ಭಾನುವಾರ, ಏಪ್ರಿಲ್ 27, 2025
Homedistrict NewsMalpe Beach : ಮಲ್ಪೆ ಬೀಚಿನಲ್ಲಿ ಮೀನುಗಾರನ ಗಾಳಕ್ಕೆ ಬಿದ್ದ ಭಾರೀ ಗಾತ್ರದ ದುಬಾರಿ...

Malpe Beach : ಮಲ್ಪೆ ಬೀಚಿನಲ್ಲಿ ಮೀನುಗಾರನ ಗಾಳಕ್ಕೆ ಬಿದ್ದ ಭಾರೀ ಗಾತ್ರದ ದುಬಾರಿ ಮೀನು

- Advertisement -

ಉಡುಪಿ : Malpe Beach : ವರುಣನ ಅಬ್ಬರದಿಂದಾಗಿ ಕಳೆದ ಕೆಲವು ದಿನಗಳಿಂದ ಸಮುದ್ರದ ಕಡೆಗೆ ಮುಖ ಮಾಡದ ಕಡಲ ಮಕ್ಕಳು ಇದೀಗ ಮತ್ತೆ ಮೀನುಗಾರಿಕೆ ಚಟುವಟಿಕೆಯನ್ನು ಚುರುಕುಗೊಳಿಸಿದ್ದಾರೆ. ಉಡುಪಿಯ ಮಲ್ಪೆ ಬೀಚಿನಲ್ಲಿಯೂ ಸಹ ಮೀನುಗಾರಿಕೆಯ ಚಟುವಟಿಕೆಗಳು ಚುರುಕು ಪಡೆದುಕೊಂಡಿದೆ. ಅದೇ ರೀತಿ ಇಂದು ಕೂಡ ಮೀನನ್ನು ಹಿಡಿಯಲು ಬಲೆ ಬೀಸಿದ್ದ ಮೀನುಗಾರರೊಬ್ಬರಿಗೆ ಭಾರೀ ಗಾತ್ರದ ಎರಡು ದುಬಾರಿ ಮೀನುಗಳು ಬಲೆಗೆ ಬಿದ್ದಿದ್ದು ಬಂಪರ್​ ಹೊಡೆದಂತಾಗಿದೆ.


ಬಿಡುವಿನ ವೇಳೆಯಲ್ಲಿ ಹವ್ಯಾಸಕ್ಕೆಂದು ಮೀನುಗಾರಿಕೆ ಮಾಡುವ ನಾಗೇಶ್​ ಎಂಬವರಿಗೆ ಇಂದು ಅದೃಷ್ಟ ಖುಲಾಯಿಸಿದೆ. ಮಲ್ಪೆಯ ಕಡಲಿನಲ್ಲಿ ಮೀನಿಗಾಗಿ ಗಾಳ ಹಾಕಿದ ನಾಗೇಶ್​ ಬಲೆಗೆ ಭಾರೀ ಗಾತ್ರದ ಎರಡು ಮೀನುಗಳು ಬಲೆಗೆ ಬಿದ್ದಿದೆ. ಮುರು ಹಾಗೂ ಕೊಕ್ಕರ ಎಂಬ ಹೆಸರಿನ ಮಾರುಕಟ್ಟೆಯಲ್ಲಿ ಭಾರೀ ಡಿಮ್ಯಾಂಡ್ ಹೊಂದಿರುವ 2 ಮೀನುಗಳು ಇಂದು ಬಲೆಗೆ ಬಿದ್ದಿವೆ.


ಮುರು ಮೀನು ಬರೋಬ್ಬರಿ 25 ಕಿಲೋ ಗ್ರಾಮ್​ ತೂಕವನ್ನು ಹೊಂದಿದ್ದರೆ , ಕೊಕ್ಕರ ಮೀನು 15 ಕೆಜಿ ತೂಕವನ್ನು ಹೊಂದಿದೆ. ಎರಡು ಮೀನುಗಳನ್ನು ಬಲೆಗೆ ಬೀಸಿದ ನಾಗೇಶ್​ ಖುಷಿಯಿಂದ ಹಿರಿ ಹಿರಿ ಹಿಗ್ಗಿದ್ದಾರೆ. ಎರಡೂ ಮೀನುಗಳು ದುಬಾರಿ ಬೆಲೆಯನ್ನು ಹೊಂದಿರುವುದರಿಂದ ನಾಗೇಶ್​ಗೆ ಇಂದು ಅದೃಷ್ಟ ಖುಲಾಯಿಸಿದಂತಾಗಿದೆ.

ಇದನ್ನು ಓದಿ : BS Yediyurappa Return : ರಾಜಾಹುಲಿ ರಿಟರ್ನ್ಸ್ ಗೆ ಶಾಸಕರ ಕಸರತ್ತು: ಬಿಜೆಪಿಯಲ್ಲಿ ಸಹಿ ಸಂಗ್ರಹ ಅಭಿಯಾನ

ಇದನ್ನೂ ಓದಿ :  children are being victimized : ಶಿವಮೊಗ್ಗದ ಪ್ರತಿಷ್ಠಿತ ಕಾಲೇಜಿನಲ್ಲಿ ನಶೆಯಲ್ಲಿ ತೇಲಾಡಿದ ವಿದ್ಯಾರ್ಥಿಗಳು

Huge fish caught in fishermen’s net at Malpe Beach

RELATED ARTICLES

Most Popular