Savarkar’s photo in Ganeshotsava : ಗಣೇಶೋತ್ಸವದಲ್ಲಿ ಸಾವರ್ಕರ್​ ಫೋಟೋ ಇಟ್ಟರೆ ತಪ್ಪೇನಿದೆ : ಸಚಿವ ಗೋಪಾಲಯ್ಯ

ತುಮಕೂರು : Savarkar’s photo in Ganeshotsava : ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ನಳೀನ್​ ಕುಮಾರ್​ ಕಟೀಲ್​ರನ್ನು ಕೈ ಬಿಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಹೋರಾಟ ನಡೆಯುತ್ತಿರುವ ವಿಚಾರವಾಗಿ ಮಾತನಾಡಿದ ಸಚಿವ ಗೋಪಾಲಯ್ಯ, ಅದು ಪಕ್ಷದ ಆಂತರಿಕ ವಿಚಾರ, ಮೂರು ವರ್ಷ ಆದ್ಮೇಲೆ ಏನು ಮಾಡಬೇಕು ಅನ್ನೋದಕ್ಕೆ ಪಕ್ಷದ ನಿಯಮವಿದೆ. ಅದಕ್ಕೆ ಕೇಂದ್ರದ ವರಿಷ್ಠರು ಈ ಬಗ್ಗೆ ತೀರ್ಮಾನ ತೆಗೆದುಕೊಳ್ತಾರೆ ಎಂದು ಹೇಳಿದ್ದಾರೆ.


ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರವಾಗಿ ಜಿಲ್ಲಾ ಮಟ್ಟದಲ್ಲಿ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಕೇಂದ್ರದಿಂದ ಯಾವ ತೀರ್ಮಾನ ತೆಗೆದುಕೊಳ್ತಾರೆ. ಇದಕ್ಕೆ ನಾವೆಲ್ಲ ಬದ್ಧರಾಗಿರುತ್ತೇವೆ. ಪಕ್ಷದ ವರಿಷ್ಠರಿಗೆ ಸಂಬಂಧಪಟ್ಟ ವಿಚಾರ ನನಗಾಗಲಿ ಸುರೇಶ್​ ಗೌಡರಿಗಾಗಲಿ ಸಂಬಂಧಪಟ್ಟ ವಿಚಾರವಲ್ಲ ಎಂದು ಹೇಳಿದರು.


ಅನ್ನಭಾಗ್ಯ ಯೋಜನೆ ಕೈ ಬಿಡಬೇಕು ಎಂಬ ವಿಚಾರವಾಗಿ ಮಾತನಾಡಿದ ಅವರು, 2020ರ ಏಪ್ರಿಲ್​ 1ರಿಂದ ಕೊರೊನಾ ಆರಂಭವಾದಾಗಿನಿಂದ ನಾನೇ ಆಹಾರ ಸಚಿವನಾಗಿದ್ದೆ. ರಾಜ್ಯ ಸರ್ಕಾರ ಒಂದು ಕುಟುಂಬಕ್ಕೆ 5 ಕೆಜಿ ಅಕ್ಕಿ, 2 ಕೆಜಿ ಗೋಧಿ ಕೊಡಬೇಕು ಎಂಬ ಕಾರ್ಯಕ್ರಮವನ್ನು ರೂಪಿಸಿತ್ತು. ಮೋದಿಜಿ ಈ ದೇಶದ 80 ಕೋಟಿ ಜನರಿಗೆ 2020ರಿಂದ ಪ್ರತಿ ತಿಂಗಳು ಕೇಂದ್ರದಿಂದ 5 ಕೆಜಿ ಅಕ್ಕಿ ಕೊಡಬೇಕು, ಯಾರು ಹಸಿವಿನಿಂದ ಸಾಯಬಾರದು ಎಂಬ ನಿರ್ಧಾರದಿಂದ ಈಗಲೂ ಅಕ್ಕಿ ಕೊಡುತ್ತಿದೆ. ಇದು ಮುಂದಿನ ತಿಂಗಳವರೆಗೆ ಇರಲಿದೆ. ಮುಂದೆ ಕೇಂದ್ರ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ ಅದರ ಮೇಲೆ ರಾಜ್ಯ ಸರ್ಕಾರದ ಆಹಾರ ಸಚಿವರು ಮಾತನಾಡಿ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಹೇಳುತ್ತಾರೆ.


