DK Shivakumar : ಮೇಕೆದಾಟು ಬಳಿಕ ಕೃಷ್ಣೆಗಾಗಿ ‘ಕೈ’ ಪಾದಯಾತ್ರೆ: ಸುಳಿವು ಕೊಟ್ಟ ಡಿ.ಕೆ.ಶಿವಕುಮಾರ್

ಮಂಡ್ಯ : DK Shivakumar : ರಾಹುಲ್ ಗಾಂಧಿ ನೇತ್ರತ್ವದಲ್ಲಿ ಭಾರತ್ ಜೋಡೋ ಯಾತ್ರೆ ನಡೆಯುತ್ತಿದೆ. ಕನ್ಯಾಕುಮಾರಿಯಿಂದ ಆರಂಭವಾಗಿರುವ ಯಾತ್ರೆ ಕೊಚ್ಚಿ, ನಿಲಂಬೂರ್, ಮೈಸೂರು, ಬಳ್ಳಾರಿ, ರಾಯಚೂರು, ವಿಕಾರಾಬಾದ್ ಮಾರ್ಗದ ಮೂಲಕ ಶ್ರೀನಗರ ತಲುಪಲಿದೆ‌. ಕರ್ನಾಟಕದಲ್ಲಿ ಈ ಯಾತ್ರೆ ಸಾಗುವ ಹಿನ್ನೆಲೆಯಲ್ಲಿ ಇಂದು ಮಂಡ್ಯದಲ್ಲಿ ಭಾರತ್ ಜೋಡೋ ಪೂರ್ವಭಾವಿ ಸಭೆ ನಡೆದಿದೆ. ಮಂಡ್ಯದ ಖಾಸಗಿ ಸಮುದಾಯ ಭವನದಲ್ಲಿ ನಡೆದ ಈ ಸಭೆಯಲ್ಲಿ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿ.ಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದರು.

ಇದೇ ಸಂದರ್ಭ ಪಕ್ಷದ ನಾಯಕರು, ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡಿದ ಡಿ.ಕೆ.ಶಿವಕುಮಾರ್ ದೇಶದ ಭವಿಷ್ಯ, ನೆಮ್ಮದಿ, ಶಾಂತಿಗಾಗಿ ರಾಹುಲ್ ಗಾಂಧಿ ನೇತ್ರತ್ವದಲ್ಲಿ ಈ ಪಾದಯಾತ್ರೆ ನಡೆಯುತ್ತಿದೆ ಎಂದು ಹೇಳಿದರು. ಇವಾಗ ಕರ್ನಾಟಕ ಭ್ರಷ್ಟ ರಾಜ್ಯ ಅಂತಾ ಹೆಸರು ತಕೊಂಡಿದೆ. ಹಿಂದೆ ಮೋದಿ ಬಂದು ಸಿದ್ದರಾಮಯ್ಯ ಸರ್ಕಾರ 10 ಪರ್ಸೆಂಟ್ ಅಂದ್ರು. ಇವಾಗ ನಾವು ಆರೋಪ ಮಾಡ್ತಿಲ್ಲ.
ಗುತ್ತಿಗೆದಾರರೇ 40 ಪರ್ಸೆಂಟ್ ಸರ್ಕಾರ ಅಂತಿದ್ದಾರೆ ಎಂದು ಕಿಡಿಕಾರಿದರು.

