ಕಲಬುರಗಿ : ರಾಜ್ಯದಾದ್ಯಂತ ಎಸಿಬಿ (ACB) ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ. ಅದ್ರಲ್ಲೂ ಕಲಬುರಗಿಯ ಗುಬ್ಬಿ ತಾಲೂಕಿನಲ್ಲಿರುವ ಲೋಕೋಪಯೋಗಿ ಇಲಾಖೆಯ ಉಪ ವಿಭಾಗದ ಕಿರಿಯ ಇಂಜಿನಿಯರ್ ಶಾಂತಗೌಡ ಬಿರಾದಾರ (Shantha Gowda) ಮನೆಯ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯ ವೇಳೆಯಲ್ಲಿ ಅಕ್ರಮ ಸಂಪತ್ತು ಕಂಡು ಎಸಿಬಿ ಅಧಿಕಾರಿ ಗಳೇ ಬೆಚ್ಚಿಬಿದ್ದಿದ್ದಾರೆ. ಅದ್ರಲ್ಲೂ ಮನೆಯ ಪೈಪ್‌ಲೈನಲ್ಲಿ ಅಡಗಿಸಿಟ್ಟಿದ್ದ ಬರೋಬ್ಬರಿ 14 ಲಕ್ಷ ರೂಪಾಯಿ ಹಣವನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.
ಶಾಂತಗೌಡ ಬಿರಾದಾರ್ ಮನೆ ಮೇಲೆ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳು ತಿಜೋರಿ, ಬೆಡ್ ರೂಂನಲ್ಲಿ ಅಡಗಿಸಿಟ್ಟಿದ್ದ ಲಕ್ಷಾಂತರ ರೂಪಾಯಿ ವಶಕ್ಕೆ ಪಡೆದಿದ್ದಾರೆ. ಅದ್ರಲ್ಲೂ ಮನೆಯ ಪೈಪ್‌ಲೈನ್ ಪರಿಶೀಲಿಸಿದ ವೇಳೆಯಲ್ಲಿ ಹಣವನ್ನು ಅಕ್ರಮವಾಗಿ ಇರಿಸಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪೈಪ್ ಕತ್ತರಿಸಿದ ವೇಳೆಯಲ್ಲಿ ಗರಿಗರಿ ನೋಟುಗಳು ಪತ್ತೆಯಾಗಿತ್ತು. ಮನೆಯಲ್ಲಿ ಸುಮಾರು ಸುಮಾರು ೪೦ ಲಕ್ಷ ರೂಪಾಯಿ ಹಣ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯ ಅಧಿಕಾರಿಗಳ ತಂಡ ಎಸಿಬಿ ಈಶಾನ್ಯ ವಲಯದ ಎಸ್ಪಿ ಮಹೇಶ್ ಮೇಘಣ್ಣ ಅವರ ನೇತೃತ್ವದಲ್ಲಿ ಈ ದಾಳಿಯನ್ನು ನಡೆಸಲಾಗಿದೆ. ಬೆಳ್ಳಂಬೆಳಗ್ಗೆಯೇ ದಾಳಿ ನಡೆಸಿರುವ ಅಧಿಕಾರಿಗಳು ಮನೆಯಲ್ಲಿ ಪತ್ತೆಯಾಗಿರುವ ಅಕ್ರಮ ಸಂಪತ್ತನ್ನು ಕಲೆ ಹಾಕುವ ಕಾರ್ಯವನ್ನು ಮಾಡುತ್ತಿದ್ದಾರೆ.
