ಚಿಕ್ಕಮಗಳೂರು : MB Patil Question : ಸಾಕಷ್ಟು ವಿಘ್ನಗಳ ಬಳಿಕ ಬಿಜೆಪಿ ಕೊನೆಗೂ ಇಂದು ಜನಸ್ಪಂದನ ಕಾರ್ಯಕ್ರಮವನ್ನು ಆಯೋಜಿಸಿದೆ. ಸಿಎಂ ಬೊಮ್ಮಾಯಿ ನೇತೃತ್ವದ ಸರ್ಕಾರ ಒಂದು ವರ್ಷವನ್ನು ಪೂರೈಸಿದ ಹಿನ್ನೆಲೆಯಲ್ಲಿ ಹಾಗೂ ಬಿಜೆಪಿ ಸರ್ಕಾರವು ರಾಜ್ಯದಲ್ಲಿ ಮೂರು ವರ್ಷಗಳ ಅಧಿಕಾರಾವಧಿಯನ್ನು ಮುಗಿಸಿರುವ ಹಿನ್ನೆಲೆಯಲ್ಲಿ ಜನೋತ್ಸವ ನಡೆಸಿದೆ. ಈ ವಿಚಾರವಾಗಿ ಚಿಕ್ಕಮಗಳೂರಿನಲ್ಲಿ ಮಾತನಾಡಿದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.
ಬಿಜೆಪಿಯವರು ಏನು ಸಾಧನೆ ಮಾಡಿದ್ದಾರೆ ಅಂತಾ ಈ ಕಾರ್ಯಕ್ರಮ ಮಾಡ್ತಿದ್ದಾರೆ..? ಇಲ್ಲಿ ಬೆಂಗಳೂರು ಸ್ವಿಮ್ಮಿಂಗ್ ಪೂಲ್ ಆಗಿದೆ. ಆದರೆ ಮುಖ್ಯಮಂತ್ರಿಗಳು ಬೆಂಗಳೂರು ಪೂರ್ತಿ ಮುಳುಗಿಲ್ಲ ಎಂದು ಹೇಳ್ತಾರೆ . ಜನರಿಗೆ ಯಾವುದೇ ರೀತಿಯ ಸ್ಪಂದನೆ ಕೊಡದೇ ಇವರು ಅದೇನು ಅಂತಾ ಜನಸ್ಪಂದನಾ ಕಾರ್ಯಕ್ರಮ ಮಾಡ್ತಾರೆ ಎಂದು ಪ್ರಶ್ನೆ ಕೇಳಿದ್ದಾರೆ.
ಈ ಸರ್ಕಾರವು ಬಡ ಜನರಿಗೆ ಒಂದು ಮನೆ ಕಟ್ಟಿಕೊಡುವ ಕೆಲಸ ಮಾಡಿಲ್ಲ. ಮಳೆಯಿಂದ ಹಾನಿಗೊಳಗಾದವರಿಗೆ ಪರಿಹಾರವನ್ನು ನೀಡಿಲ್ಲ. 40 ಪರ್ಸೆಂಟ್ ಭ್ರಷ್ಟಾಚಾರವಿದು. ಇದನ್ನು ಜನಸ್ಪಂದನೆ ಕಾರ್ಯಕ್ರಮ ಅನ್ನೋಕೆ ಆಗುತ್ತಾ..? ಬಿಬಿಎಂಪಿಯಲ್ಲಿ ಇನ್ನೂ 10 ಪರ್ಸೆಂಟ್ ಭ್ರಷ್ಟಾಚಾರ ಜಾಸ್ತಿ ಇದೆ. ಚುನಾವಣೆ ಸಮೀಪಿಸುತ್ತಿದ್ದಂತೆಯೇ ಇದು 65 -70 ಪರ್ಸೆಂಟ್ಗೂ ಹೋಗುತ್ತೆ. ಜನ ನಿಮ್ಮನ್ನು ನೋಡಿ ನಗ್ತಿದ್ದಾರೆ, ನೀವು ನೋಡಿದ್ರೆ ಕಾರ್ಯಕ್ರಮ ಮಾಡುತ್ತಿದ್ದೀರಿ. ಈ ರಾಜ್ಯದಲ್ಲಿ ಸರ್ಕಾರವಿಲ್ಲ. ಸುಮ್ಮನೆ ದೂಡಿಕೊಂಡು ಹೋಗುತ್ತಿದ್ದೇವೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್ ಪ್ರತಿಕ್ರಯಿಸಿದ್ದಾರೆ.
ಇದನ್ನು ಓದಿ : janaspandana program :ಲಂಚದ ಹಣ ಬಳಸಿ ಬಿಜೆಪಿಯಿಂದ ಜನಸ್ಪಂದನ ಕಾರ್ಯಕ್ರಮ : ಸಿದ್ದರಾಮಯ್ಯ ಗಂಭೀರ ಆರೋಪ
ಇದನ್ನೂ ಓದಿ : Comeback Ajinkya Rahane: “ಆಯ್ಕೆಗಾರರೇ ಈಗೆನ್ನುತ್ತೀರಿ..” ನನ್ನನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲು ಈ ದ್ವಿಶತಕ ಸಾಕಲ್ಲವೇ?
BJP has done a public response program for what it has achieved: MB Patil Question