state government circular : ರಾಜ್ಯ ಸರ್ಕಾರದ ಸುತ್ತೋಲೆಯಲ್ಲಿ ನೂರೆಂಟು ತಪ್ಪು : ಕಿಡಿಕಾರಿದ ಕನ್ನಡಿಗರು

ಬೆಂಗಳೂರು : state government circular : ಕನ್ನಡ ಭಾಷೆಯನ್ನು ಅಭಿವೃದ್ಧಿಗೊಳಿಸಬೇಕು ಅಂತಾ ಸರ್ಕಾರವೇ ಹಲವಾರು ಯೋಜನೆಗಳನ್ನು ಮಾಡುತ್ತೆ. ಶಾಲಾ ವಿದ್ಯಾರ್ಥಿಗಳಿಗೆ ಅನೇಕ ಚಟುವಟಿಕೆಗಳನ್ನೂ ನಡೆಸುತ್ತೆ. ಆದರೆ ಇದೇ ರಾಜ್ಯ ಸರ್ಕಾರ ನಿನ್ನೆ ರಾತ್ರಿ ಹೊರಡಿಸಿದ ಸುತ್ತೋಲೆಯೊಂದು ರಾಜ್ಯ ಸರ್ಕಾರದ ಕನ್ನಡ ಪ್ರೇಮ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ತೋರಿಸಿದಂತಿದೆ. ಒಂದು ಸಣ್ಣ ಸುತ್ತೋಲೆಯಲ್ಲಿ ಕನ್ನಡ ಶಬ್ದಗಳನ್ನು ಸಂಪೂರ್ಣ ತಪ್ಪು ತಪ್ಪಾಗಿ ಬರೆಯಲಾಗಿದ್ದು ಇದನ್ನು ನೋಡಿದ ಕನ್ನಡಿಗರು ಸೋಶಿಯಲ್​ ಮೀಡಿಯಾದಲ್ಲಿ ಈ ಸುತ್ತೋಲೆಯ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಆಕ್ರೋಶವನ್ನು ಹೊರ ಹಾಕಿದ್ದಾರೆ.

ನಿನ್ನೆ ರಾಜ್ಯ ಸರ್ಕಾರವು ಸರ್ಕಾರಿ ಕಚೇರಿಗೆ ಸಂಬಂಧಿಸಿದಂತೆ ಒಂದು ಆದೇಶವನ್ನು ಹೊರಡಿಸಿತ್ತು. ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಖಾಸಗಿ ವ್ಯಕ್ತಿಗಳು ಇಲ್ಲಿ ವಿಡಿಯೋ ಹಾಗೂ ಫೋಟೋಗಳನ್ನು ತೆಗೆಯುವಂತಿಲ್ಲ . ಇದರಿಂದ ಮಹಿಳಾ ಸಿಬ್ಬಂದಿಗೆ ತೊಂದರೆಯಾಗುತ್ತಿದೆ ಎಂದು ಹೇಳಿತ್ತು.


ಆದರೆ ರಾಜ್ಯ ಸರ್ಕಾರದ ಈ ಆದೇಶಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಫೋಟೋ ಹಾಗೂ ವಿಡಿಯೋಗಳನ್ನು ತೆಗೆಯಬಾರದು ಅಂದರೆ ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರವನ್ನು ಬಯಲು ಮಾಡೋದು ಹೇಗೆ ಎಂದು ಪ್ರಶ್ನಿಸಿದ್ದರು. ಬಳಿಕ ತನ್ನ ತಪ್ಪಿನ ಅರಿವಾಗಿ ರಾಜ್ಯ ಸರ್ಕಾರವು ತನ್ನ ಆದೇಶವನ್ನು ಹಿಂಪಡೆದಿತ್ತು. ಆದರೆ ಈ ಸಂಬಂಧ ರಾತ್ರಿ ಹೊರಡಿಸಿದ ಸುತ್ತೋಲೆಯಲ್ಲಿ ಕನ್ನಡ ಶಬ್ದಗಳನ್ನು ತಪ್ಪು ತಪ್ಪಾಗಿ ಮುದ್ರಿಸಲಾಗಿದೆ.

ನಡವಳಿ, ಪ್ರಸತ್ತಾವನೆ, ಕರ್ನಾಟಾ, ಬಾಗ, ಕತವ, ಮೇಲೇ, ಆಡಳಿದ ಹೀಗೆ ಸಂಪೂರ್ಣ ಕಾಗುಣಿತ ತಪ್ಪಾಗಿ ಮುದ್ರಿಸಲಾಗಿದೆ. ಒಂದು ಸಣ್ಣ ಸುತ್ತೋಲೆಯಲ್ಲಿ ಬರೋಬ್ಬರಿ 8 ಕನ್ನಡ ಶಬ್ದಗಳು ತಪ್ಪಾಗಿ ಮುದ್ರಣಗೊಂಡಿರುವುದು ಕನ್ನಡಿಗರ ಕಣ್ಣು ಕೆಂಪಗಾಗಿಸಿದೆ.

ಇದನ್ನು ಓದಿ : Pakistan Captain Babar Backs Kohli : “ಧೈರ್ಯವಾಗಿರು ಗೆಳೆಯ” ಪಾಕ್ ನಾಯಕನಿಂದ ವಿರಾಟ್ ಕೊಹ್ಲಿ ಪರ ಬ್ಯಾಟಿಂಗ್ !

ಇದನ್ನೂ ಓದಿ : Sushmita Sen : ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಜೊತೆ ಮಾಜಿ ಐಪಿಎಲ್ ಬಾಸ್ ಲಲಿತ್ ಮೋದಿ ಡೇಟಿಂಗ್

ಇದನ್ನೂ ಓದಿ : GST Price Hike:ಮುಂದಿನ ವಾರದಿಂದ ಹಾಲು, ಅಕ್ಕಿ, ಮೊಸರು, ಇತರೆ ವಸ್ತುಗಳ ಮೇಲಿನ ಜಿಎಸ್‌ಟಿ ದರ ಏರಿಕೆ

Kannada words were printed wrongly in the state government circular

Comments are closed.