Baby Dies After Monkey Throws : ಮೂರನೇ ಮಹಡಿಯಿಂದ ಮಗುವನ್ನು ಎಸೆದ ಕೋತಿ : ಕಂದಮ್ಮ ಸಾವು

ಉತ್ತರ ಪ್ರದೇಶ : Baby Dies After Monkey Throws : ಪುಟ್ಟ ಕಂದಮ್ಮಗಳು ಇರುವ ಮನೆಯ ಸದಸ್ಯರು ಎಷ್ಟು ಜಾಗರೂಕತೆಯಿಂದ ಇದ್ದರು ಸಹ ಕಡಿಮೆಯೇ. ಸಣ್ಣ ಅಜಾಗರೂಕತೆ ಕೂಡ ಮಗುವಿಗೆ ಭಾರೀ ದೊಡ್ಡ ನಷ್ಟವನ್ನುಂಟು ಮಾಡಬಹುದು. ಈ ಮಾತಿಗೆ ಪ್ರತ್ಯಕ್ಷ ಸಾಕ್ಷಿ ಎಂಬಂತೆ ಉತ್ತರ ಪ್ರದೇಶ ರಾಜ್ಯದ ಬರೇಲಿ ಗ್ರಾಮಾಂತರ ಪ್ರದೇಶದಲ್ಲಿ ಕೋತಿಯೊಂದು ಮೂರು ಅಂತಸ್ತಿನ ಮನೆಯ ಮಹಡಿಯಿಂದ ನಾಲ್ಕು ತಿಂಗಳ ಮಗುವನ್ನು ಎಸೆದ ಪರಿಣಾಮ ಆ ಮಗು ಸಾವನ್ನಪ್ಪಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭಾನುವಾರದಂದು ಕೋತಿಯ ದಾಳಿಗೆ ನಾಲ್ಕು ತಿಂಗಳ ಗಂಡು ಮಗು ಸಾವನ್ನಪ್ಪಿದ್ದ ಈ ಸಂಬಂಧ ತನಿಖೆಯನ್ನು ನಡೆಸಲು ಅರಣ್ಯ ಇಲಾಖೆಯ ತಂಡವನ್ನು ಕಳುಹಿಸಲಾಗಿದೆ ಎಂದು ಬರೇಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಲಿತ್​ ವರ್ಮಾ ಮಾಹಿತಿ ನೀಡಿದರು.

ಬರೇಲಿಯ ಡುಂಕಾ ಗ್ರಾಮದ ನಿವಾಸಿಯಾದ ನಿರ್ದೇಶ್​ ಉಪಾಧ್ಯಾಯ ಎಂಬವರು ತಮ್ಮ ಪತ್ನಿ ಹಾಗೂ ನಾಲ್ಕು ತಿಂಗಳ ಮಗುವಿನೊಂದಿಗೆ ಮೂರು ಅಂತಸ್ತಿನ ಮನೆಯ ಮಹಡಿಯ ಮೇಲೆ ನಡೆದುಕೊಂಡು ಹೋಗುತ್ತಿದ್ದರು. ಇದ್ದಕ್ಕಿದ್ದಂತೆಯೇ ಕೋತಿಗಳ ಹಿಂಡು ಮಹಡಿಯ ಮೇಲೆ ಬಂದಿದೆ. ದಂಪತಿ ಮಂಗಗಳನ್ನು ಓಡಿಸಲು ಯತ್ನಿಸಿದ್ದಾರೆ. ಆದರೆ ಕೋತಿಗಳನ್ನು ಓಡಿಸಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಮಗು ನಿರ್ದೇಶ್​ ಉಪಾಧ್ಯಾಯ ಕೈನಿಂದ ಕೆಳಗೆ ಬಿದ್ದಿದೆ. ಕೂಡಲೇ ಮಗುವನ್ನು ಕಚ್ಚಿಕೊಂಡ ಕೋತಿಯೊಂದು ಮಗುವನ್ನು ಮೂರನೇ ಮಹಡಿಯಿಂದ ಕೆಳಗೆ ಎಸೆದಿದೆ. ಬಿದ್ದ ರಭಸಕ್ಕೆ ಮಗು ಸಾವನ್ನಪ್ಪಿದೆ ಎನ್ನಲಾಗಿದೆ.

ಇದನ್ನು ಓದಿ : actress kajal agarwal : ನಾಲ್ಕು ತಿಂಗಳ ಕಂದಮ್ಮನೊಂದಿಗೆ ಗೋವಾ ಬೀಚ್​ನಲ್ಲಿ ಕಾಜಲ್​ ಅಗರ್ವಾಲ್​ ಎಂಜಾಯ್​

ಇದನ್ನೂ ಓದಿ : Kicchaverse launch :ಕಿಚ್ಚ ಸುದೀಪ ಫ್ಯಾನ್ಸ್​ಗೆ ಗುಡ್​ ನ್ಯೂಸ್​ : ಎನ್​​ಎಫ್​ಟಿಯಿಂದ ಕಿಚ್ಚವರ್ಸ್​ ಲಾಂಚ್​​

4-Month-Old Baby Dies After Monkey Throws Him Off Building In UP: Report

Comments are closed.