Jasprit Bumrah : ಭೂಮ್ ಭೂಮ್ ಬುಮ್ರಾ, ಖತರ್ನಾಕ್ ವೇಗಿಯ ಬೆಂಕಿ ಬೌಲಿಂಗ್’ಗೆ ಇಂಗ್ಲೆಂಡ್ ಉಡೀಸ್.. ನೆಹ್ರಾ ದಾಖಲೆ ಪೀಸ್ ಪೀಸ್ !

ಲಂಡನ್: ಶರವೇಗದ ಬೌಲಿಂಗ್.., ಖತರ್ನಾಕ್ ಸ್ಪೆಲ್.., ಇಂಗ್ಲೆಂಡ್”ನ ಬಲಿಷ್ಠ ಬ್ಯಾಟಿಂಗ್ ಲೈನಪ್ ಉಡೀಸ್.. ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಅಬ್ಬರಿಸಿದ ಪರಿಗೆ ಕ್ರಿಕೆಟ್ ಜನಕರು ದಿಕ್ಕಾಪಾಲಾಗಿ ಹೋದ್ರು.

ಇಂಗ್ಲೆಂಡ್ ವಿರುದ್ಧದ ಪ್ರಥಮ ಏಕದಿನ ಪಂದ್ಯದಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ತೋರಿದ ಬುಮ್ರಾ, ವೃತ್ತಿಜೀವನದ ಶ್ರೇಷ್ಠ ಸಾಧನೆ ಮಾಡಿದ್ರು. 7.2 ಓವರ್’ಗಳಲ್ಲಿ 3 ಮೇಡನ್ ಸಹಿತ ಕೇವಲ 19 ರನ್ನಿತ್ತು 6 ವಿಕೆಟ್ ಉಡಾಯಿಸಿದ ಜಸ್ಪ್ರೀತ್ ಬುಮ್ರಾ, ಇಂಗ್ಲೆಂಡ್ ವಿರುದ್ಧ ಏಕದಿನ ಕ್ರಿಕೆಟ್”ನಲ್ಲಿ ಭಾರತ ಪರ ಬೆಸ್ಟ್ ಬೌಲಿಂಗ್ ಪರ್ಫಾಮೆನ್ಸ್ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡ್ರು. 2003ರ ವಿಶ್ವಕಪ್ ಟೂರ್ನಿಯಲ್ಲಿ ಎಡಗೈ ವೇಗಿ ಆಶಿಶ್ ನೆಹ್ರಾ 23 ರನ್ನಿತ್ತು 6 ವಿಕೆಟ್ ಕಬಳಿಸಿದ್ದು ಇಂಗ್ಲೆಂಡ್ ವಿರುದ್ಧ ಭಾರತೀಯ ಬೌಲರ್ ಒಬ್ಬನ ಇದುವರೆಗಿನ ದಾಖಲೆಯಾಗಿತ್ತು.

28 ವರ್ಷದ ಬಲಗೈ ವೇಗಿ ಜಸ್ಪ್ರೀತ್ ಬುಮ್ರಾ ಅವರ ಅದ್ಭುತ ಸ್ಪೆಲ್”ಗೆ ಬಲಿಯಾಗಿದ್ದು ಜೇಸನ್ ರಾಯ್(0), ಜಾನಿ ಬೇರ್’ಸ್ಟೋವ್(07), ಜೋ ರೂಟ್(0), ಲಿಯಾಮ್ ಲಿವಿಂಗ್’ಸ್ಟನ್(0), ಡೇವಿಡ್ ವಿಲ್ಲೀ(21) ಮತ್ತು ಬ್ರೈಡನ್ ಕಾರ್ಸ್(15). ಆರು ವಿಕೆಟ್”ಗಳ ಪೈಕಿ ಮೂವರನ್ನು ಬುಮ್ರಾ ಶೂನ್ಯಕ್ಕೆ ಔಟ್ ಮಾಡಿದರು. ಬುಮ್ರಾ ಅವರ ಅಮೋಘ ಬೌಲಿಂಗ್ ಬಲದಿಂದ ವಿಶ್ವಚಾಂಪಿಯನ್ ಇಂಗ್ಲೆಂಡ್ ತಂಡ 25.2 ಓವರ್”ಗಳಲ್ಲಿ ಕೇವಲ 110 ರನ್ನಿಗೆ ಆಲೌಟಾಯಿತು.

ಇದು ಜಸ್ಪ್ರೀತ್ ಬುಮ್ರಾ ಪಾಲಿನ 71ನೇ ಏಕದಿನ ಪಂದ್ಯ. ವೃತ್ತಿಜೀವನದಲ್ಲಿ 2ನೇ ಬಾರಿ ಐದು ಅಥವಾ 5+ ವಿಕೆಟ್ ಪಡೆದ ಬುಮ್ರಾ, ಇಂಗ್ಲೆಂಡ್ ನೆಲದಲ್ಲಿ ತಮ್ಮ ಅಮೋಘ ಫಾರ್ಮನ್ನು ಮುಂದುವರಿಸಿದ್ದಾರೆ. ಎಡ್ಜ್”ಬಾಸ್ಟನ್ ಮೈದಾನದಲ್ಲಿ ನಡೆದ 5ನೇ ಟೆಸ್ಟ್ ಪಂದ್ಯದಲ್ಲಿ ಒಟ್ಟು 5 ವಿಕೆಟ್ ಪಡೆದಿದ್ದ ಬುಮ್ರಾ, 2ನೇ ಟಿ20 ಪಂದ್ಯದಲ್ಲಿ ಕೇವಲ 10 ರನ್ನಿತ್ತು 2 ವಿಕೆಟ್ ಕಬಳಿಸಿದ್ದರು. ಇದೀಗ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲೇ 6 ವಿಕೆಟ್ ಪಡೆದು ಮಿಂಚಿದ್ದಾರೆ. 5ನೇ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಟೀಮ್ ಇಂಡಿಯಾದ ನಾಯಕತ್ವ ವಹಸಿದ್ದರು.

ಇದನ್ನೂ ಓದಿ : Athiya Shetty and KL Rahul : ಆಥಿಯಾ ಶೆಟ್ಟಿ ಹಾಗೂ ಕೆ.ಎಲ್​ ರಾಹುಲ್​ ಮದುವೆ ವಿಚಾರವಾಗಿ ಹೊರಬಿತ್ತು ಬಹುಮುಖ್ಯ ಮಾಹಿತಿ

ಇದನ್ನೂ ಓದಿ : Indian women’s cricket team : ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಆಡಲಿದೆ ಭಾರತ ಮಹಿಳಾ ಕಿಕೆಟ್ ತಂಡ ; ಹರ್ಮನ್‌ಪ್ರೀತ್ ಕೌರ್ ಕ್ಯಾಪ್ಟನ್

Upplayable Jasprit Bumrah india vs england 1st odi

Comments are closed.