ಸೋಮವಾರ, ಏಪ್ರಿಲ್ 28, 2025
Homedistrict NewsFemina Miss India fame Sini Shetty : ಮಿಸ್​ ಇಂಡಿಯಾ ಪಟ್ಟ ಅಲಂಕರಿಸಿದ ಬಳಿಕ...

Femina Miss India fame Sini Shetty : ಮಿಸ್​ ಇಂಡಿಯಾ ಪಟ್ಟ ಅಲಂಕರಿಸಿದ ಬಳಿಕ ಮೊದಲ ಬಾರಿಗೆ ಕಡಲನಗರಿಗೆ ಸಿನಿ ಶೆಟ್ಟಿ ವಿಸಿಟ್​

- Advertisement -

ಮಂಗಳೂರು : Femina Miss India fame Sini Shetty : ಸಧ್ಯ ಸಿನಿ ಶೆಟ್ಟಿ ಎಂದರೆ ಗೊತ್ತಿಲ್ಲ ಎಂಬ ಯಾವ ಕನ್ನಡಿಗರು ಸಹ ನಿಮಗೆ ಸಿಗಲಿಕ್ಕಿಲ್ಲ. ಏಕೆಂದರೆ ಮುಂಬೈನಲ್ಲಿ 2022ನೇ ಸಾಲಿನ ಫೆಮಿನಾ ಮಿಸ್​ ಇಂಡಿಯಾ ಕಿರೀಟವನ್ನು ತೊಡುವ ಮೂಲಕ ಕರಾವಳಿ ಬೆಡಗಿ ಸಿನಿ ಶೆಟ್ಟಿ ಕರ್ನಾಟಕಕ್ಕೆ ಹೊಸ ಗರಿಮೆಯನ್ನು ತಂದುಕೊಟ್ಟಿದ್ದಾರೆ. ಮುಂಬೈನ ಜಿಯೋ ವರ್ಲ್ಡ್​ ಸೆಂಟರ್​ನಲ್ಲಿ ಜುಲೈ ಮೂರರಂದು ನಡೆದಿದ್ದ ಕಾರ್ಯಕ್ರಮದಲ್ಲಿ ಉಡುಪಿ ಮೂಲದ ಬೆಡಗಿ ಸಿನಿ ಶೆಟ್ಟಿ ಮಿಸ್​ ಇಂಡಿಯಾ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು .


2022ನೇ ಸಾಲಿನ ಫೆಮಿನಾ ಮಿಸ್​ ಇಂಡಿಯಾ ಪಟ್ಟವನ್ನು ಅಲಂಕರಿಸಿದ ಬಳಿಕ ಸಿನಿ ಶೆಟ್ಟಿ ಇದೇ ಮೊದಲ ಬಾರಿಗೆ ಕಡಲ ನಗರಿಗೆ ಆಗಮಿಸಿದ್ದಾರೆ. ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಿನಿ ಶೆಟ್ಟಿಗೆ ಸಂಬಂಧಿಕರು , ಅಭಿಮಾನಿಗಳು ಹಾಗೂ ವಿಮಾನ ನಿಲ್ದಾಣದ ಸಿಬ್ಬಂದಿ ಅದ್ಧೂರಿ ಸ್ವಾಗತವನ್ನು ಕೋರಿದರು. ಪೀಚ್​ ಬಣ್ಣದ ಫಿಟ್​ & ಫ್ಲೇರ್​ ಉಡುಪು ಧರಸಿ ಅದಕ್ಕೆ ಕ್ಯಾಶುವಲ್​ ಶೂ ಮ್ಯಾಚ್​ ಮಾಡಿದ್ದ ಸಿನಿ ಶೆಟ್ಟಿ ಸಿಂಪಲ್​ ಡ್ರೆಸ್​ನಲ್ಲಿಯೂ ಅತ್ಯಂತ ಮನಮೋಹಕವಾಗಿ ಕಾಣುತ್ತಿದ್ರು.


