there is no change of CM : ಮುಂದಿನ ವಿಧಾನಸಭಾ ಚುನಾವಣೆಯವರೆಗೂ ಬೊಮ್ಮಾಯಿಯೇ ನಮ್ಮ ಸಿಎಂ : ಯಡಿಯೂರಪ್ಪ ಸ್ಪಷ್ಟನೆ

ಮಂಡ್ಯ : there is no change of CM : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೂ ಏಳೆಂಟು ತಿಂಗಳು ಬಾಕಿ ಇರುವಾಗಲೇ ವಿವಿಧ ಪಕ್ಷಗಳಲ್ಲಿ ಮುಂದಿನ ಸಿಎಂ ಅಭ್ಯರ್ಥಿ ಯಾರು ಎಂಬ ಚರ್ಚೆ ಜೋರಾಗಿದೆ . ಆದರೆ ಬಿಜೆಪಿಯಲ್ಲಿ ಮಾತ್ರ ಮುಂದಿನ ಚುನಾವಣೆಯ ಒಳಗಾಗಿ ರಾಜ್ಯದಲ್ಲಿ ಮತ್ತೊಬ್ಬ ನಾಯಕ ಸಿಎಂ ಪಟ್ಟಕ್ಕೆ ಏರುತ್ತಾರೆ ಎಂಬ ವಿಚಾರ ಮುನ್ನಲೆಗೆ ಬರುತ್ತಿದೆ. ರಾಜ್ಯದಲ್ಲಿ ಶೀಘ್ರದಲ್ಲಿ ಬೊಮ್ಮಾಯಿಯು ಸಿಎಂ ಸ್ಥಾನದಿಂದ ಕೆಳಗಿಳಿದು ಮತ್ತೊಬ್ಬ ನಾಯಕ ಮುಖ್ಯಮಂತ್ರಿ ಸ್ಥಾನಕ್ಕೆ ಏರಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿರುವ ಬೆನ್ನಲ್ಲೇ ಈ ಎಲ್ಲಾ ವದಂತಿಗಳಿಗೆ ಮಾಜಿ ಸಿಎಂ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.


ಮಂಡ್ಯದ ಕೆ.ಆರ್​ ಪೇಟೆಯಲ್ಲಿ ಈ ವಿಚಾರವಾಗಿ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬದಲಾವಣೆ ವಿಚಾರವಾಗಿ ಮಾಧ್ಯಮಗಳಲ್ಲಿ ಸಾಕಷ್ಟು ವಿಚಾರಗಳು ಚರ್ಚೆಯಾಗುತ್ತಿದೆ. ಈ ಬಗ್ಗೆ ಈಗಾಗಲೇ ಅಧ್ಯಕ್ಷರು ಸ್ಪಷ್ಟನೆ ನೀಡಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಮಾತೇ ಇಲ್ಲ. ಇನ್ನುಳಿದ ಏಳೆಂಟು ತಿಂಗಳು ಬಸವರಾಜ ಬೊಮ್ಮಾಯಿಯವರೇ ಮುಖ್ಯಮಂತ್ರಿಗಳಾಗಿ ಮುಂದುವರಿಯಲಿದ್ದಾರೆ ಎಂದು ಹೇಳಿದರು.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಇದೇ ವೇಳೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಯನ್ನು ಪಕ್ಷವು ತೀರ್ಮಾನಿಸಲಿದೆ. ಅವರ ಅವಧಿ ಮುಗಿದ ಬಳಿಕ ನಾಯಕರು ಈ ಬಗ್ಗೆ ತೀರ್ಮಾನವನ್ನು ಕೈಗೊಳ್ಳುತ್ತಾರೆ ಎಂದು ಹೇಳಿದರು.


ಇದಕ್ಕೂ ಮುನ್ನ ಮಂಡ್ಯದ ಬೇಬಿ ಗ್ರಾಮದಲ್ಲಿ ಪ್ರಿಯಾಂಕ್​​ ಖರ್ಗೆ ಲಂಚ – ಮಂಚ ಹೇಳಿಕೆ ವಿಚಾರವಾಗಿ ಕಿಡಿಕಾರಿದ ಅವರು, ಪ್ರಿಯಾಂಕ್​ ಖರ್ಗೆ ನೀವು ಹೇಳಿದ ಶಬ್ದದ ಬಗ್ಗೆ ಒಮ್ಮೆ ಯೋಚನೆ ಮಾಡಿ. ಹೆಣ್ಣು ಮಕ್ಕಳಿಗೆ ಶೋಭೆ, ಗೌರವ ತರುವ ಮಾತನ್ನು ನೀವಾಡಿದ್ದೀರೆ..? ಒಬ್ಬ ಕಾಂಗ್ರೆಸ್​ ಮುಖಂಡನಾಗಿ ಈ ರೀತಿ ಮಾತನಾಡಬಾರದಿತ್ತು. ಹೆಣ್ಣು ಮಕ್ಕಳ ಬಗ್ಗೆ ಈ ರೀತಿ ಹಗುರವಾಗಿ ಮಾನಾಡುವುದು ಸರಿಯಲ್ಲ. ಮೊದಲು ನಿಮ್ಮ ಹೇಳಿಕೆ ಬಗ್ಗೆ ಕ್ಷಮೆಯನ್ನು ಕೇಳಿ ಆ ಮಾತನ್ನು ವಾಪಸ್​ ತೆಗೆದುಕೊಳ್ಳಿ ಎಂದು ಕಿವಿ ಹಿಂಡಿದರು.


ಪಕ್ಷದಲ್ಲಿ ತನಗೆ ಸಿಕ್ಕಿರುವ ಗೌರವದ ವಿಚಾರವಾಗಿ ಮಾತನಾಡಿದ ಯಡಿಯೂರಪ್ಪ, ಬಿಜೆಪಿಯು ನನಗೆ ಎಲ್ಲಾ ರೀತಿಯಿಂದ ಆಶೀರ್ವಾದ ಮಾಡಿದೆ.21ನೇ ತಾರೀಖಿನಿಂದ ರಾಜ್ಯ ಪ್ರವಾಸ ಮಾಡಲಿದ್ದೇನೆ. ರಾಜ್ಯದಲ್ಲಿ ಓಡಾಟ ಮಾಡಿ ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲಿದ್ದೇವೆ. 130 ರಿಂದ 140 ಸೀಟುಗಳನ್ನು ಗೆಲ್ಲಲಿದ್ದೇವೆ ಎಂದು ಹೇಳಿದರು.

ಇದನ್ನು ಓದಿ : Jaggesh visited Mantralaya : ಬಸ್​​ಚಾರ್ಜ್​ಗೂ ಗತಿಯಿರಲಿಲ್ಲ, ಈಗ ರಾಜ್ಯಸಭಾ ಸದಸ್ಯನಾಗಿದ್ದೇನೆ: ಎಲ್ಲಾ ರಾಯರ ಕೃಪೆಯೆಂದ ಜಗ್ಗೇಶ್​​

ಇದನ್ನೂ ಓದಿ : KS Eshwarappa : ತ್ರಿವರ್ಣ ಧ್ವಜದಲ್ಲಿ ಕೆಂಪು ಬಣ್ಣವಿದೆ ಎಂಬ ಕಾಂಗ್ರೆಸ್ಸಿಗರಿಂದ ನಾವು ರಾಷ್ಟ್ರಭಕ್ತಿ ಕಲಿಯಬೇಕೆ : ಈಶ್ವರಪ್ಪ ವ್ಯಂಗ್ಯ

Yeddyurappa said that there is no change of CM in the state

Comments are closed.