PWD ಜೆಇ ಶಾಂತ ಗೌಡ ಮನೆಯಲ್ಲಿ ಪೈಪ್‌ಲೈನಲ್ಲಿ ಪತ್ತೆಯಾಯ್ತು ಲಕ್ಷ ಲಕ್ಷ ಹಣ #kalaburagi #ACB #ACBRaid #BreakingNews pic.twitter.com/H5JY6b25aC
— News Next (@newsnext_live) November 24, 2021
ರಾಜ್ಯದಲ್ಲಿ 50 ಕಡೆ ಎಸಿಬಿ ದಾಳಿ
ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಕೆ.ಎಸ್.ಲಿಂಗೇಗೌಡ, ಮಂಡ್ಯ ಎಚ್.ಎಲ್.ಬಿಸಿ ಎಕ್ಸಿಕ್ಯೂಟಿವ್ ಇಂಜಿಯರ್ ಶ್ರೀನಿವಾಸ ಕೆ., ದೊಡ್ಡಬಳ್ಳಾಪುರ ರೆವಿನ್ಯೂ ಇನ್ಸ್‌ಪೆಕ್ಟರ್ ಲಕ್ಷ್ಮೀ ಕಾಂತಯ್ಯ, ಬೆಂಗಳೂರು ನಿರ್ಮಿತಿ ಕೇಂದ್ರದ ಪ್ರಾಜೆಕ್ಟ್ ಮ್ಯಾನೇಜರ್ ವಾಸುದೇವ್, ನಂದಿನಿ ಡೈರಿ ಬೆಂಗಳೂರಿನ ಜನರಲ್ ಮ್ಯಾನೇಜರ್ ಬಿ.ಕೃಷ್ಣಾ ರೆಡ್ಡಿ, ಗದಗ ಅಗ್ರಿಕಲ್ಚರ್ ಡಿಪಾರ್ಟ್‌ಮೆಂಟ್ ಜಾಯಿಂಟ್ ಡೈರೆಕ್ಟರ್ ಟಿ.ಎಸ್.ರುದ್ರೇಶಪ್ಪ, ಬೈಲಹೊಂಗಲ ಕೋ ಆಪರೇಟಿವ್ ಡೆವಲಪ್ಮೆಂಟ್ ಆಫೀಸರ್ ಸವದತ್ತಿ ಡೆಪ್ಯೂಟೇಷನ್ ಎ.ಕೆ.ಮಸ್ತಿ.ಗೋಕಾಕ್ ಸೀನಿಯರ್ ಮೋಟಾರ್ ಇನ್ಸ್’ಪೆಕ್ಟರ್ ಸದಾಶಿವ ಮರಲಿಂಗಣ್ಣನವರ್, ಬೆಳಗಾಂ ಹೆಸ್ಕಾಂ ಗ್ರೂಪ್ ಸಿ ನಾತಾಜೀ ಹೀರಾಜಿ ಪಾಟೀಲ್, ಬಳ್ಳಾರಿ ರಿಟೈರ್ಡ್ ಸಬ್ ರಿಜಿಸ್ಟರ್ ಕೆ.ಎಸ್.ಶಿವಾನಂದ್, ಯಲಹಂಕ ಸರ್ಕಾರಿ ಆಸ್ಪತ್ರೆಯ ಫಿಜಿಯೋಥೆರಪಿಸ್ಟ್ ರಾಜಶೇಖರ್ ಬೆಂಗಳೂರು ಎಫ್.ಡಿ.ಸಿ ಬಿಬಿಎಂಪಿ ರೋಡ್ಸ್ & ಇನ್ಸ್ಫಾಸ್ಟ್ರಕ್ಚರ್ ಮಾಯಣ್ಣ.ಎಂ, ಬೆಂಗಳೂರು ಸಕಾಲ ಅಡ್ಮಿನಿಸ್ಟೇಷನ್ ಆಫಿಸರ್ ಎಲ್.ಸಿ.ನಾಗರಾಜ್, ಯಶವಂತಪುರ ಬಿಬಿಎಂಪಿ ಡಿ ಗ್ರೂಪ್ ಸಿಬ್ಬಂದಿ ಜಿ.ವಿ.ಗಿರಿ, ಜೇವರ್ಗಿ ಲೋಕೋಪಯೋಗಿ ಇಲಾಖೆ ಜಾಯಿಂಟ್ ಎಂಜಿನಿಯರ್ ಎಸ್.ಎಂ.ಬಿರಾದಾರ್ ಅವರ ಮನೆಗಳ ಮೇಲೆ ದಾಳಿ ನಡೆದಿದೆ.
ಇದನ್ನೂ ಓದಿ : ಬೆಳ್ಳಂಬೆಳಗ್ಗೆಯೇ ಭ್ರಷ್ಟ ಅಧಿಕಾರಿಗಳಿಗೆ `ACB’ ಬಿಗ್ ಶಾಕ್ : ಏಕಕಾಲಕ್ಕೆ ರಾಜ್ಯದ 60 ರೇಡ್
ಇದನ್ನೂ ಓದಿ : ಜನಸಾಮಾನ್ಯರಿಗೆ ಬಿಗ್ ಶಾಕ್ ಕೊಟ್ಟ ಟೊಮ್ಯಾಟೋ : ಕೆ.ಜಿಗೆ 200 ರೂ. ಸಾರ್ವಕಾಲಿಕ ದಾಖಲೆ
(14 lakhs found in pipeline during ACB attack in Shantha Gowda in Kalaburagi)