ಚಿಕ್ಕಮಗಳೂರು : ಬಾಳೆಹೊನ್ನೂರಿನ ರಂಭಾಪುರಿಯಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮಕ್ಕೆ ಇಂದು ಚಾಲನೆ ದೊರೆಯಲಿದೆ. ಯುಗಮಾನೋತ್ಸವ, ಧರ್ಮಸಮಾರಂಭದ ಜೊತೆಗೆ ಕ್ಷೇತ್ರನಾಥ ವೀರಭದ್ರ ಸ್ವಾಮಿಯ ಮಹಾರಥೋತ್ಸವ ನಡೆಯಲಿದೆ. ಶ್ರೀ ರಂಭಾಪುರಿ ಮಠದ ಡಾ.ವೀರಸೋಮೇಶ್ವರ ಜಗದ್ಗುರುಗಳ ದಿವ್ಯ ಸಾನಿಧ್ಯದಲ್ಲಿ ಮಾರ್ಚ್ 10ರ ವರಗೆಗೆ ಯುಗಮಾನೋತ್ಸವ ನಡೆಯಲಿದೆ.
ಪ್ರತಿದಿನ ಸಂಜೆ 6.30ಕ್ಕೆ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. 5ರಂದು ಧ್ವಜಾರೋಹಣ ಮತ್ತು ಹರಿದ್ರಾಲೇಪನದೊಂದಿಗೆ ಕಾರ್ಯಕ್ರಮ ಆರಂಭವಾಗುತ್ತದೆ. 6ರಂದು ಶಿವಾದ್ವೈತ ಧರ್ಮ ಪರಿಷತ್ ಅನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಪಸಭಾಪತಿ ಎಸ್.ಎಲ್.ಧಮೇಗೌಡ, ಶಾಸಕರಾದ ಬೆಳ್ಳಿ ಪ್ರಕಾಶ್, ಡಿ.ಎಸ್.ಸುರೇಶ್, ಹರಿಹರ ಮಾಜಿ ಶಾಸಕ ಎಚ್.ಎಸ್.ಶಿವಶಂಕರ ಭಾಗವಹಿಸುವರು. ಮುಕ್ತಿಮಂದಿರದ ವಿಮಲ ರೇಣುಕ ವೀರಮುಕ್ತಿಮುನಿ ಶ್ರೀಗಳು ನೇತೃತ್ವ ವಹಿಸುವರು. ಸಿಂಧನೂರು ಸೋಮನಾಥ ಶ್ರೀ, ಬೆಳಗುಂಪದ ಅಭಿನವ ಪರ್ವತೇಶ್ವರ ಶ್ರೀ ಆಶೀರ್ವಚನ ನೀಡುವರು.

ಯುಗಮಾನೋತ್ಸವದ ನಂತರ ಶ್ರೀಗಳು ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಮಾ.16 ಮತ್ತು 17ರಂದು ಭದ್ರಾವತಿ ತಾಲೂಕು ಎಡೆಹಳ್ಳಿಯಲ್ಲಿ ಧರ್ಮ ಜಾಗೃತಿ ಸಮಾರಂಭ ಹಾಗೂ ಇಷ್ಟಲಿಂಗ ಮಹಾಪೂಜೆ, 18ರಂದು ಸೊರಬ ತಾಲೂಕು ಶಾಂತಪುರ ಮಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಧರ್ಮ ಸಮಾರಂಭ, 20ರಂದು ಅರಸೀಕೆರೆ ತಾಲೂಕು ಮಾಡಾಳು ಗ್ರಾಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವದ ಸಾನ್ನಿಧ್ಯವನ್ನು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ವಹಿಸುವರು. 22ರಂದು ಆಳಂದದ ಮಾದನಹಿಪ್ಪರಗಿಯಲ್ಲಿ ಧರ್ಮ ಜಾಗೃತಿ ಸಮಾರಂಭ, 23ರಂದು ಬಸವಕಲ್ಯಾಣದ ಗಡಿಗೌಡಗಾಂವದಲ್ಲಿ ಶ್ರೀ ಶಾಂತವೀರ ಶಿವಾಚಾರ್ಯರ ಜನ್ಮ ಸುವರ್ಣಮಹೋತ್ಸವ ಹಾಗೂ ಪಟ್ಟಾಧಿಕಾರದ ರಜತಮಹೋತ್ಸವ, 25ರ ಬೆಳಗ್ಗೆ 10.30ಕ್ಕೆ ಹುಬ್ಬಳ್ಳಿಯ ಪಾಲಿಕೊಪ್ಪದಲ್ಲಿ ಶ್ರೀ ಬಸವೇಶ್ವರ ನೂತನ ಶಿಲಾದೇಗುಲ ಉದ್ಘಾಟನೆ, ಸಂಜೆ 4.30ಕ್ಕೆ ತಿರುಮಲಕೊಪ್ಪದ ಶ್ರೀ ಜಗದ್ಗುರು ರೇಣುಕ ಧರ್ಮನಿವಾಸದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ, ಶ್ರೀ ಜಗದ್ಗುರು ರೇಣುಕಾಚಾರ್ಯ ರಥೋತ್ಸವ, ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸುವರು. 26ರ ಮಧ್ಯಾಹ್ನ 12.30ಕ್ಕೆ ತಿರುಮಲಕೊಪ್ಪದ ಶ್ರೀ ಜಗದ್ಗುರು ರೇಣುಕ ಧರ್ಮ ನಿವಾಸದಲ್ಲಿ ಸಾಮೂಹಿಕ ವಿವಾಹ, ಸಂಜೆ ಹುಬ್ಬಳ್ಳಿಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ, ಪಾರ್ವತಿ ಮಹಿಳಾ ಮಂಡಳದ ವಾರ್ಷಿಕೋತ್ಸವ, 27ರಂದು ಲಕ್ಷೆ್ಮೕಶ್ವರ ತಾಲೂಕು ಅಡರಕಟ್ಟಿಯಲ್ಲಿ ಸಾಮೂಹಿಕ ವಿವಾಹ, 29ರ ಬೆಳಗ್ಗೆ ಹಾವೇರಿ ತಾಲೂಕು ನೆಗಳೂರು ಹಿರೇಮಠದಲ್ಲಿ ಶ್ರೀ ಗುರುಶಾಂತೇಶ್ವರ ಶ್ರೀ ಪಟ್ಟಾಧಿಕಾರದ ದ್ವಾದಶ ವರ್ಧಂತಿ ಸಮಾರಂಭ, ಸಂಜೆ 5ಕ್ಕೆ ಹುಬ್ಬಳ್ಳಿ ತಾಲೂಕು ಹಳಿಯಾಳದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ರಥೋತ್ಸವದ ಸಾನ್ನಿಧ್ಯ, 30ರಂದು ಹರಿಹರ ತಾಲೂಕು ಮಲೆಬೆನ್ನೂರಿನಲ್ಲಿ ಇಷ್ಟಲಿಂಗ ಮಹಾಪೂಜೆ, 31ರಂದು ಕುಂದಗೋಳ ತಾಲೂಕು ಪಶುಪತಿಹಾಳದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಸಮಾರಂಭದ ಸಾನ್ನಿಧ್ಯ ವಹಿಸುವರು ಎಂದು ಶ್ರೀಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್.ಬಾಳನಗೌಡ್ರ ತಿಳಿಸಿದ್ದಾರೆ.