ಮಂಡ್ಯ : ಸಚಿವ ನಾರಾಯಣಗೌಡ ಮಹಾರಾಷ್ಟ್ರಕ್ಕೆ ಜೈಕಾರ ಕೂಗಿರುವುದನ್ನು ವಿರೋಧಿಸಿ ಮಂಡ್ಯದ ಮಹಾವೀರ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು. ಸಚಿವ ನಾರಾಯಣ ಗೌಡರ ಪ್ರತಿಕೃತಿಯನ್ನು ದಹಿಸಿದ ಪ್ರತಿಭಟನಾಕಾರರು ನಾರಾಯಣ ಗೌಡರ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ.

ಕರ್ನಾಟಕ ಎಂದರೇ ಮಂಡ್ಯ ಎನ್ನುವಷ್ಟರ ಮಟ್ಟಿಗೆ ಹೆಸರಿದೆ. ಹೀಗಿರುವಾಗ ಈ ನೆಲದಲ್ಲಿ ನಿಂತುಕೊಂಡು ಸಚಿವ ನಾರಾಯಣಗೌಡ ಅವರು ಮಹಾರಾಷ್ಟ್ರಕ್ಕೆ ಜೈಕಾರ ಕೂಗುವುದು ಖಂಡನೀಯ. ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಭಾಷೆ ಹಾಗೂ ನೆಲದ ವಿಚಾರದಲ್ಲಿ ಅನ್ಯಾಯವಾಗಿದೆ. ಸಚಿವರಿಗೆ ಮಹಾರಾಷ್ಟ್ರದ ಮೇಲೆ ಅಭಿಮಾನ ಇದ್ದರೆ ಅಲ್ಲಿಯೇ ಹೋಗಿ ಇರಲಿ. ಅದನ್ನು ಬಿಟ್ಟು ಇಲ್ಲಿ ಮಹಾರಾಷ್ಟ್ರದ ಪರ ಘೋಷಣೆ ಕೂಗುವುದು ತಪ್ಪು ಎಂದಿದ್ದಾರೆ. ಇನ್ನು ನಾರಾಯಣಗೌಡರು ಎಸಗಿರುವ ಈ ಅನ್ಯಾಯಕ್ಕೆ ಸಚಿವ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮಹಾರಾಷ್ಟ್ರ ಹೋಗಲಿ ಎಂದು ಘೋಷಣೆ ಕೂಗಿದ್ದಾರೆ.