ಬಳಿಕ ಭಾರತೀಯ ನಾರಿಯಂತೆ ಸಾಂಪ್ರದಾಯಿಕ ಸೀರೆಯನ್ನು ಧರಿಸಿ ಹೊರ ಬಂದ ಸಿನಿ ಶೆಟ್ಟಿ ಥೇಟ್​ ಅಪ್ಸರೆಯಂತೆ ಕಂಗೊಳಿಸುತ್ತಿದ್ದರು. ಗಾಢ ಮರೂನ್​ ಬಣ್ಣದ ಸೀರೆ ಅದಕ್ಕೆ ಬಂಗಾರ ಬಣ್ಣದ ಕಸೂತಿ, ಸೀರೆಗೊಪ್ಪುವಂತಹ ದೊಡ್ಡ ಕಿವಿಯೋಲೆಗಳು ಸಿನಿ ಶೆಟ್ಟಿಯ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿದ್ದವು. ಫೆಮಿನಾ ಮಿಸ್​ ಇಂಡಿಯಾ ಕಿರೀಟವನ್ನೂ ಸಹ ಸಿನಿ ಶೆಟ್ಟಿ ಧರಿಸಿದ್ದರು.


ಏರ್​ಪೋರ್ಟ್​ಗೆ ಆಗಮಿಸಿ ಸಿನಿ ಶೆಟ್ಟಿಗೆ ಆರತ್ತಿ ಎತ್ತಿ ಪುಷ್ಪಗುಚ್ಛವನ್ನು ನೀಡಿ ಭರ್ಜರಿ ಸ್ವಾಗತ ಕೋರಲಾಯ್ತು. ಅಭಿಮಾನಿಗಳು ಹಾಗೂ ಸಂಬಂಧಿಗಳು ನಾ ಮುಂದು ತಾ ಮುಂದು ಎಂದು ಸೆಲ್ಫಿಗೆ ಮುಗಿ ಬಿದ್ದ ದೃಶ್ಯ ಕೂಡ ಕಂಡು ಬಂತು. ತುಳು ಭಾಷೆಯಲ್ಲಿಯೇ ಎಲ್ಲರಿಗೂ ಧನ್ಯವಾದ ತಿಳಿಸಿದ ಸಿನಿ ಶೆಟ್ಟಿ ಮಿಸ್​ ವರ್ಲ್ಡ್​ ಆಗಬೇಕೆಂಬ ತಮ್ಮ ಬಯಕೆಯನ್ನು ಮಾಧ್ಯಮಗಳ ಜೊತೆಯಲ್ಲಿ ಹಂಚಿಕೊಂಡರು. ಅಲ್ಲದೇ ಒಳ್ಳೆಯ ಕತೆ ಸಿಕ್ಕಲ್ಲಿ ಸಿನಿಮಾಗಳಲ್ಲಿಯೂ ನಟಿಸುತ್ತೇನೆಂಬ ತಮ್ಮ ಇಂಗಿತವನ್ನು ಹೊರ ಹಾಕಿದ್ರು.

ಇದನ್ನು ಓದಿ : Kicchaverse launch :ಕಿಚ್ಚ ಸುದೀಪ ಫ್ಯಾನ್ಸ್​ಗೆ ಗುಡ್​ ನ್ಯೂಸ್​ : ಎನ್​​ಎಫ್​ಟಿಯಿಂದ ಕಿಚ್ಚವರ್ಸ್​ ಲಾಂಚ್​​

ಇದನ್ನೂ ಓದಿ : actress kajal agarwal : ನಾಲ್ಕು ತಿಂಗಳ ಕಂದಮ್ಮನೊಂದಿಗೆ ಗೋವಾ ಬೀಚ್​ನಲ್ಲಿ ಕಾಜಲ್​ ಅಗರ್ವಾಲ್​ ಎಂಜಾಯ್​

Femina Miss India fame Sini Shetty arrived in Mangalore

RELATED ARTICLES

Most Popular