ಬೆಳಗಾವಿ : belagavi : ಎಂಇಎಸ್ ಗೂಂಡಾಗಳ ಪುಂಡಾಟಕ್ಕೆ ಕೊನೆ ಇಲ್ಲ ಎಂಬಂತಾಗಿದೆ. ಕರ್ನಾಟಕದಲ್ಲಿದ್ದುಕೊಂಡೇ ಪದೇ ಪದೇ ಕನ್ನಡದ ವಿಚಾರವಾಗಿ ಕಿರಿಕ್ ತೆಗೆಯುವುದು ಇವರ ಖಯಾಲಿಯಾಗಿದೆ. ಈ ಮಾತಿಗೆ ಸ್ಪಷ್ಟ ಉದಾಹರಣೆ ಎಂಬಂತೆ ಮದುವೆ ಸಮಾರಂಭವೊಂದರಲ್ಲಿ ಕನ್ನಡ ಹಾಡನ್ನು ಹಾಕಿದ್ದಾರೆ ಎಂಬ ಒಂದೇ ಕಾರಣಕ್ಕೆ ವಧು – ವರರು ಹಾಗೂ ಕನ್ನಡಿಗ ಸಂಬಂಧಿಗಳ ಮೇಲೆ ಎಂಇಎಸ್ ಗೂಂಡಾಗಳು ಹಲ್ಲೆ ನಡೆಸಿದ ಘಟನೆಯು ಬೆಳಗಾವಿ ಜಿಲ್ಲೆ ಧಾಮನೆ ಗ್ರಾಮದಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ.
ವರ ಸಿದ್ದು ಸೈಬಣ್ಣವರ್, ವಧು ರೇಷ್ಮಾ ಎಂಬವರ ಮದುವೆ ಕಾರ್ಯಕ್ರಮದಲ್ಲಿ ಕರುನಾಡೇ ಎಂಬ ಕನ್ನಡ ಹಾಡನ್ನು ಹಾಕಲಾಗಿತ್ತು. ಇದಕ್ಕೆ ಕೆಲವರು ಕನ್ನಡದ ಬಾವುಟವನ್ನು ಹಿಡಿದು ನೃತ್ಯ ಮಾಡಿದ್ದರು. ಇದರಿಂದ ಆಕ್ರೋಶಗೊಂಡ ಎಂಇಎಸ್ ಪುಂಡರು ಮದುವೆ ಮೆರವಣಿಗೆಯಲ್ಲಿಯೇ ವಧು ರೇಷ್ಮಾ , ವರ ಸಿದ್ದು ಸೈಬಣ್ಣವರ್ ಹಾಗೂ ವರನ ತಮ್ಮ ಭರಮಾ ಮೇಲೆ ಹಲ್ಲೆ ನಡೆಸಿದ್ದಾರೆ. ಗಾಯಗೊಂಡಿರುವವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು ಓರ್ವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಈ ಎಂಇಎಸ್ ಪುಂಡರು ಭರಮ ಎಂಬವರ ಬೈಕ್ಗೆ ಬೆಂಕಿ ಹಚ್ಚಿದ್ದಾರೆ. ರಾಣಿ ಚೆನ್ನಮ್ಮ ಎಂದು ಬರೆಯಲಾದ ಬೋರ್ಡ್ ಮೇಲೆ ಧರ್ಮವೀರ ಸಂಭಾಜಿ ಎಂದು ಮೆರೆದು ಉದ್ಧಟತನ ತೋರಿದ್ದಾರೆ. ಈ ಸಂಬಂಧ ಆಕಾಶ್ ಸೇರಿದಂತೆ 10 ಮಂದಿಯ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೊದಲು ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ ಎಂದು ಸ್ಥಳೀಯರು ತೀವ್ರ ಆಕ್ರೋಶ ಹೊರ ಹಾಕಿದ್ದರು.
ಇದನ್ನು ಓದಿ : IPL Crickter Umran Mailk ಭರವಸೆಯ ದ್ರುವತಾರೆ ಉಮ್ರಾನ್ ಮಲ್ಲಿಕ್
ಇದನ್ನೂ ಓದಿ : KL Rahul creates history : IPL 2022ನಿಂದ ಹೊರಬಿದ್ದ ಲಕ್ನೋ : ಇತಿಹಾಸ ಸೃಷ್ಟಿಸಿದ ಕೆ.ಎಲ್.ರಾಹುಲ್
belagavi police takes 10 mes accused to custody for setting fire to bike and assault on kannadigas