ಮಂಗಳೂರು : Hijab book launched :ವಿವಾದಿತ ಹಿಜಾಬ್ ಪ್ರಕರಣದ ಮೂಲಕ ಸುದ್ದಿಯಾಗಿದ್ದ ವಿದ್ಯಾರ್ಥಿನಿಯರ ಮೂಲಕ ಮಂಗಳೂರಿನಲ್ಲಿ ಸಿಎಫ್ಐ ಗರ್ಲ್ಸ್ ಕಾನ್ಫರೆನ್ಸ್ ನಡೆಸಲಾಯ್ತು. ಈ ಸಮಾವೇಶದಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಎಂಬ ಪುಸ್ತಕವನ್ನು ಬಿಡುಗಡೆ ಗೊಳಿಸಿದ್ದಾರೆ. ಹಿಜಾಬ್ ಹೋರಾಟದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿನಿಯರ ಮೂಲಕವೇ ಈ ಪುಸ್ತಕವನ್ನು ಬಿಡುಗಡೆಗೊಳಿಸಲಾಗಿದೆ. ಈ ಪುಸ್ತಕದಲ್ಲಿ ಹಿಜಾಬ್ ವಿವಾದದ ಕುರಿತು ಬರೆಯಲಾಗಿದೆ.
ಮಂಗಳೂರಿನ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಸಿಎಫ್ಐ ರಾಷ್ಟ್ರಾಧ್ಯಕ್ಷ ಎಂ.ಎಸ್.ಸಾಜೀದ್ ಹಿಜಾಬ್ ಹೋರಾಟದಲ್ಲಿ ನೀವು ಒಬ್ಬಂಟಿಯಲ್ಲ. ತಮ್ಮ ಹಕ್ಕುಗಳಿಗಾಗಿ ಕರ್ನಾಟಕದ ಯುವತಿಯರು ಹೋರಾಟಕ್ಕೆ ಇಳಿದಿದ್ದಾರೆ. ಆರ್ಎಸ್ಎಸ್ ಹಾಗೂ ಹಿಂದುತ್ವ ಎಂಬ ಫ್ಯಾಶಿನಿಸಂ ವಿರುದ್ಧ ಈ ಹೋರಾಟವನ್ನು ನಡೆಸುತ್ತಿದ್ದೇವೆ ಎಂದು ಹೇಳಿದರು.
ಮುಸ್ಲಿಂ ವಿದ್ಯಾರ್ಥಿನಿಯರು ಒಂದು ಕೈಯಲ್ಲಿ ಓದು ಮತ್ತೊಂದು ಕೈಯಲ್ಲಿ ಹೋರಾಟವನ್ನು ಮಾಡಲಿದ್ದಾರೆ. ಆರ್ಎಸ್ಎಸ್ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಹೊರಟಿದೆ. ಹಿಂದುತ್ವ ಹಾಗೂ ಹಿಂದೂ ಧರ್ಮ ಇವರೆಡರ ನಡುವಿನ ಐಡಿಯೋಲಜಿ ಬೇರೆಯೇ ಇದೆ. ಹಿಂದುತ್ವ ಎನ್ನುವುದು ಒಂದು ರಾಜಕೀಯ ಐಡಿಯೋಲಾಜಿ. ಈ ಹಿಂದುತ್ವದ ಐಡಿಯೋಲಾಜಿ ಅಡಿಯಲ್ಲಿ ಭಾರತವನ್ನು ನಿರ್ಮಿಸಲು ಆರ್ಎಸ್ಎಸ್ ಪ್ರಯತ್ನಿಸುತ್ತಿದೆ. ದೇಶದಲ್ಲಿ ಬಿಜೆಪಿ ಚುನಾಯಿತ ಸರ್ಕಾರ ಇದ್ದರೂ ಸಹ ಅದರ ಹಿಂದೆ ಇರುವುದು ಇದೇ ಆರ್ಎಸ್ಎಸ್ ಎಂದು ಗುಡುಗಿದರು.
ನಮ್ಮ ಸಂವಿಧಾನದಂತೆ ಈ ದೇಶ ನಡೆಯುತ್ತಿಲ್ಲ . ಆರ್ಎಸ್ಎಸ್ನ ಸಂವಿಧಾನದಂತೆ ಈ ದೇಶ ನಡೆಯುತ್ತಿದೆ. ದಕ್ಷಿಣ ಭಾರತದ ಕಾಲೇಜುಗಳಲ್ಲಿ ಸಿಎಫ್ ಐ ಮೇಲೆ ಕಣ್ಣಿಡಲು ಮೋಹನ್ ಭಾಗವತ್ ಹೇಳಿದ್ದಾರೆ .ನೀವು ದಕ್ಷಿಣ ಭಾರತವಲ್ಲ ಸಂಪೂರ್ಣ ದೇಶದ ಮೇಲೆ ಕಣ್ಣಿಡಿ. ಕರ್ನಾಟಕದ ಪಠ್ಯ ಪುಸ್ತಕಗಳಲ್ಲಿ ಅನೇಕ ಪಾಠಗಳನ್ನು ಕಿತ್ತು ಆರ್ಎಸ್ ಈ ದೇಶದ ಇತಿಹಾಸವನ್ನು ಬದಲಿಸಲು ಹೊರಟಿದೆ ಎಂದು ಕಿಡಿಕಾರಿದರು.
ಇದನ್ನು ಓದಿ : BCCI Ignored Sanju Samson : ನತದೃಷ್ಟ ಸಂಜು ಸ್ಯಾಮ್ಸನ್ ! ಮುಂಬೈಕರ್ ಭವಿಷ್ಯಕ್ಕಾಗಿ ಕೇರಳ ಆಟಗಾರನಿಗೆ ಇದೆಂಥಾ ಅನ್ಯಾಯ ?
ಇದನ್ನೂ ಓದಿ : Pakistan Captain Babar Backs Kohli : “ಧೈರ್ಯವಾಗಿರು ಗೆಳೆಯ” ಪಾಕ್ ನಾಯಕನಿಂದ ವಿರಾಟ್ ಕೊಹ್ಲಿ ಪರ ಬ್ಯಾಟಿಂಗ್ !
Hijab book launched by Muslim students in Mangalore