Aryan Khan : ಡ್ರಗ್​ ಸೇವನೆ ಪ್ರಕರಣದಲ್ಲಿ ಎನ್​ಸಿಬಿಯಿಂದ ಶಾರೂಕ್​ ಪುತ್ರ ಆರ್ಯನ್​ ಖಾನ್​​ಗೆ ಕ್ಲೀನ್​​ಚಿಟ್​

Aryan Khan : ಕಳೆದ ವರ್ಷ ಡ್ರಗ್​ ಪಾರ್ಟಿ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಬಾಲಿವುಡ್ ನಟ ಶಾರೂಕ್​ ಖಾನ್ ಪುತ್ರ ಆರ್ಯನ್​ ಖಾನ್​ಗೆ ಈ ಪ್ರಕರಣದಲ್ಲಿ ಬಿಗ್​ ರಿಲೀಫ್​ ದೊರಕಿದೆ. ಪ್ರಕರಣ ಸಂಬಂಧ ಎನ್​ಸಿಬಿ ತನ್ನ ದೋಷಾರೋಪ ಪಟ್ಟಿಯನ್ನು ಸಲ್ಲಿಕೆ ಮಾಡಿದೆ.

ಈ ಪ್ರಕರಣ ಸಂಬಂಧ ಎನ್​ಸಿಬಿ 14 ಮಂದಿ ಆರೋಪಿಗಳ ವಿರುದ್ಧ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಕೆ ಮಾಡಿದೆ. ಈ 14 ಮಂದಿಯಲ್ಲಿ ಆರ್ಯನ್​ ಹೆಸರು ಇಲ್ಲ. ದಾಳಿ ಸಂದರ್ಭದಲ್ಲಿ ಆರ್ಯನ್​ ಖಾನ್​ ಹಾಗೂ ಮೋಹಕ್​​ರನ್ನು ಹೊರತುಪಡಿಸಿ ಮಿಕ್ಕೆಲ್ಲ ಆರೋಪಿಗಳು ಮಾದಕದ್ರವ್ಯವನ್ನು ಹೊಂದಿದ್ದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಎಸ್‌ಐಟಿ ನಡೆಸಿದ ತನಿಖೆಯ ಆಧಾರದ ಮೇಲೆ ಎನ್‌ಡಿಪಿಎಸ್ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ 14 ಮಂದಿ ವಿರುದ್ಧ ದೂರು ದಾಖಲಿಸಲಾಗುತ್ತಿದೆ. ಸಾಕಷ್ಟು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಇತರ 6 ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಲಾಗುತ್ತಿಲ್ಲ” ಎಂದು ಅಧಿಕೃತ ಟಿಪ್ಪಣಿಯಲ್ಲಿ ತಿಳಿಸಲಾಗಿದೆ.

ಕಳೆದ ನವೆಂಬರ್​ನಲ್ಲಿ ಡ್ರಗ್ಸ್​ ಪ್ರಕರಣದಲ್ಲಿ ಎನ್​ಸಿಬಿಯಿಂದ ಬಂಧನಕ್ಕೊಳಗಾಗಿದ್ದ ಮೋಹಕ್​ ಜೈಸ್ವಾಲ್​​ಗೆ ವಿಶೇಷ ನ್ಯಾಯಾಲಯವು ಜಾಮೀನು ನೀಡಿತ್ತು . ಜೈಸ್ವಾಲ್ ಸಂಪೂರ್ಣ ನಿರಪರಾಧಿ ಮತ್ತು ಅವರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಮತ್ತು ಕೇಂದ್ರೀಯ ಸಂಸ್ಥೆಯು ಆಪಾದಿತ ಅಪರಾಧದಲ್ಲಿ ಯಾವುದೇ “ನೇರ ಪಾತ್ರ” ಅವರಿಗೆ ನೀಡಿಲ್ಲ ಎಂದು ಜಾಮೀನು ಅರ್ಜಿಯಲ್ಲಿ ತಿಳಿಸಲಾಗಿದೆ.

ಈ ಪ್ರಕರಣದಲ್ಲಿ 20 ಮಂದಿಯನ್ನು ಬಂಧಿಸಲಾಗಿದ್ದು, ಅದರಲ್ಲಿ 12 ಮಂದಿಗೆ ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯ ಜಾಮೀನು ನೀಡಿದ್ದರೆ, ಬಾಂಬೆ ಹೈಕೋರ್ಟ್ ಆರ್ಯನ್ ಖಾನ್ ಸೇರಿದಂತೆ ಮೂವರಿಗೆ ಜಾಮೀನು ಮಂಜೂರು ಮಾಡಿದೆ.ಸುಳಿವಿನ ಆಧಾರದ ಮೇಲೆ, ಎನ್‌ಸಿಬಿ ತಂಡವು ಅಕ್ಟೋಬರ್ 2 ರ ಸಂಜೆ ಮುಂಬೈ ಕರಾವಳಿಯಲ್ಲಿ ಗೋವಾ-ಬೌಂಡ್ ಕಾರ್ಡೆಲಿಯಾ ಕ್ರೂಸ್ ಮೇಲೆ ದಾಳಿ ನಡೆಸಿ ಡ್ರಗ್ಸ್ ವಶಪಡಿಸಿಕೊಂಡಿದೆ. ಆರಂಭದಲ್ಲಿ ಈ ಪ್ರಕರಣವನ್ನು ಮುಂಬೈನ ಎನ್​ಸಿಬಿ ಕೈಗೆತ್ತಿಕೊಂಡಿತ್ತು. ಬಳಿಕ ಇದರ ನೇತೃತ್ವವನ್ನು ಎಸ್​ಐಟಿಗೆ ನೀಡಲಾಗಿತ್ತು. ಡಿಡಿಜಿ ಸಂಜಯ್​ ಕುಮಾರ್​ ಸಿಂಗ್​ ನೇತೃತ್ವದ ಎನ್​ಸಿಬಿಯ ದೆಹಲಿಯ ಪ್ರಧಾನ ಕಚೇರಿಯಿಂದ ವಿಶೇಷ ತನಿಖಾ ತಂಡವನ್ನು 2021ರ ನವೆಂಬರ್​ 6ರಂದು ರಚಿಸಲಾಗಿತ್ತು.

ಇದನ್ನು ಓದಿ : KL Rahul creates history : IPL 2022ನಿಂದ ಹೊರಬಿದ್ದ ಲಕ್ನೋ : ಇತಿಹಾಸ ಸೃಷ್ಟಿಸಿದ ಕೆ.ಎಲ್.ರಾಹುಲ್‌

ಇದನ್ನೂ ಓದಿ : Mandarthi Lover suicide : ಮಂದಾರ್ತಿ ಬಳಿ ಕಾರಿನಲ್ಲಿ ನವ ಜೋಡಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್ : ಉಡುಪಿಯಲ್ಲೇ ಅಂತ್ಯ ಸಂಸ್ಕಾರ

NCB files charge sheet in drugs case; Shah Rukh Khan’s son Aryan Khan given clean chit as ‘accused not in possession of narcotics’

Comments are closed.