ಶಿವಮೊಗ್ಗ : KS Eshwarappa : ಮಾಜಿ ಸಿಎಂ ಸಿದ್ದರಾಮಯ್ಯ ಮಾಂಸಾಹಾರ ಸೇವನೆ ಮಾಡಿ ತೆರಳಿರುವ ವಿಚಾರ ಹಿಂದೂವಾದಿಗಳ ಕಣ್ಣು ಕೆಂಪಗಾಗಿಸಿದೆ. ಹೀಗಾಗಿ ಬಿಜೆಪಿ ನಾಯಕರು ಹೋದಲ್ಲಿ ಬಂದಲ್ಲಿ ಸಿದ್ದರಾಮಯ್ಯರನ್ನು ತರಾಟೆಗೆ ತೆಗೆದುಕೊಳ್ಳುತ್ತಲೇ ಇದ್ದಾರೆ. ಇಂದು ಈ ವಿಚಾರವಾಗಿ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಸಿದ್ದರಾಮಯ್ಯಗೆ ಟಾಂಗ್ ನೀಡಿದರು.
ಸಿದ್ದರಾಮಯ್ಯ ವೆಜ್ ತಿನ್ನೋದು ತಿನ್ನದೇ ಇರೋದು ಇವತ್ತಿನ ಮಾತಲ್ಲ. ನಾನ್ ವೆಜ್ ದೇವಸ್ಥಾನಕ್ಕೆ ಹೋಗ್ತಾರೆ, ಮತ್ತೆ ಬರ್ತಾರೆ, ಏನೇನೋ ಮಾಡ್ತಾರೆ. ಮಾಂಸ ತಿಂದು ಹೋಗಿರುವ ಸಣ್ಣ ವಿಚಾರಕ್ಕೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಸಿದ್ದರಾಮಯ್ಯ ಈಗಾಗಲೇ ಕನಕ ಗುರು ಪೀಠಕ್ಕೆ ಹಾಗೂ ಬಾಳೆಹೊನ್ನೂರು ರಂಭಾಪುರಿ ಮಠಕ್ಕೆ ಭೇಟಿ ನೀಡಿದ್ದೇ ಸಂತೋಷ ಎಂದು ಹೇಳಿದರು .
ನನಗೊಂದು ಆಸೆಯಿದೆ. ಸಿದ್ದರಾಮಯ್ಯ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿಲ್ಲ. ವಿಶ್ವಪ್ರಸಿದ್ಧ ಉಡುಪಿ ಕೃಷ್ಣನ ದರ್ಶನ ಪಡೆಯಬೇಕು. ಕನಕದಾಸರ ಭಕ್ತಿಗೆ ಮೆಚ್ಚಿ ಕೃಷ್ಣನು ದರ್ಶನ ನೀಡಿದ್ದಾರೆ. ಇಂತಹ ಧಾರ್ಮಿಕ ಕ್ಷೇತ್ರಕ್ಕೆ ಸಿದ್ದರಾಮಯ್ಯ ಯಾಕೆ ಹೋಗಿಲ್ಲ ಎಂಬ ಅನುಮಾನ ಎಲ್ಲರಂತೆ ನನಗೂ ಇದೆ .
ರಾಜ್ಯದ ಜನತೆಯ ಈ ಅನುಮಾನವನ್ನು ದೂರ ಮಾಡಲು ಸಿದ್ದರಾಮಯ್ಯ ಉಡುಪಿಗೆ ತೆರಳಿ ಶ್ರೀಕೃಷ್ಣನ ದರ್ಶನವನ್ನು ಪಡೆಯಬೇಕು. ಸಿದ್ದರಾಮಯ್ಯಗೆ ಶ್ರೀಕೃಷ್ಣನ ಆಶಿರ್ವಾದ ಸಿಗುತ್ತದೆ. ಅವರಿಗೆ ಒಳ್ಳೆಯದಾಗುತ್ತದೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಮಾಜಿ ಸಿಎಂ ಸಿದ್ದರಾಮಯ್ಯರ ಕಾಲೆಳೆದಿದ್ದಾರೆ.
ಇದನ್ನು ಓದಿ : Naleen Kumar Kateel : ಸೆ.2ರಂದು ಮಂಗಳೂರಿಗೆ ಪ್ರಧಾನಿ ಮೋದಿ ಆಗಮನ : ನಳೀನ್ ಕುಮಾರ್ ವಿರುದ್ಧ ಶುರುವಾಯ್ತು ಅಭಿಯಾನ
ಇದನ್ನೂ ಓದಿ : Ganeshotsav at Chamarajpet Idga : ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ : ಸಿಎಂಗೆ ಸಿ.ಟಿ.ರವಿ ಪತ್ರ
KS Eshwarappa expressed outrage against Siddaramaiah