Minister Umesh Katti : ಗಾಲ್ಫ್​​ ಮೈದಾನದಲ್ಲಿ ಬಗೆಹರಿಯದ ಚಿರತೆ ಸಮಸ್ಯೆ : ನನ್ನ ರಾಜೀನಾಮೆಯಿಂದ ಚಿರತೆ ಸಿಗುತ್ತೆ ಎಂದರೆ ನಾನು ಸಿದ್ಧ : ಸಚಿವ ಕತ್ತಿ

ಬೆಳಗಾವಿ: Minister Umesh Katti : ನಗರದ ಗಾಲ್ಫ್ ಮೈದಾನದಲ್ಲಿ ಪ್ರತ್ಯಕ್ಷವಾಗಿರುವ ಚಿರತೆ ಸೆರೆ ಕಾರ್ಯಾಚರಣೆ ಇಂದು ಸಹ ಮುಂದುವರಿದಿದೆ. 25 ದಿನವಾದರೂ ಚಿರತೆ ಹಿಡಿಯಲು ಸಾಧ್ಯವಾಗದಿರುವ ಬಗ್ಗೆ ನಿನ್ನೆ ಕೈ ಕಾರ್ಯಕರ್ತೆಯರು ಸಚಿವ ಉಮೇಶ್ ಕತ್ತಿ ರಾಜೀನಾಮೆಗೆ ಒತ್ತಾಯಿಸಿದ್ದರು‌. ಗಾಲ್ಫ್ ಮೈದಾನಕ್ಕೆ ಕೈಯಲ್ಲಿ ಕೋಲು ಹಿಡಿದುಕೊಂಡು ಬಂದಿದ್ದ ಕಾರ್ಯಕರ್ತೆಯರು 24 ಗಂಟೆಯೊಳಗೆ ಚಿರತೆ ಸೆರೆ ಹಿಡಿಯಲು ಸಾಧ್ಯ ಆಗದೇ ಇದ್ರೆ ಉಮೇಶ್ ಕತ್ತಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ಸಚಿವ ಉಮೇಶ್ ಕತ್ತಿ ವಿಜಯಪುರದಲ್ಲಿ ಪ್ರತಿಕ್ರಿಯೆ ನೀಡಿದ್ದು ನಾನು ರಾಜೀನಾಮೆ ಕೊಟ್ಟರೆ ಚಿರತೆ ಸಿಗುತ್ತದೆ ಎಂದರೆ ನಾಳೆಯೇ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದಾರೆ.

ನಾಳೆ ಬೆಳಗ್ಗೆ ನಾನು ರಾಜೀನಾಮೆ ಕೊಡಲು ಸಿದ್ದ. ಚಿರತೆ ಸಿಕ್ಕರೆ ನಂದೇನು ತಕರಾರಿಲ್ಲ ಎಂದು ಹೇಳಿರುವ ಸಚಿವ ಉಮೇಶ್ ಕತ್ತಿ ಚಿರತೆ ಹಿಡಿಯಲು ಉತ್ತರ ಕರ್ನಾಟಕ ಭಾಗದ ಸ್ಟಾಫ್ ಹಾಕಿದ್ದೇವೆ. ಆನೆಗಳನ್ನು ತಂದಿದ್ದೇವೆ. ಆದ್ರೆ ಇಲ್ಲಿವರೆಗೂ ಚಿರತೆ ಯಾರಿಗೂ ಏನು ಮಾಡಿಲ್ಲ, ಚಿರತೆ ಇನ್ನು ಸಿಕ್ಕಿಲ್ಲಾ. ಗೋಲ್ಫ್ ಕೋರ್ಟ್ ಸುತ್ತಮುತ್ತಾ ತಿರುಗಾಡುತ್ತಿದೆ ಎನ್ನಲಾಗಿದೆ. ಆದ್ರೆ ಮೂರು ದಿನಗಳಿಂದ ಚಿರತೆ ಕಂಡು ಬಂದಿಲ್ಲ. ಅದು ಬೆಟ್ಟಕ್ಕೆ ಹೋಗಿದೆ ಎಂದು ಅಂದಾಜಿಸಲಾಗಿದೆ. ಹಾಗೊಂದು ವೇಳೆ ನಿಮಗೇನಾದರೂ ಕಂಡರೆ ನಿಮ್ಮನ್ನು ಹಿಡಿಯಲು ಕಳಿಸೋಣ ಎಂದು ಸಚಿವ ಉಮೇಶ್ ಕತ್ತಿ ಕೈ ಕಾರ್ಯಕರ್ತೆಯರಿಗೆ ಟಾಂಗ್ ಕೊಟ್ಟರು.

