cradle : ಕೃಷ್ಣನೂರಿನಲ್ಲಿದೆ ಬರೋಬ್ಬರಿ155 ವರ್ಷಗಳ ಇತಿಹಾಸವಿರುವ ತೊಟ್ಟಿಲು

ಉಡುಪಿ : cradle :ತಾಯಿ ಮಡಿಲಿಗೆ ಸದೃಶವಾದುದು ತೊಟ್ಟಿಲು. ತಾಯಿಯ ಮಡಿಲಿನ ಮಮತೆಗೆ ಸಮಾನವಾಗಿ ತೊಟ್ಟಿಲಿಗೂ ಗೌರವವಿದೆ. ಉಡುಪಿಯಲ್ಲಿ 155 ವರ್ಷಗಳ ಇತಿಹಾಸವಿರುವ ತೊಟ್ಟಿಲೊಂದಿದೆ. 500ಕ್ಕೂ ಹೆಚ್ಚು ಮಕ್ಕಳನ್ನು ತೂಗಿದ, ಬೀಟಿ ಮರದಿಂದ ಅಂದು ತಯಾರಿಸಿದ ತೊಟ್ಟಿಲು ಇಂದಿಗೂ ಹೊಸತರಂತೆ ಕಂಗೊಳಿಸುತ್ತಿದೆ.

ಹೌದು..ಇದು ಅಂತಿತಾ ಸಾಮಾನ್ಯ ತೊಟ್ಟಿಲಲ್ಲ. ಇದು ಸುಮಾರು 155 ವರ್ಷಗಳ ಕಾಲ ಹಳೆಯದಾದ ತೊಟ್ಟಿಲು. ಉಡುಪಿಯ ಬಂಗೇರ ಕುಟುಂಬದ ಗೋಳಿದಡಿ ಮನೆತನಕ್ಕೆ ಸೇರಿದ ತೊಟ್ಟಿಲು. ಸುಮಾರು 155ವರ್ಷಗಳ ಹಿಂದೆ ಬಪ್ಪ ಪೂಜಾರಿ ಎಂಬವರು ಈ ತೊಟ್ಟಿಲನ್ನು ಸಿದ್ದಪಡಿಸಿದ್ದಾರೆ. ತಮ್ಮ ಮಕ್ಕಳು ಸತತ ಅಸುನೀಗಿದಾಗ ಬಹಳ ದುಖದಿಂದ ಈ ತೊಟ್ಟಿಲನ್ನು ನಿರ್ಮಿಸಿದರಂತೆ,ಆ ಬಳಿಕ ಅವರ ವಂಶ ಬೆಳಗತೊಡಗಿತು. ಅದರ ಪರಿಣಾಮ ಇಂದಿಗೂ ಗೋಳಿದಡಿ ಮನೆತನಕ್ಕೆ ಸೇರಿದ ಎಲ್ಲಾ ಕುಟುಂಬ ಸದಸ್ಯರ ಮನೆಯಲ್ಲಿ ಹೆರಿಗೆಯಾದಾಗ ಈ ತೊಟ್ಟಿಲು ವರ್ಗಾವಣೆಗೊಳ್ಳುತ್ತದೆ. ಗೋಳಿದಡಿ ಕುಟುಂಬಕ್ಕೆ ಸೇರಿದ ಸುಮಾರು 100ಕ್ಕೂ ಅಧಿಕ ಮನೆಗಳಿದ್ದು, ಯಾರದೇ ಮನೆಯಲ್ಲಿ ಹೆರಿಗೆಯಾದರೂ ಈ ತೊಟ್ಟಿಲು ಅವರ ಮನೆ ಸೇರುತ್ತದೆ.

