲ್ಲಿ ನೈಟ್ ಕರ್ಫ್ಯೂ ಪಾಲನೆಗೆ ಕಟ್ಟುನಿಟ್ಟಿನ ಆದೇಶ: ಯಕ್ಷಗಾನ, ಕಂಬಳಕ್ಕೂ ಹೊಸ ನಿಯಮ
Arrest of accused Devadas Desai