Ola Scooter Charging Points: ನಿಮ್ಮೂರಲ್ಲೂ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಚಾರ್ಜಿಂಗ್ ಪಾಯಿಂಟ್ ತೆಗೆಯುವ ಕಾಲ ದೂರವಿಲ್ಲ

Ola ಎಲೆಕ್ಟ್ರಿಕ್‌ ವಾಹನಗಳ ಕ್ಷೇತ್ರದಲ್ಲಿ ಅತಿ ಹೆಚ್ಚು ಆಸಕ್ತಿ ತೋರಿಸುತ್ತಿರುವ ಕಂಪನಿ. ಇತ್ತೀಚಿಗಷ್ಟೇ ಓಲಾ ಎಲೆಕ್ಟ್ರಿಕ್ ಸ್ಕೂಟರ್ (Ola Electric Scooter) ಭಾರೀ ಸದ್ದು ಮಾಡಿತ್ತು.  ಎಲೆಕ್ಟ್ರಿಕ್ ಸ್ಕೂಟರ್ ಒಂದೇ ಅಲ್ಲದೇ ಸ್ಕೂಟರ್‌ಗಳಿಗೆ ಚಾರ್ಜ್ ಮಾಡಲು ಚಾರ್ಜಿಂಗ್ ಸ್ಟೇಶನ್‌ಗಳನ್ನು (Hyperchargers) ನಿರ್ಮಿಸುವತ್ತ ಇದೀಗ ಓಲಾ ಗಮನಹರಿಸಿದೆ. BPLC ಪೆಟ್ರೋಲ್ ಪಂಪ್‌ಗಳು ಮತ್ತು ವಸತಿ ಸಂಕೀರ್ಣಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಓಲಾ ಚಾರ್ಜಿಂಗ್ ಸ್ಟೇಶನ್ (Ola Charging Station) ಸ್ಥಾಪಿಸಲು ಮುಂದಾಗುತ್ತಿದೆ.

ಓಲಾ ಎಲೆಕ್ಟ್ರಿಕ್ ತನ್ನ ಗ್ರಾಹಕರಿಗೆ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳಾದ ಎಸ್1 ಮತ್ತು ಎಸ್1 ಪ್ರೊ ಅನ್ನು ಹೊರತರಲು ಪ್ರಾರಂಭಿಸಿದ ದಿನಗಳ ನಂತರ ದೇಶದಾದ್ಯಂತ ಹೈಪರ್ಚಾರ್ಜರ್ ಎಂಬ ತನ್ನ ಚಾರ್ಜಿಂಗ್ ನೆಟ್‌ವರ್ಕ್ ಅನ್ನು ಸ್ಥಾಪಿಸಲು ಪ್ರಾರಂಭಿಸಿದೆ. Ola ಎಲೆಕ್ಟ್ರಿಕ್‌ನ CEO ಮತ್ತು ಸಹ-ಸಂಸ್ಥಾಪಕ ಭವಿಶ್ ಅಗರ್ವಾಲ್, ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ಚಾರ್ಜಿಂಗ್ ಮೂಲಸೌಕರ್ಯವನ್ನು ಹೆಚ್ಚಿಸುವ ಹಲವು ಯೋಜನೆಗಳನ್ನು ಹಮ್ಮಿಕೊಂಡಿರುವುದಾಗಿ ಖಚಿತಪಡಿಸಿದ್ದಾರೆ.

ವರ್ಷಾಂತ್ಯದ ವೇಳೆಗೆ ಓಲಾ ಎಲೆಕ್ಟ್ರಿಕ್ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗಾಗಿ 4,000 ಕ್ಕೂ ಹೆಚ್ಚು ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ ಎಂದು ಓಲಾ ಸಿಇಒ ಭವಿಷ್ ಅಗರ್ವಾಲ್ ಟ್ವಿಟ್ಟರ್‌ನಲ್ಲಿ ಘೋಷಿಸಿದ್ದಾರೆ. ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಪಾಯಿಂಟ್‌ಗಳನ್ನು ಪೆಟ್ರೋಲ್ ಪಂಪ್‌ಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಲಾಗುತ್ತಿದೆ. ಅಲ್ಲದೆ ವಸತಿ ಸಂಕೀರ್ಣಗಳಲ್ಲಿಯೂ ಓಲಾ ಕಂಪನಿಯ ವತಿಯಿಂದ ಸ್ಥಾಪಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೇ ಭಾರತದ ವಿವಿಧ 400 ಊರುಗಳಲ್ಲಿ ಓಲಾ ಕಂಪನಿಯ ಎಲೆಕ್ಟ್ರಿಕ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ನಿರ್ಮಿಸಲಾಗುತ್ತಿದೆ.

ಆರರಿಂದ ಎಂಟು ವಾರಗಳಲ್ಲಿ ಈ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಲಾಗುವುದು. 2022ರ ಜುಲೈ ತಿಂಗಳ ವೇಳೆಗೆ ಗ್ರಾಹಕರ ಸೇವೆಗೆ ಇವು ಲಭ್ಯವಿರುವಂತೆ ನೋಡಿಕೊಳ್ಳಲಾಗುವುದು. 0ದಿಂದ 50 ಪ್ರತಿಶತ ಚಾರ್ಜ್ ಆಗಲು 18 ನಿಮಿಷಗಳಷ್ಟೇ ತೆಗೆದುಕೊಳ್ಳುವ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳ ಚಾರ್ಜಿಂಗ್‌ ಪಾಯಿಂಟ್‌ಗಳನ್ನು ಇನ್ನು ಕೆಲವೇ ದಿನಗಳಲ್ಲಿ ಬೆಂಗಳೂರಿನ ಹಲವು ಭಾಗಗಳು ಸೇರಿದಂತೆ ವಿವಿಧ ನಗರಗಳಲ್ಲಿ ನೋಡಬಹುದು ಪಕ್ಕಾ ಆಗಿದೆ.

