ಮಂಗಳವಾರ, ಏಪ್ರಿಲ್ 29, 2025
Homedistrict NewsMuruga Mutt : ಗೋವಾಕ್ಕೆ ಪಲಾಯನ ಮಾಡಿದ್ರಾ ಮುರುಘಾ ಶರಣರು : ನಂಬರ್​ಪ್ಲೇಟ್​ ಇಲ್ಲದ ಕಾರಿನಿಂದ...

Muruga Mutt : ಗೋವಾಕ್ಕೆ ಪಲಾಯನ ಮಾಡಿದ್ರಾ ಮುರುಘಾ ಶರಣರು : ನಂಬರ್​ಪ್ಲೇಟ್​ ಇಲ್ಲದ ಕಾರಿನಿಂದ ಎಸ್ಕೇಪ್​

- Advertisement -

ಚಿತ್ರದುರ್ಗ : Muruga Mutt : ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಎದುರಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣವು ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅಕ್ಕ ಮಹಾದೇವಿ ವಸತಿ ನಿಲಯದಲ್ಲಿದ್ದ ವಿದ್ಯಾರ್ಥಿನಿಯರ ಮೇಲೆ ಮುರುಘಾ ಶರಣರು ಲೈಂಗಿಕ ರೀತಿಯಲ್ಲಿ ಬಳಸಿಕೊಂಡಿದ್ದಾರೆಂಬ ಗಂಭೀರ ಆರೋಪ ಎದುರಾಗಿರುವ ಹಿನ್ನೆಲೆಯಲ್ಲಿ ಮಠದ ಬಗ್ಗೆ ಪರ – ವಿರೋಧದ ಚರ್ಚೆಗಳು ಈಗಾಗಲೇ ಹುಟ್ಟಿಕೊಂಡಿವೆ.


ಈ ನಡುವೆ ತಮ್ಮ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬರುತ್ತಿದ್ದಂತೆಯೇ ಮಠದಿಂದ ಮರುಘಾ ಶರಣರು ನಾಪತ್ತೆಯಾಗಿದ್ದಾರಾ ಎಂಬ ಅನುಮಾನ ಶುರುವಾಗಿದೆ. ಮಠದ ಆವರಣವು ಬೆಳಗ್ಗೆಯಿಂದ ಬಿಕೋ ಎನ್ನುತ್ತಿದ್ದು ಮಠದ ಭಕ್ತರಲ್ಲಿ ಆತಂಕ ಹೆಚ್ಚಾಗಿದೆ. ಬೆಳಗ್ಗೆಯಿಂದ ಮುರುಘಾ ಶರಣರು ಮಠದ ಆವರಣದಲ್ಲೆಲ್ಲೂ ಕಾಣಿಸಿಕೊಂಡಿಲ್ಲ. ಹೀಗಾಗಿ ಅವರು ಮಠದ ಆವರಣದಿಂದ ಹೊರ ನಡೆದಿದ್ದಾರಾ ಎಂಬ ಅನುಮಾನ ಶುರುವಾಗಿದೆ.


ಇಂದು ಸಂತ್ರಸ್ತ ಬಾಲಕಿಯರು ಸೆಕ್ಷನ್​ 164ರ ಅಡಿಯಲ್ಲಿ ಹೇಳಿಕೆ ದಾಖಲಿಸುತ್ತಿರುವ ಹಿನ್ನೆಲೆಯಲ್ಲಿ ಬಂಧನ ಭೀತಿಯಿಂದ ಸ್ವಾಮೀಜಿಗಳು ಮಠದಿಂದ ಪಲಾಯನ ಮಾಡಿದ್ದಾರಾ ಎಂಬ ಅನುಮಾನ ದಟ್ಟವಾಗುತ್ತಿದೆ. ಪ್ರತಿ ದಿನವೂ ಮುರುಘಾ ಶರಣರು ಬೆಳಗ್ಗೆಯಾಗುತ್ತಿದ್ದಂತೆಯೇ ತಮ್ಮ ಭಕ್ತರನ್ನು ಭೇಟಿಯಾಗುತ್ತಿದ್ದರು. ಆದ್ದರಿಂದ ಮರುಘಾ ಶರಣರು ಮಠದಲ್ಲಿ ಆವರಣದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ಇರುವ ಮೂಲಕ ಅನುಮಾನಕ್ಕೆ ಎಡೆ ಮಾಡಿದ್ದಾರೆ.


