Bandhavya Blood Karnataka: ಬಾಂಧವ್ಯ ಬ್ಲಡ್ ಕರ್ನಾಟಕ ಉಸಿರು ಯೋಜನೆಯಿಂದ 2.25ಲಕ್ಷ ನೆರವು

ಉಡುಪಿ : ಸದಾ ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನ ತೊಡಗಿಸಿಕೊಂಡಿರುವ ಬಾಂಧವ್ಯ ಬ್ಲಡ್ ಕರ್ನಾಟಕ (Bandhavya Blood Karnataka) ಸಂಸ್ಥೆ ಇದೀಗ ಮತ್ತೊಂದು ಜನೋಪಯೋಗಿ ಕಾರ್ಯಕ್ಕೆ ಮುಂದಾಗಿದೆ. ಬಾಂಧವ್ಯ ಉಸಿರು ಯೋಜನೆಯ ಮೂಲಕ 2.25ಲಕ್ಷ ಚೆಕ್‌ ಅನ್ನು ಸುಮನಾ ಕಾಮತ್ ಅವರಗೆ ವೃಕ್ಷಮಾತೆ ಪದ್ಮಶ್ರೀ ನಾಡೋಜಾ ಡಾl ಸಾಲುಮರದ ತಿಮ್ಮಕ್ಕ ನವರ (Saalumarada Thimmakka) ಅವರ ಮೂಲಕ ಹಸ್ತಾಂತರ ಮಾಡಲಾಗಿದೆ.

ರಕ್ತದಾನ, ಬಡವರಿಗೆ ಸೂರು, ಅನಾರೋಗ್ಯ ಪೀಡಿತರಿಗೆ ಉಸಿರು ಯೋಜನೆಗಳ ಮೂಲಕ ಬಾಂಧವ್ಯ ಬ್ಲಡ್‌ ಗ್ರೂಪ್‌ ಸಾಕಷ್ಟು ಮಾದರಿ ಕಾರ್ಯಗಳನ್ನು ಮಾಡುತ್ತಲೇ ಬಂದಿದೆ. ಇದೀಗ ಬಾಂಧವ್ಯ ಉಸಿರು ಯೋಜನೆಯ ಮೂಲಕ ಜನೋಪಯೋಗಿ ಕಾರ್ಯವನ್ನು ಮಾಡುತ್ತಿದೆ. ಚೆಕ್‌ ವಿತರಣೆಯ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಬಾಂಧವ್ಯ ಇವರನ್ನು ಸಾಲುಮರದ ತಿಮ್ಮಕ್ಕ ಅವರು ವಿಶೇಷವಾಗಿ ಸನ್ಮಾನಿಸಿದರು. ದಿನೇಶ್‌ ಬಾಂಧವ್ಯ ತಾವೇ ಸ್ವತಃ ರಕ್ತದಾನ ಮಾಡುವ ಜೊತೆಗೆ ಇತರರಿಗೆ ರಕ್ತದಾನ ಮಾಡಲು ಮಾದರಿಯಾಗಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಪುನೀತ್ ಕೆರೇಹಳ್ಳಿ, ಸಮಾಜ ಸೇವಕ ಸುಗುಟೂರು ಮಂಜುನಾಥ್, ಕಿರುತೆರೆ ನಿರ್ದೇಶಕ ವಿಜಯ್’ಕೃಷ್ಣ ಉಡುಪಿ, ಸಮಾಜ ಸೇವಕ ಆನಂದ್ ಯಾದವ್, ಪರಿಸರ ಪ್ರೇಮಿ ಉಮೇಶ್ ವನಸಿರಿ,  ಬಾಂಧವ್ಯ ಬ್ಲಡ್ ನ ಸ್ಥಾಪಾಕಾಧ್ಯಕ್ಷ ದಿನೇಶ್ ಬಾಂಧವ್ಯ, ಅಂಬಿಕಾ ವಕ್ವಾಡಿ, ಅಶ್ವಿನಿ ವಿಜಯ್,ಶಿವು ಕುಂದಾಪುರ, ನಿತೀಶ್ ಬಾರಾಧ್ವಾಜ್, ಮನೀಶ್ ಮೊಯ್ಲಿ ಶ್ರೀನಿಧಿ ನಾಯಕ್, ಅನಂತ್ ಕೃಷ್ಣ ನಾಯಕ್ ಮುಂತಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ : Yoga For Anti-aging : ವಯಸ್ಸಿನ ಕಳೆ ಮರೆಮಾಚಲು ಈ ಐದು ಯೋಗಾಸನಗಳನ್ನು ತಪ್ಪದೇ ಮಾಡಿ

ಇದನ್ನೂ ಓದಿ : Aadhaar-Voter Id Link : ವೋಟರ್‌ ಐಡಿ ಮತ್ತು ಆಧಾರ್‌ ಅನ್ನು ಆನ್‌ಲೈನ್‌ನಲ್ಲಿ ನೀವೇ ಸುಲಭವಾಗಿ ಲಿಂಕ್ ಮಾಡಬಹುದು! ಹೇಗೆ ಅಂತೀರಾ…

ಇದನ್ನೂ ಓದಿ : Pandya Meets Big Brother : ವೆಸ್ಟ್ ಇಂಡೀಸ್’ನಲ್ಲಿ “ದೊಡ್ಡಣ್ಣ”ನನ್ನು ಭೇಟಿ ಮಾಡಿದ ಹಾರ್ದಿಕ್ ಪಾಂಡ್ಯ

ಇದನ್ನೂ ಓದಿ : Boycott Bollywood movie :ಬಾಲಿವುಡ್ ನಲ್ಲಿ ಬಾಯ್ಕಾಟ್ ಮೂವಿ ಟ್ರೆಂಡ್: ಸಂಕಷ್ಟಕ್ಕೆ ಸಿಲುಕಿದ ಅಮೀರ್,ಅಕ್ಷಯ್, ರಶ್ಮಿಕಾ

ಇದನ್ನೂ ಓದಿ : Paytm Down : ಪೇಟಿಯಂ ಆ್ಯಪ್, ವೆಬ್‌ಸೈಟ್‌ ಡೌನ್‌ : ಗ್ರಾಹಕರ ಪರದಾಟ

Bandhavya Blood Karnataka Usiru Yojana help 2.25 lakh

Comments are closed.