ಸರ್ಕಾರಿ ನ್ಯಾಯ ಬೆಲೆ ಅಂಗಡಿಗಳಲ್ಲಿ ಅಕ್ಕಿ ಜೊತೆಗೆ ಉಚಿತ ಮೊಟ್ಟೆಯನ್ನು ಕೊಡುವ ವಿಚಾರ, ಇದರ ಬಗ್ಗೆ ಮಾಹಿತಿಯಿಲ್ಲ, ಸಂಬಂಧಪಟ್ಟ ಸಚಿವರನ್ನು ಕೇಳಬೇಕು. ನಮ್ಮ ಗಮನಕ್ಕೆ ತಂದಿದ್ದೀರಾ..? ಈ ಬಗ್ಗೆ ಸಂಬಂಧಪಟ್ಟ ಸಚಿವರ ಜೊತೆ ಮಾತನಾಡುತ್ತೀನಿ ಎಂದು ಹೇಳಿದ್ದಾರೆ.


ಆನ್​ಲೈನ್​​ನಲ್ಲಿ ಮದ್ಯ ಮಾರಾಟ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು, ನಾನು ಸಚಿವನಾದ ಮೇಲೆ ಇಲ್ಲಿ ಏನೇ ವ್ಯಾಪಾರ ಆದರೂ ಸ್ಥಳೀಯರಿಗೆ ಅನುಕೂಲ ಆಗಬೇಕು. ಆನ್​ಲೈನ್​​ನಿಂದ ಯಾರೋ ಅಂತಾರಾಷ್ಟ್ರೀಯ ಮಾರುಕಟ್ಟೆಯವನು ಬಂದು 10, 12 ಸಾವಿರ ಕುಟುಂಬಗಳಿಗೆ ಅನ್ಯಾಯ ಆಗೋದು ಬೇಡ. ಇದರಿಂದ ಮೂರು ಲಕ್ಷ ಕುಟುಂಬಗಳು ಜೀವನ ಮಾಡುತ್ತಿವೆ. ಅವರಿಗೆ ಅನ್ಯಾಯ ಮಾಡೋದಿಲ್ಲ ಎಂದು ಹೇಳಿದರು.


ಸಿಎಂ ಬದಲಾವಣೆ ಹಾಗೂ ಕ್ಯಾಬಿನೇಟ್​ ವಿಂಗಡಣೆ ವಿಚಾರವಾಗಿ ಮಾತನಾಡಿದ ಅವರು, ಈ ವಿಚಾರಗಳೆಲ್ಲವೂ ಅಪ್ರಸ್ತುತ. ಕ್ಯಾಬಿನೆಟ್​ ವಿಸ್ತರಣೆ ವರಿಷ್ಠ ಮಂಡಳಿಗೆ ಬಿಟ್ಟ ವಿಚಾರ ಎಂದು ಹೇಳಿದರು.
ಸಾವರ್ಕರ್​ ಫೋಟೋವನ್ನು ಗಣೇಶನ ಹಬ್ಬದಲ್ಲಿ ಇರಿಸುವ ವಿಚಾರವನ್ನು ಸಮರ್ಥಿಸಿಕೊಂಡ ಅವರು, ಇದರಲ್ಲಿ ತಪ್ಪೇನಿದೆ, ನಾನು ನಮ್ಮ ಕ್ಷೇತ್ರದಲ್ಲಿ ಇಡುತ್ತೇನೆ. ನಾನೊಬ್ಬ ದೇಶಭಕ್ತ. ಸಾವರ್ಕರ್​ ಫೋಟೋ ಇಡೋದ್ರಲ್ಲಿ ತಪ್ಪೇನಿದೆ..? ಪ್ರತಿಯೊಬ್ಬ ದೇಶ ಭಕ್ತ ಸ್ವಾತಂತ್ರ್ಯಕ್ಕಾಗಿ ಹೋರಾಡಿದಂತವರ ಫೋಟೋ ಇಡಬೇಕು. ಗಾಂಧಿಜಿ ಫೋಟೋ ಇಡಬೇಕು. ಅಂಬೇಡ್ಕರ್​ ಫೋಟೋ ಇಟ್ಟರೂ ಅದರಲ್ಲಿ ತಪ್ಪೇನಿಲ್ಲ ಎಂದು ಹೇಳಿದರು.

ಇದನ್ನು ಓದಿ : Ganeshotsav at Chamarajpet Idga : ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ : ಸಿಎಂಗೆ ಸಿ.ಟಿ.ರವಿ ಪತ್ರ

ಇದನ್ನೂ ಓದಿ : KS Eshwarappa : ಸಿದ್ದರಾಮಯ್ಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡೋದನ್ನು ನೋಡಬೇಕು : ಮಾಜಿ ಸಚಿವ ಕೆ.ಎಸ್​ ಈಶ್ವರಪ್ಪ ವ್ಯಂಗ್ಯ

There is nothing wrong with putting Savarkar’s photo in Ganeshotsava: Minister Gopaliah

Comments are closed.