ಶಿವಮೊಗ್ಗ : unknown letter case : ಶಿವಮೊಗ್ಗದಲ್ಲಿ ಗಣೇಶೋತ್ಸವಕ್ಕೂ ಮುನ್ನ ಗಲಭೆ ನಡೆಸುವ ಬಗ್ಗೆ ಪ್ಲಾನ್ ರೂಪಿಸಿದ್ದಾರೆಂದು ಮಾಹಿತಿಯನ್ನು ಹೊಂದಿದ್ದ ಅನಾಮಧೇಯ ವ್ಯಕ್ತಿಯ ಪತ್ರವೊಂದು ಪೊಲೀಸರ ಕೈ ಸೇರಿತ್ತು. ಆದರೆ ಶಿವಮೊಗ್ಗ ನಗರದಲ್ಲಿ ಕೋಮು ಗಲಭೆ ಸೃಷ್ಟಿಸುವ ಬಗ್ಗೆ ಆತಂಕ ಸೃಷ್ಟಿಸಿದ್ದ ಈ ಪತ್ರಕ್ಕೆ ಇದೀಗ ಬಿಗ್ ಟ್ವಿಸ್ಟ್ ದೊರಕಿದೆ. ಅನೈತಿಕ ಸಂಬಂಧಕ್ಕಾಗಿ ಈ ರೀತಿಯ ಪತ್ರ ಬರೆಯಲಾಗಿದೆ ಎಂಬುದು ಪೊಲೀಸರ ತನಿಖೆ ವೇಳೆ ಬಯಲಾಗಿದೆ.
ಈ ವಿಚಾರವಾಗಿ ಸ್ಪಷ್ಟನೆ ನೀಡಿದ ಶಿವಮೊಗ್ಗ ಎಸ್ಪಿ ಲಕ್ಷ್ಮೀ ಪ್ರಸಾದ್, ಅಪರಿಚಿತ ಪತ್ರ ಸಿಕ್ಕ ಬಳಿಕ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅಯೂಬ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅಯೂಬ್ನನ್ನು ತನಿಖೆಗೆ ಒಳಪಡಿಸಿದ ವೇಳೆಯಲ್ಲಿ ಈ ಪ್ರಕರಣಕ್ಕೆ ಬಹುದೊಡ್ಡ ಟ್ವಿಸ್ಟ್ ಸಿಕ್ಕಿದೆ ಎಂದು ಹೇಳಿದ್ದಾರೆ.
ಫೈಸಲ್ ಎಂಬಾತನ ಪತ್ನಿಯೊಂದಿಗೆ ಅಯೂಬ್ ಅಕ್ರಮ ಸಂಬಂಧವನ್ನು ಹೊಂದಿದ್ದ. ಕೋಮು ಗಲಭೆ ಸೃಷ್ಟಿಯಾಗುತ್ತೆ .ಇದಕ್ಕೆ ಫೈಸಲ್ ಕಾರಣ ಎಂದು ಅನಾಮಧೇಯ ಪತ್ರವನ್ನು ಬಂಧಿತ ಆಯೂಬ್ ಬರೆದಿದ್ದ. ತನಿಖೆ ವೇಳೆ ಅಯೂಬ್ ಮಾಡಿರುವ ಷಡ್ಯಂತ್ರ ಬಯಲಾಗಿದೆ. ಆದರೆ ಈ ಪತ್ರದಿಂದ ಶಿವಮೊಗ್ಗದಲ್ಲಿ ನಿನ್ನೆ ರಾತ್ರಿಯಿಂದ ಆತಂಕ ಸೃಷ್ಟಿಯಾಗಿತ್ತು. ರಾತ್ರಿಯಿಂದ ಪೊಲೀಸರು ಹೈ ಅಲರ್ಟ್ ಆಗಿದ್ದರು.
ಫೈಸಲ್ ವಿವಾಹವಾಗಿ ನಾಲ್ಕು ವರ್ಷವಾಗಿತ್ತು. ಆದರೆ ಈ ಮದುವೆಗೂ ಮುನ್ನವೇ ಫೈಸಲ್ ಪತ್ನಿಗೂ ಹಾಗೂ ಅಯೂಬ್ ನಡುವೆ ಅಕ್ರಮ ಸಂಬಂಧವಿದ್ದಿತ್ತು. ಫೈಸಲ್ನನ್ನು ಜೈಲಿಗೆ ಕಳುಹಿಸಿಬಿಟ್ಟರೆ ತನ್ನ ಅಕ್ರಮ ಸಂಬಂಧವನ್ನು ಆರಾಮಾಗಿ ಮುಂದುವರಿಸಬಹುದು ಎಂಬುದು ಅಯೂಬ್ನ ಪ್ಲಾನ್ ಆಗಿತ್ತು. ಹೇಗೂ ಜಿಲ್ಲೆಯಲ್ಲಿ ಕೋಮು ಗಲಭೆ ಆತಂಕ ಇರೋದ್ರಿಂದ ಈ ಪರಿಸ್ಥಿತಿಯ ಲಾಭವನ್ನೇ ಪಡೆದುಕೊಂಡ ಅಯೂಬ್ ಈ ರೀತಿ ಅನಾಮಧೇಯ ಪತ್ರವನ್ನು ಬರೆದಿದ್ದಾನೆ.
ಅನಾಮಧೇಯ ಪತ್ರದ ಜಾಡು ಹಿಡಿದು ಹೊರಟ ಪೊಲೀಸರು ಕೊನೆಗೂ ಈ ಪ್ರಕರಣವನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಭೇದಿಸಿದ್ದಾರೆ. ಶಿವಮೊಗ್ಗದಲ್ಲಿ ಇನ್ನೂ ಸಾವರ್ಕರ್ ಫ್ಲೆಕ್ಸ್ ಗಲಾಟೆಯ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆ ಇದ್ದು ಇನ್ನೂ ನಗರದ ಮೂರು ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ.
ಇದನ್ನು ಓದಿ : KS Eshwarappa : ಸಿದ್ದರಾಮಯ್ಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡೋದನ್ನು ನೋಡಬೇಕು : ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವ್ಯಂಗ್ಯ
ಇದನ್ನೂ ಓದಿ : Basan Gowda Patil Yatnal : ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದವರ ಮೇಲೆ ನನಗೆ ಅಭಿಮಾನವಿದೆ : ಶಾಸಕ ಯತ್ನಾಳ್
Big twist in ShivaMogga’s unknown letter case