ಇದು ಒಂದು ರೀತಿ ಮೊಬೈಲ್ ತೊಟ್ಟಿಲು,ಇದರ ಭಾರ 100 ಕೆಜಿಗಿಂತಲೂ ಅಧಿಕ. ಇಬ್ಬರು ಗಟ್ಟಿಯಾಳುಗಳು ಕೊಂಡೊಯ್ಯುವುದೂ ಕಷ್ಟ. ಆದ್ರೆ ಇದನ್ನು ಸುಲಭವಾಗಿ ಬೇರ್ಪಡಿಸಿ ಒಂದೆಡೆಯಿಂದ ಇನ್ನೊಂದೆಡೆ ವರ್ಗಾಯಿಸಬಹುದು. ಇದರ ಮೇಲಿನ ವಿಶೇಷ ನಂಬಿಕೆ ಏನಂದ್ರೆ ಇದರಲ್ಲಿ ಮಲಗಿ ಬೆಳೆದವರು ಉತ್ತಮ ಸಾಧಕರಾಗುತ್ತಾರೆ. ಈ ಕಾರಣದಿಂದ ಈ ತೊಟ್ಟಿಲಿಗೆ ಈ ಕುಟುಂಬದವರು ವಿಶೇಷ ಗೌರವ ನೀಡುತ್ತಾರೆ. ಇದು ನಮ್ಮ ಕುಟುಂಬದ ಗೌರಾವಾನ್ವಿತ ಆಸ್ತಿ ಅಂತಾ ಪೂಜಿಸುತ್ತಾರೆ. ಈ ತೊಟ್ಟಿಲು ಉಡುಪಿ ಬನ್ನಂಜೆಯ ದೂಮಪ್ಪ ಪೂಜಾರಿಯವರ ಮಗಳು ಸ್ಮಿತಾ ಅವರ ಹೆರಿಗೆ ಸಂದರ್ಭದಲ್ಲಿಯೂ ಅವರ ಮನೆ ಸೇರಿತ್ತು. ಸ್ಮಿತಾ ತಾಯಿ ,ಅಜ್ಜಿ ಪಿಜ್ಜಿ ಎಲ್ಲರೂ ಇದೇ ತೊಟ್ಟಿಲಲ್ಲಿ ತಮ್ಮ ಬಾಲ್ಯವನ್ನು ಕಳೆದಿದ್ದಾರೆ. 5ನೇ ತಲೆಮಾರಿನ ಮಗುವಿಗೆ ಆಸರೆಯಾಗಿದೆ.

ಪ್ರತೀ ಕುಟುಂಬಕ್ಕೂ ತನ್ನದೇ ಆದ ಮೂಲ ಸ್ಥಾನ, ಬನ, ದೈವಸ್ಥಾನವಿರುವ ಕರಾವಳಿಯಲ್ಲಿ ತೊಟ್ಟಿಲಿಗೂ ಇತಿಹಾಸವಿರುವುದು ಬಲು ಅಪರೂಪದ ಸಂಗತಿ. ಒಂದು ಕುಟುಂಬಕ್ಕೆ ಆಸರೆಯಾಗಿ 155 ವರ್ಷ ಕಳೆದಿರುವ ತೊಟ್ಟಿಲಿನ ಮೇಲಿನ ನಂಬಿಕೆ ನಿಜಕ್ಕೂ ಬೆರಗು ಹುಟ್ಟಿಸುತ್ತದೆ.

ಇದನ್ನು ಓದಿ : Comeback Ajinkya Rahane: “ಆಯ್ಕೆಗಾರರೇ ಈಗೆನ್ನುತ್ತೀರಿ..” ನನ್ನನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲು ಈ ದ್ವಿಶತಕ ಸಾಕಲ್ಲವೇ?

ಇದನ್ನೂ ಓದಿ : MB Patil Question :ಬಿಜೆಪಿ ಯಾವ ಸಾಧನೆ ಮಾಡಿದೆ ಅಂತಾ ಜನಸ್ಪಂದನೆ ಕಾರ್ಯಕ್ರಮ ಮಾಡಿದೆ : ಎಂ.ಬಿ ಪಾಟೀಲ್​ ಪ್ರಶ್ನೆ

A cradle with a history of 155 years in Udupi

Comments are closed.