ಮೈಸೂರು : Mysuru Dasara 2022 : ಈ ಬಾರಿಯ ಮೈಸೂರು ದಸರಾ ಸಾಕಷ್ಟು ಕಾರಣಗಳಿಂದ ಸುದ್ದಿಯಾಗುತ್ತಲೇ ಇದೆ. ಈ ಎಲ್ಲದರ ನಡುವೆ ಈ ಬಾರಿ ಜಂಬೂ ಸವಾರಿಗೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ ಎಂಬ ವಿಚಾರ ಕೂಡ ಸಾಕಷ್ಟು ಸದ್ದು ಮಾಡಿತ್ತು. ಈ ವಿಚಾರವಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ಟಿ ಸೋಮೇಶೇಖರ್ ಸ್ಪಷ್ಟನೆ ನೀಡಿದ್ದಾರೆ. ಮೈಸೂರಿನಲ್ಲಿ ಇದೇ ವಿಚಾರವಾಗಿ ಮಾತನಾಡಿದ ಅವರು ಮೈಸೂರು ದಸರಾ ಜಂಬೂ ಸವಾರಿ ಪುಷ್ಪಾರ್ಚನೆ ಕಾರ್ಯಕ್ರಮವನ್ನು ನೆರವೇರಿಸಲು ಪ್ರಧಾನಿ ಮೋದಿ ಆಗಮಿಸುತ್ತಿಲ್ಲ ಎಂದು ಹೇಳುವ ಮೂಲಕ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಮೈಸೂರು ದಸರಾ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಸಂಬಂಧಿಸಿದ ಕಾರ್ಯಕ್ರಮಗಳ ಕುರಿತಂತೆ ಪಟ್ಟಿ ತಯಾರಿಸಲಾಗುತ್ತಿದೆ. ಆದರೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅರಮನೆ ಭೇಟಿ ಬಗ್ಗೆ ಅನುಮತಿಯನ್ನು ಕೇಳಿದ್ದೇವೆ. ಆದರೆ ರಾಷ್ಟ್ರಪತಿ ಭವನದಿಂದ ಈ ಬಗ್ಗೆ ಇನ್ನೂ ಅಧಿಕೃತ ಒಪ್ಪಿಗೆ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ಕೇಂದ್ರ ನಾಲ್ವರು ಸಚಿವರು ಮೈಸೂರು ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ಲಭ್ಯವಾಗಿದೆ .
ಮೈಸೂರು ಉಸ್ತುವಾರಿ ಸಚಿವರಾಗಿರುವ ಎಸ್.ಟಿ ಸೋಮಶೇಖರ್ ಕಳೆದ ಎರಡು ದಿನಗಳಿಂದ ಕಾಲಿಗೆ ಚಕ್ರ ಕಟ್ಟಿಕೊಂಡು ದಸರಾ ಅಂತಿಮ ತಯಾರಿಯಲ್ಲಿ ನಿರತರಾಗಿದ್ದಾರೆ. ಯುವ ದಸರಾ, ದಸರಾ ಪಾಸ್ , ಗೋಲ್ಡ್ ಕಾರ್ಡ್ ಸೇರಿದಂತೆ ಸಾಕಷ್ಟು ವಿಚಾರಗಳ ಬಗ್ಗೆ ಅಂತಿಮ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಮೈಸೂರು ವಿದ್ಯುತ್ ದೀಪಾಲಂಕಾರಕ್ಕೆ 4.5 ಕೋಟಿ ರೂಪಾಯಿ ಮೀಸಲಿಡಲಾಗಿದೆ. ನಾಡಹಬ್ಬ ಉದ್ಘಾಟನೆಗೊಳ್ಳಲು ಇನ್ನೇನು ಕೇವಲ ಎಂಟು ದಿನಗಳು ಮಾತ್ರ ಬಾಕಿ ಉಳಿದಿದೆ. ಕೋವಿಡ್ ಬಳಿಕ ಇದು ಮೊದಲ ಅದ್ಧೂರಿ ದಸರಾ ಕಾರ್ಯಕ್ರಮ ಆಗಿರುವುದರಿಂದ ರಾಜ್ಯ ಸರ್ಕಾರ ಸಾಕಷ್ಟು ಮುತುವರ್ಜಿ ವಹಿಸಿ ದಸರಾ ವೈಭವವನ್ನು ಇನ್ನಷ್ಟು ವೈಭವಗೊಳಿಸಲು ಪ್ರಯತ್ನಿಸುತ್ತಿದೆ .
ಇದನ್ನು ಓದಿ : K.S. Eshwarappa:ಆರೋಪ ಮುಕ್ತನಾಗುತ್ತಿದ್ದಂತೆಯೇ ಸಚಿವ ಸ್ಥಾನ ಮರಳಿ ಕೊಡ್ತೀನಿ ಅಂದಿದ್ರು : ಮಾಜಿ ಸಚಿವ ಈಶ್ವರಪ್ಪ ಅಸಮಾಧಾನ
ಇದನ್ನೂ ಓದಿ : KL Rahul bats for Stray Dogs: “ದಯವಿಟ್ಟು ಇದನ್ನು ನಿಲ್ಲಿಸಿ”.. ಬೀದಿ ನಾಯಿಗಳ ಸಾಮೂಹಿಕ ಹತ್ಯೆಗೆ ಮಿಡಿದ ಕ್ರಿಕೆಟಿಗ ಕೆ.ಎಲ್ ರಾಹುಲ್
Mysuru Dasara 2022: Narendra Modi Did Not Come For Dasara Jambusavari: St Somashekhar