ಭಾವಿ ಗಂಡನ ದುಬಾರಿ ಗಿಫ್ಟ್ ಆಸೆಗೆ : ಮಹಿಳೆ ಕಳೆದುಕೊಂಡಿದ್ದು ಬರೋಬ್ಬರಿ 71 ಲಕ್ಷ !

0

ಬೆಂಗಳೂರು : ಆಕೆಗೆ 42 ವರ್ಷ ವಯಸ್ಸು… ಮದುವೆಯಾಗೋಕೆ ಹುಡುಗ ಹುಡುಕಾಟದಲ್ಲಿದ್ದಾಗಲೇ ಆನ್ಲೈನ್ ನಲ್ಲಿ ಹುಡುಗನೊಬ್ಬ ಸಿಕ್ಕಿದ್ದ. ಬಾವಿ ಪತಿ ಕಳುಹಿಸಿದ್ದ ದುಬಾರಿ ಬೆಲೆಯ ಉಡುಗೊರೆ ಪಡೆಯೋಕೆ ಮಹಿಳೆ ಕಳೆದುಕೊಂಡಿದ್ದ ಬರೋಬ್ಬರಿ 71 ಲಕ್ಷ ರೂಪಾಯಿ !

ಹೌದು, ಧಾರವಾಡ ಮೂಲದ ಅವಿವಾಹಿತ ಮಹಿಳೆ ಆನ್ಲೈನ್ ನಲ್ಲಿ ಮದುವೆಯಾಗೋಕೆ ಹುಡುಗನ ಹುಡುಕಾಟದಲ್ಲಿದ್ದಾಗ ಬ್ರಿಟನ್ ಮೂಲದ ಆ್ಯಂಡ್ರೋ ಕೊಹೇನ್ ಪರಿಚಿತನಾಗಿದ್ದ. ಸ್ವಲ್ಪ ಸಮಯದಲ್ಲೇ ಒಬ್ಬರಿಗೊಬ್ಬರು ಇಷ್ಟವಾಗಿದ್ರು. ಪರಸ್ಪರ ಮೊಬೈಲ್ ನಂಬರ್ ಶೇರ್ ಮಾಡಿಕೊಂಡಿದ್ದರು. ಒಮ್ಮೆ ಆ್ಯಂಡ್ರೋ ಕೊಹೇನ್ ಆಕೆಗೆ ಕರೆ ಮಾಡಿ ನಿನಗೆ ದುಬಾರಿ ಉಡುಗೊರೆ ಕಳುಹಿಸಿದ್ದೇನೆ ಪಡೆದುಕೋ ಎಂದು ಹೇಳಿದ್ದಾನೆ.

ಅಷ್ಟರಲ್ಲೇ ಆಕೆಯ ಮೊಬೈಲ್ ಗೆ ಕರೆಯೊಂದು ಬಂದಿತ್ತು. ನಾನು ಕಸ್ಟಮ್ಸ್ ಅಧಿಕಾರಿ ನಿಮಗೆ ಪಾರ್ಸೆಲ್ ಬಂದಿದೆ. ಅದರ ಸುಂಕ ಕಟ್ಟಿ ತೆಗೆದುಕೊಂಡು ಹೋಗಿ ಅಂತಾ ಹೇಳಿ ಪೋನ್ ಕಟ್ ಮಾಡಿದ್ದಾನೆ.

ಇದನ್ನು ನಂಬಿದ ಮಹಿಳೆ ಆನ್ ಲೈನ್ ಮೂಲಕ ಆತ ಹೇಳಿದ ಹಾಗೆಲ್ಲಾ ಹಣ ರವಾನೆ ಮಾಡಿದ್ದಾರೆ. ಜನವರಿ 6 ರಿಂದ 27ರ ವರೆಗಿನ 21 ದಿನ ನಡುವಲ್ಲಿ ಆಕೆ ಬರೋಬ್ಬರಿ 71,57,793 ರೂಪಾಯಿಗಳನ್ನು ರವಾನೆ ಮಾಡಿದ್ದಾರೆ. ಇಷ್ಟೆಲ್ಲಾ ಹಣ ನೀಡಿದ್ರೂ ಅನಾಮಿಕ ಕರೆ ಮಾಡಿ ಇನ್ನಷ್ಟು ಹಣ ಕಟ್ಟಿ ಪಾರ್ಸೆಲ್ ಪಡೆಯುವಂತೆ ಪೀಡಿಸುತ್ತಿದ್ದ.

ಇದರಿಂದ ಅನುಮಾನಗೊಂಡ ಮಹಿಳೆ ಸೈಬರ್ ಕ್ರೈಂ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಭಾವಿ ಪತಿ ಆ್ಯಂಡ್ರೋ ಕೊಹೇನ್ ಮತ್ತು ಆತನ ತಂಡೇ ಮಹಿಳೆಯನ್ನು ವಂಚಿಸಿದೆಯಾ ಅನ್ನೋ ಬಗ್ಗೆಯೂ ತನಿಖೆ ನಡೆಯುತ್ತಿದೆ.

Leave A Reply

Your email address will not be published.