ಇನ್ನು ಇಂದು ಕೂಡ ಎಂಬತ್ತು ಜನ ಸಿಬ್ಬಂದಿ, ಎರಡು ಜೆ.ಸಿ.ಬಿ, ಎರಡು ಆನೆಗಳಿಂದ ಚಿರತೆ ಸೆರೆ ಕಾರ್ಯಾಚರಣೆ ಮುಂದುವರಿಸಲಾಗಿದೆ. ಪ್ರತಿದಿನ 250 ಎಕರೆ ಪ್ರದೇಶದಲ್ಲಿರುವ ಗಾಲ್ಫ್ ಮೈದಾನವನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಶೋಧ ಮಾಡುತ್ತಿದ್ದು ಇದೀಗ ಚಿರತೆ ಸೆರೆಗೆ ಹನಿಟ್ರ್ಯಾಒ್ ಅಸ್ತ್ರವನ್ನು ಪ್ರಯೋಗ ಮಾಡಲಾಗುತ್ತಿದೆ‌.

ಎರಡು ದಿನಗಳಿಂದ ಈ ಹನಿಟ್ರ್ಯಾಪ್ ಅಸ್ತ್ರವನ್ನು ಪ್ರಯೋಗ ಮಾಡಲಾಗುತ್ತಿದ್ದು ಚಿರತೆ ಸೆರೆಗೆ ಇಟ್ಟಿರುವ ಬೋನ್ ನಲ್ಲಿ ಹೆಣ್ಣು ಚಿರತೆಯ ಮೂತ್ರ ಸಿಂಪಡಣೆ ಮಾಡಿ ಈ ಮೂಲಕ ಚಿರತೆಯನ್ನು ಲೈಂಗಿಕವಾಗಿ ಆಕರ್ಷಣೆ ಮಾಡಿ ಖೆಡ್ಡಕ್ಕೆ ಬೀಳಿಸುವ ಪ್ಲ್ಯಾನ್ ಮಾಡಲಾಗುತ್ತಿದೆ. ಆದ್ರೆ ಇಷ್ಟು ಮಾಡಿದ್ರು ಸಹ ಅರಣ್ಯ ಇಲಾಖೆ ಸಿಬ್ಬಂದಿಗೆ ಚಳ್ಳೆ ಹಣ್ಣು ತಿನ್ನಿಸಿ ಚಾಲಾಕಿ ಚಿರತೆ ಓಡಾಡುತ್ತಿದೆ. ಒಟ್ಟಿನಲ್ಲಿ ಬೆಳಗಾವಿ ಜನರ ನಿದ್ದೆಗೆಡಿಸಿರುವ ಚಿರತೆ ಆದಷ್ಟು ಬೇಗ ಸೆರೆಯಾಗಲಿ ಎಂಬುದೇ ಎಲ್ಲರ ಆಶಯ.

ಇದನ್ನು ಓದಿ : Heavy rains in Karnataka : ಕರ್ನಾಟಕದ ಹಲವೆಡೆ ಭಾರಿ ಮಳೆ : ಜನ ಜೀವನ ಸಂಪೂರ್ಣ ಅಸ್ತವ್ಯಸ್ತ

ಇದನ್ನೂ ಓದಿ : Muruga Mutt : ಗೋವಾಕ್ಕೆ ಪಲಾಯನ ಮಾಡಿದ್ರಾ ಮುರುಘಾ ಶರಣರು : ನಂಬರ್​ಪ್ಲೇಟ್​ ಇಲ್ಲದ ಕಾರಿನಿಂದ ಎಸ್ಕೇಪ್​

Minister Umesh Katti’s response to the issue of leopard in Belgaum Golf Ground

Comments are closed.