ಶಿವಮೊಗ್ಗ : Sarvakars portrait : ದೇಶದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಗೆ ಇನ್ನೆರಡು ದಿನಗಳು ಬಾಕಿ ಇರುವಾಗಲೇ ಇಂದಿನಿಂದಲೇ ದೇಶಾದ್ಯಂತ ಸಂಭ್ರಮ ಮನೆ ಮಾಡಿದೆ. ಕೇಂದ್ರ ಸರ್ಕಾರದ ಸೂಚನೆಯಂತೆ ಇಂದಿನಿಂದಲೇ ಪ್ರತಿಯೊಂದು ಮನೆಯಲ್ಲಿಯೂ ತ್ರಿವರ್ಣ ಧ್ವಜ ರಾರಾಜಿಸುತ್ತಿದೆ. ಈ ನಡುವೆ ಶಿವಮೊಗ್ಗದ ಸಿಟಿ ಸೆಂಟರ್ನಲ್ಲಿ ಸ್ವಾತಂತ್ರ್ಯ ಸಂಭ್ರಮಾಚರಣೆಯ ನಿಮಿತ್ತ ಹಾಕಲಾದ ಸ್ವಾತಂತ್ರ್ಯ ಹೋರಾಟಗಾರರ ಫೋಟೋಗಳು ಗೊಂದಲಕ್ಕೆ ಕಾರಣವಾಗಿದ್ದು ಕೆಲ ಕಾಲ ಪ್ರತಿಕೂಲ ವಾತಾವರಣ ನಿರ್ಮಾಣವಾಗಿತ್ತು.
ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳ ನಡುವೆಯೇ ಸಾರ್ವಕರ್ ಫೋಟೋವನ್ನು ಅಳವಡಿಸಿದ ಮಾಲ್ನ ಆಡಳಿತ ಮಂಡಳಿಯ ನಡೆ ವಿರುದ್ಧ ಎಸ್ಡಿಪಿಐ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಕರ್ ಒಬ್ಬ ಸ್ವಾತಂತ್ರ್ಯ ಹೋರಾಟಗಾರನೇ ಅಲ್ಲ. ಅಂತವರ ಫೋಟೋವನ್ನು ಸ್ವಾತಂತ್ರ್ಯ ಹೋರಾಟಗಾರರ ಫೋಟೋದ ನಡುವೆ ಏಕೆ ಇಟ್ಟಿದ್ದೀರಿ ಎಂದು ಮಾಲ್ನ ಸಿಬ್ಬಂದಿಯನ್ನು ಎಸ್ಡಿಪಿಐ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡಿದ್ದಾರೆ.
ಬ್ರಿಟೀಷರಿಗೆ ಕ್ಷಮಾಪಣಾ ಪತ್ರವನ್ನು ಬರೆದುಕೊಟ್ಟ ಸಾರ್ವಕರ್ ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಎಂದು ಎನಿಸಿಕೊಳ್ಳಲು ಹೇಗೆ ಸಾಧ್ಯ ಎಂದು ಆಕ್ಷೇಪ ವ್ಯಕ್ತಪಡಿಸಿದ ಎಸ್ಡಿಪಿಐ ಕಾರ್ಯಕರ್ತರು ಸಾರ್ವಕರ್ ಭಾವಚಿತ್ರವನ್ನು ಸ್ವಾತಂತ್ರ್ಯ ಹೋರಾಟಗಾರರ ಫೋಟೋಗಳ ಸಾಲಿನಿಂದ ತೆಗೆಯಬೇಕು ಎಂದು ಆಗ್ರಹಿಸಿದ್ದಾರೆ. ಎಸ್ಡಿಪಿಐ ಆಕ್ರೋಶಕ್ಕೆ ಬಗ್ಗಿದ ಮಾಲ್ನ ಸಿಬ್ಬಂದಿ ಸಾರ್ವಕರ್ ಫೊಟೋದ ಜಾಗದಲ್ಲಿ ಅಬ್ದುಲ್ ಕಲಾಂರ ಫೋಟೋವನ್ನು ಹಾಕುತ್ತೇವೆ ಎಂದು ಹೇಳಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಎಸ್ಡಿಪಿಐ ಕಾರ್ಯಕರ್ತರು ಸಾರ್ವಕರ್ ಫೋಟೋಗೆ ತಗಾದೆ ತೆಗೆದ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ಶಿವಮೊಗ್ಗದ ಸಿಟಿ ಸೆಂಟರ್ ಮಾಲ್ ಎದುರು ಪ್ರತಿಭಟನೆಗೆ ಕುಳಿತಿದ್ದಾರೆ. ಶಿವಮೊಗ್ಗದ ಮಹಾನಗರ ಪಾಲಿಕೆಯಿಂದಲೇ ಸಿಟಿ ಸೆಂಟರ್ ಮಾಲ್ನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಆದರೆ ಎಸ್ಡಿಪಿಐ ಕಾರ್ಯಕರ್ತರು ಸಾರ್ವಕರ್ ಫೋಟೋವನ್ನು ತೆಗೆಯಬೇಕೆಂದು ಅವಾಚ್ಯ ಶಬ್ದಗಳನ್ನು ಬಳಕೆ ಮಾಡಿದ್ದಾರೆ. ಎಸ್ಡಿಪಿಐ ಕಾರ್ಯಕರ್ತರ ವಿರುದ್ಧ ದೇಶದ್ರೋಹದ ಪ್ರಕರಣವನ್ನು ದಾಖಲಿಸಿ ಅವರನ್ನು ಗಡಿಪಾರು ಮಾಡುವಂತೆ ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಇದನ್ನು ಓದಿ : KS Eshwarappa : ತ್ರಿವರ್ಣ ಧ್ವಜದಲ್ಲಿ ಕೆಂಪು ಬಣ್ಣವಿದೆ ಎಂಬ ಕಾಂಗ್ರೆಸ್ಸಿಗರಿಂದ ನಾವು ರಾಷ್ಟ್ರಭಕ್ತಿ ಕಲಿಯಬೇಕೆ : ಈಶ್ವರಪ್ಪ ವ್ಯಂಗ್ಯ
ಇದನ್ನೂ ಓದಿ : there is no change of CM : ಮುಂದಿನ ವಿಧಾನಸಭಾ ಚುನಾವಣೆಯವರೆಗೂ ಬೊಮ್ಮಾಯಿಯೇ ನಮ್ಮ ಸಿಎಂ : ಯಡಿಯೂರಪ್ಪ ಸ್ಪಷ್ಟನೆ
BJP-SDPI clash in Shivamogga mall over Sarvakars portrait