MP Pratap Simha : ಕೊಡಗಿನಲ್ಲಿ ಶಾಂತಿ ಕದಡಲು ಕಾರಣ ಸಿದ್ದರಾಮಯ್ಯ : ಪ್ರತಾಪ್​ ಸಿಂಹ ಗುಡುಗು

ಮೈಸೂರು : MP Pratap Simha : ಕೊಡಗು ಜಿಲ್ಲೆಯಲ್ಲಿ ನಾಳೆಯಿಂದ ನಿಷೇಧಾಜ್ಞೆ ಜಾರಿ ವಿಚಾರವಾಗಿ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್​ ಸಿಂಹ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಾಗಿರುವುದು ಜಿಲ್ಲಾಡಳಿತ ಹಾಗೂ ಸರ್ಕಾರದ ಕರ್ತವ್ಯವಾಗಿದೆ. ಮೊಟ್ಟೆ ಹೊಡೆದ ದಿನವೇ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರು ಕ್ಷಮೆಯಾಚಿಸಿದ್ದಾರೆ. ಇದನ್ನು ಇನ್ನೂ ಮುಂದುವರಿಸೋದ್ರಲ್ಲಿ ಅರ್ಥವೇನಿದೆ ಎಂದಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯರಿಗೆ ಜೆಡ್​ ಪ್ಲಸ್​ ಭದ್ರತೆಯನ್ನು ನೀಡಲಾಗಿದೆ. ಆದರೂ ಸಹ ಅವರು ಕೊಡಗಿಗೆ ದಂಡೆತ್ತಿ ಬರುವಂತಹ ಮಾತುಗಳನ್ನಾಡಿದ್ದರು. ಇದೇ ಸಿದ್ದರಾಮಯ್ಯ ಈ ಹಿಂದೆ ಸಿಎಂ ಆಗಿದ್ದ ಸಂದರ್ಭದಲ್ಲಿ ಟಿಪ್ಪು ಜಯಂತಿಯನ್ನು ಆಚರಿಸಿ ಕುಟ್ಟಪ್ಪ ಸಾವಿಗೆ ಕಾರಣರಾಗಿದ್ದರು. ಕೊಡಗಿನಲ್ಲಿ ಅಶಾಂತಿ ಉಂಟಾಗಿದೆ ಅಂದರೆ ಅದಕ್ಕೆ ಕಾರಣ ಇದೇ ಸಿದ್ದರಾಮಯ್ಯ ಎಂದು ಕಿಡಿ ಕಾರಿದ್ದಾರೆ.

ಕಾಂಗ್ರೆಸ್​ನವರು ಕೊಡಗಿನ ಜನರ ಮೇಲೆ ದ್ವೇಷ ಕಾರಿದ್ದಾರೆ. ಸಿದ್ದರಾಮಯ್ಯ ಕೊಡಗಿನ ಜನರ ಬೆಂಬಲದೊಂದಿಗೆ ಪರವಾಗಿರಲಿಲ್ಲ. ಟಿಪ್ಪು ಜಯಂತಿ ಆಚರಿಸಿದ್ದ ಸಂದರ್ಭದಲ್ಲಿ ಕೇರಳದಿಂದ ಲಾರಿಯಲ್ಲಿ ಕಲ್ಲು ತಂದು ದಾಂಧಲೆ ಎಬ್ಬಿಸಿದ್ದರು. ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನದಿಂದ ಜನರನ್ನು ಕರೆದುಕೊಂಡು ಬರ್ತೀನಿ ಅಂತಾ ಹೇಳಿದ್ದರು. ಇದೇ ಕಾರಣಕ್ಕೆ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ನಿಷೇಧಾಜ್ಞೆ ಜಾರಿಗೆ ತಂದಿದೆ ಎಂದು ಹೇಳಿದರು.

ಈ ನಡುವೆ ರಾಜ್ಯ ಸರ್ಕಾರ ಕೊಡಗು ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೆ ತರುತ್ತಿದ್ದಂತೆಯೇ ಕಾಂಗ್ರೆಸ್​ ತನ್ನ ಕೊಡಗು ಚಲೋವನ್ನು ಮುಂದೂಡಿಕೆ ಮಾಡಿದೆ. ವಿಪಕ್ಷ ನಾಯಕನಾಗಿ ಹೋರಾಟ ಮಾಡುವುದಕ್ಕಿಂತ ರಾಜ್ಯದ ಮಾಜಿ ಸಿಎಂ ಆಗಿ ನನಗೆ ರಾಜ್ಯದ ಶಾಂತಿ ಮುಖ್ಯ ಅಂತಾ ಸಿದ್ದರಾಮಯ್ಯ ಹೇಳಿದ್ದಾರೆ.

https://youtu.be/MydlQGM_yfY

ಇದನ್ನು ಓದಿ : Jothe Jotheyali Team : ಜೊತೆ ಜೊತೆಯಲಿ ಸೀರಿಯಲ್​ ಸೆಟ್​ನಿಂದ ಅನೂಪ್​ ಭಂಡಾರಿಗೆ ಆಫರ್​​

ಇದನ್ನೂ ಓದಿ : Mayank Agarwal out : ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವದಿಂದ ಮಯಾಂಕ್’ಗೆ ಕೊಕ್.. ಕುಂಬ್ಲೆ ಬಳಿಕ ಮತ್ತೊಬ್ಬ ಕನ್ನಡಿಗನ ಪಟ್ಟಕ್ಕೆ ಕುತ್ತು

MP Pratap Simha outraged against Siddaramaiah

Comments are closed.