ಈ ಕಂಪೆನಿಯ ಹೆಗ್ಗಳಿಕೆ ಎಂದರೆ ಬುಕಿಂಗ್ ಪ್ರಾರಂಭವಾಗಿ ಕೇವಲ ಎರಡು ದಿನಗಳಲ್ಲಿ 1100 ಕೋಟಿ ರೂಪಾಯಿಗಳ ಮೊತ್ತದ ಓಲಾ ಸ್ಕೂಟರ್ ಬುಕಿಂಗ್ ಆಗಿವೆ. ಸ್ಕೂಟರ್ ದರದ ಕುರಿತು ಹೇಳುವುದಾದರೆ ಎಸ್ 1.1 ಲಕ್ಷ ಹಾಗೂ ಎಸ್1 ಪ್ರೊ 1.3 ಲಕ್ಷ ಕ್ಕೆ ಗ್ರಾಹಕರಿಗೆ ಸಿಗಲಿದೆ.

Ola ಎಲೆಕ್ಟ್ರಿಕ್ ಸ್ಕೂಟರ್‌ಗಳ ವಿಶೇಷವೇನು?

ಬುಕಿಂಗ್ ಪ್ರಾರಂಭವಾಗಿ ಕೇವಲ ಎರಡು ದಿನಗಳಲ್ಲಿ 1100 ಕೋಟಿ ರೂಪಾಯಿಗಳ ಮೊತ್ತದ ಓಲಾ ಸ್ಕೂಟರ್ ಬುಕಿಂಗ್ ಆಗಿದ್ದವು. ಸ್ಕೂಟರ್ ದರದ ಕುರಿತು ಹೇಳುವುದಾದರೆ ಎಸ್ 1.1 ಲಕ್ಷ ಹಾಗೂ ಎಸ್1 ಪ್ರೊ 1.3 ಲಕ್ಷ ಕ್ಕೆ ಗ್ರಾಹಕರಿಗೆ ಸಿಗಲಿದೆ. ಈ ಸಿರೀಸ್ ಸ್ಕೂಟರ್ ಸ್ಮಾರ್ಟ್ ಆನ್ ಬೋರ್ಡ್ ಸಂವೇದನೆಯನ್ನು ಹೊಂದಿದೆ. ಇದರಿಂದಾಗಿ ಸ್ವಯಂ ಚಲಿತವಾಗಿ ಲಾಕ್ ಹಾಗೂ ಅನ್ ಲಾಕ್ ಆಗುತ್ತದೆ. ಅಷ್ಟೇ ಅಲ್ಲದೇ ಧ್ವನಿ ಗುರುತಿಸುವಿಕೆಯನ್ನೂ ಹೊಂದಿದ್ದು ಗ್ರಾಹಕರಿಗೆ ಮತ್ತಷ್ಟು ಸಹಕಾರಿಯಾಗಲಿದೆ ಎಂದು ಓಲಾ ಸಂಸ್ಥೆ ಹೇಳಿದೆ. ಅಷ್ಟೇ ಅಲ್ಲದೆ, ಜಿಪಿಎಸ್, ವೈ ಫೈ, ಟಚ್ ಸ್ಕ್ರೀನ್ ಹಾಗೂ 4 ಜಿ ಸೌಲಭ್ಯವೂ ಇರಲಿದೆ.

ಈ ಎರಡೂ ವಾಹನಗಳು ಒಮ್ಮೆ ಚಾರ್ಜ್ ಮಾಡಿದಲ್ಲಿ ಕ್ರಮವಾಗಿ 120 ಹಾಗೂ 180 ಕಿ ಮೀ ದೂರಗಳನ್ನು ಕ್ರಮಿಸುವ ಸಾಮರ್ಥ್ಯ ಹೊಂದಿವೆ. ಕಳ್ಳತನ ತಡೆಯುವ ನಿಟ್ಟಿನಲ್ಲಿ, ಕಳ್ಳತನ ವಿರೋಧಿ ಎಚ್ಚರಿಕೆ ವ್ಯವಸ್ಥೆಯನ್ನೂ ಇದು ಒಳಗೊಂಡಿದೆ. ಈ ವಾಹನದ ಇನ್ನೊಂದು ಪ್ರಮುಖ ಆಕರ್ಷಣೆ ಎಂದರೆ “ಹಿಲ್ ಹೋಲ್ಡ್” ವೈಶಿಷ್ಟ್ಯತೆ. ಇದು ಇಳಿಜಾರಿನಲ್ಲಿ ಸುಗಮವಾಗಿ ಸಾಗಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Ola Electric Scooter: ಕೊನೆಗೂ ಮಾರುಕಟ್ಟೆಗೆ ಲಗ್ಗೆಯಿಡಲು ಸಿದ್ಧವಾದ ಓಲಾ ಸ್ಕೂಟರ್‌ಗಳು; ಬಿಡುಗಡೆಯ ದಿನಾಂಕ ಇಲ್ಲಿದೆ

(Ola set up Hyperchargers for e scooters aims to hit 4000 by 2022)

Comments are closed.