ಉಡುಪಿ : minister kota srinivasa pujari : ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಎಸ್ಕಾರ್ಟ್ ವಾಹನ ಅಪಘಾತಕ್ಕೆ ಒಳಗಾದ ಘಟನೆಯು ಉಡುಪಿಯ ಸಂತೆಕಟ್ಟೆಯ ಕೆಜಿ ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.

ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ವಾಹನ ಪಲ್ಟಿಯಾದ ಪರಿಣಾಮ ಈ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಎಸ್ಕಾರ್ಟ್ ವಾಹನದಲ್ಲಿದ್ದ ಬೆಂಗಾವಲು ಸಿಬ್ಬಂದಿ ಗಣೇಶ್ ಆಳ್ವ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ವರದಿಯಾಗಿದೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ ತಮ್ಮ ಬೆಂಗಾವಲು ಸಿಬ್ಬಂದಿ ಗಣೇಶ್ ಆಳ್ವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಬೆಂಗಾವಲು ವಾಹನದ ಮುಂದೆ ಸಂಚರಿಸಿದ್ದ ಲಾರಿಯು ಸೂಚನೆಯನ್ನು ನೀಡದೇ ತನ್ನ ಪಥ ಬದಲಿಸಿದ ಪರಿಣಾಮ ಬೆಂಗಾವಲು ವಾಹನ ಡಿವೈಡರ್ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ ಎನ್ನಲಾಗಿದೆ.
ಇದನ್ನು ಓದಿ : Ayushman Card: . ಅಂತ್ಯೋದಯ ಪಡಿತರ ಚೀಟಿ ಹೊಂದಿದ್ದೀರಾ ! ಹಾಗಾದರೆ ಇದನ್ನ ಮಿಸ್ ಮಾಡದೇ ಓದಿ
ಇದನ್ನೂ ಓದಿ : Athiya Shetty and KL Rahul : ಆಥಿಯಾ ಶೆಟ್ಟಿ ಹಾಗೂ ಕೆ.ಎಲ್ ರಾಹುಲ್ ಮದುವೆ ವಿಚಾರವಾಗಿ ಹೊರಬಿತ್ತು ಬಹುಮುಖ್ಯ ಮಾಹಿತಿ
minister kota srinivasa pujari escort vehicle accident