ಇನ್ನು ಮರುಘಾ ಶರಣರು ಮಠದಿಂದ ನಾಪತ್ತೆಯಾಗಿದ್ದಾರೆ ಎಂಬ ವದಂತಿ ಬೆನ್ನಲ್ಲೇ ಚಿತ್ರದುರ್ಗ ಗ್ರಾಮಾಂತರ ಠಾಣಾ ಪೊಲೀಸರು ಮಠಕ್ಕೆ ಆಗಮಿಸಿದ್ದಾರೆ ಎನ್ನಲಾಗಿದೆ. ತಡರಾತ್ರಿಯೇ ಮಠದಿಂದ ಪಲಾಯನ ಮಾಡಿರುವ ಸ್ವಾಮೀಜಿಗಳು ಅಜ್ಞಾತ ಸ್ಥಳಕ್ಕೆ ತೆರಳಿರುವ ಸಾಧ್ಯತೆಯಿದೆ. ಸ್ವಾಮೀಜಿಗಳನ್ನು ಸಂಪರ್ಕಿಸಲು ಪೊಲೀಸರು ಹರಸಾಹಸ ಪಡ್ತಿದ್ದಾರೆ. ಮೂಲಗಳ ಪ್ರಕಾರ ಕೆ.ಸಿ ವೀರೇಂದ್ರಪಪ್ಪಿ ಸಹಾಯವನ್ನು ಪಡೆದು ಮುರುಘಾ ಶರಣರು ಗೋವಾಕ್ಕೆ ಪಲಾಯನ ಮಾಡಿದ್ದಾರೆಂದು ಹೇಳಲಾಗ್ತಿದೆ.


ಬೆಳಗ್ಗಿನ ಜಾವ ಸುಮಾರಿಗೆ ನಂಬರ್​ ಪ್ಲೇಟ್​ ಇಲ್ಲ ಕ್ರೆಟಾ ಕಾರಿನಲ್ಲಿ ಮುರುಘಾ ಶರಣರು ತೆರಳಿದ್ದಾರೆ ಎನ್ನಲಾಗಿದೆ. ಪ್ರಭಾವಿ ವ್ಯಕ್ತಿಯಾಗಿರುವ ಕೆ.ಸಿ ವಿರೇಂದ್ರಪ್ಪಿ ಗೋವಾದಲ್ಲಿ ಪ್ರಭಾವವನ್ನು ಹೊಂದಿದ್ದಾರೆ. ಗೋವಾದಲ್ಲಿ ಕ್ಯಾಸಿನೋ, ಲಾಡ್ಜ್​ ಸೇರಿದಂತೆ ವಿವಿಧ ವ್ಯವಹಾರಗಳನ್ನು ಹೊಂದಿದ್ದಾರೆ. ಲಿಂಗಾಯತ ಸಮುದಾಯದ ಮುಖಂಡ ಹಾಗೂ ಜೆಡಿಎಸ್​ ಅಭ್ಯರ್ಥಿಯಾಗಿರುವ ಪಪ್ಪಿ ಮರುಘಾ ಶರಣರನ್ನು ಗೋವಾಕ್ಕೆ ಕರೆದುಕೊಂಡು ಹೋಗಿರುವ ಸಾಧ್ಯತೆಯಿದೆ.


ಇತ್ತ ಬಾಲಕಿಯರು ನೆಲೆಸಿರುವ ಬಾಲ ಮಂದಿರಕ್ಕೆ ಮಕ್ಕಳ ಆಯೋಗದ ಅಧ್ಯಕ್ಷರು, ಸಮಿತಿ ಸದಸ್ಯರು, ನ್ಯಾಯಾಧೀಶರು, ಜಿಲ್ಲಾ ಪಂಚಾಯಿತಿ ಸಿಇಒ, ಜಿಲ್ಲಾಧಿಕಾರಿ, ಎಸ್ಪಿ ಭೇಟಿ ನೀಡಿದ್ದಾರೆ. ಬಾಲಕಿಯರನ್ನು ಭೇಟಿಯಾಗಿರುವ ರಾಜ್ಯ ಮಕ್ಕಳ ಹಕ್ಕು ಆಯೋಗದ ಅಧ್ಯಕ್ಷೆ ಜಯಶ್ರೀ ಸಂತ್ರಸ್ತೆಯರಿಂದ ಹೇಳಿಕೆಯನ್ನು ಪಡೆಯಲಿದ್ದಾರೆ. ಬಾಲಮಂದಿರದ ನಂತರ ಮುರುಘಾ ಮಠದ ಹಾಸ್ಟಲ್ಗೂ ಜಯಶ್ರೀ ಭೇಟಿ ನೀಡಲಿದ್ದಾರೆ.

ಇದನ್ನು ಓದಿ : cut down valuable trees : ಸರ್ಕಾರಿ ಅಧಿಕಾರಿಗಳಿಂದಲೇ ಬೆಲೆಬಾಳುವ ಮರಗಳಿಗೆ ಕೊಡಲಿಯೇಟು: ಪ್ರಕರಣ ಮುಚ್ಚಿಹಾಕಲು ಮಾಸ್ಟರ್​ಪ್ಲಾನ್​

ಇದನ್ನೂ ಓದಿ : Heavy rains in Karnataka : ಕರ್ನಾಟಕದ ಹಲವೆಡೆ ಭಾರಿ ಮಳೆ : ಜನ ಜೀವನ ಸಂಪೂರ್ಣ ಅಸ್ತವ್ಯಸ್ತ

It is possible that the Swamiji of Muruga Mutt moved to Goa

RELATED ARTICLES

Most Popular