ಯಾವ ಕಚೇರಿಗೆ ಹೋದರೂ ಲಂಚ, ಹಣ, ಹಣ ಅಂತಿದ್ದಾರೆ. ಇದು ನಿಮ್ಮ ಮನೆಗೆ ಬಂದ ಭಾಗ್ಯ. 7 ಸೀಟು ಗೆದ್ದಾಗ ದಳದವರು ಸ್ಥಳೀಯ ಸಂಸ್ಥೆ, ಪದವೀಧರರ ಕ್ಷೇತ್ರ ಗೇಲ್ಲೋಕೆ ಆಗಲಿಲ್ಲ. ನೀವೆಲ್ಲರೂ ಒಟ್ಟಾಗಿ ದುಡಿದಿದ್ದಕ್ಕೆ ಅದು ಸಾಧ್ಯವಾಯ್ತು. ಈ ಪಾದಯಾತ್ರೆಯಿಂದ ಸಂಘಟನೆಗೂ ಸಹಕಾರಿಯಾಗಲಿದೆ.
ನಾಳೆಯಿಂದಲೇ ಪ್ರತಿ ಪಂಚಾಯಿತಿ ಮಟ್ಟದಲ್ಲಿ ಸಂಘಟನೆ ಮಾಡಿ. ಜಿಲ್ಲೆಯ ಹೊಸ ಗಾಳಿ ಏಳುವ ಸೂಚನೆ ಬರ್ತಿದೆ. ಮಂಡ್ಯ ಜಿಲ್ಲೆಯಿಂದಲೇ ಕನಿಷ್ಠ 10 ಸಾವಿರ ಜನ ಬನ್ನಿ ಎಂದು ಕರೆ ನೀಡಿದರು.

ಕಾಸು ಕೊಟ್ಟು ಯಾರನ್ನೂ ಯಾತ್ರೆಗೆ ಕರೆತರಬೇಡಿ ಎಂದು ಸಲಹೆ ನೀಡಿದ ಡಿ.ಕೆ.ಶಿವಕುಮಾರ್ ವಾಹನ ಬೇಕಿದ್ರೆ ನಾವೇ ಮಾಡ್ಕೊಡ್ತೀವಿ. ಬದ್ಧತೆ, ನಾಯಕತ್ವ ಇರೋರನ್ನ ಕರೆತನ್ನಿ. ಪಾದಯಾತ್ರೆಯಲ್ಲಿ ಭಾಗವಹಿಸುವವರಿಗೆ ಆನ್ ಲೈನ್ ನೋಂದಣಿ ಆರಂಭವಾಗಿದೆ. ಈ ಕೂಡಲೇ ನೋಂದಣಿ ಮಾಡಿಕೊಳ್ಳಿ ಎಂದರು.

ಈ ಪೂರ್ವಭಾವಿ ಸಭೆಯಲ್ಲಿ ಡಿ.ಕೆ.ಶಿವಕುಮಾರ್ ಮತ್ತೊಂದು ಪಾದಯಾತ್ರೆಯ ಗುಟ್ಟೊಂದನ್ನು ಬಿಟ್ಟು ಕೊಟ್ಟರು. ರಾಹುಲ್ ಗಾಂಧಿ ಅಣತಿಯಂತೆ ಮೇಕೆದಾಟು ಪಾದಯಾತ್ರೆ ನಡೆದಿದೆ. ಕೃಷ್ಣ ನೀರಾವರಿ ಯೋಜನೆ ಬಗ್ಗೆ ಪಾದಯಾತ್ರೆಗೆ ಆ ಭಾಗದ ನಾಯಕರಿಗೆ ಹೇಳಿದ್ದೆ. ಇನ್ನೂ ಅದರ ತಯಾರಿ ಆರಂಭವಾಗಿಲ್ಲ. ಇದೆಲ್ಲವೂ ಮುಗಿದ ನಂತರ ನಾನೇ ನೇತೃತ್ವ ತೆಗೆದುಕೊಳ್ತೀನಿ. ಕೃಷ್ಣ ನೀರಾವರಿ ಯೋಜನೆಗಾಗಿ ಪಾದಯಾತ್ರೆ ಮಾಡ್ತೇವೆ ಎಂದು ಹೇಳಿದರು.

ಬಿಜೆಪಿಯ ಜನಸ್ಪಂದನ ಕಾರ್ಯಕ್ರಮದ ಕುರಿತು ವ್ಯಂಗ್ಯವಾಡಿದ ಡಿ.ಕೆ.ಶಿ ಅದ್ಯಾರೋ ಸ್ಮಿರ್ಥಿ ಇರಾನಿಯಂತೆ. ಆಯಮ್ಮ ಮಾತನಾಡುವಾಗ ಜನಾನೇ ಇರ್ಲಿಲ್ಲ. ಎಲ್ಲಾ ಬರಿ ಖಾಲಿ ಖಾಲಿ ಚೇರ್ ಗಳಂತೆ ಎಂದು ಹೇಳುವ ಮೂಲಕ ಮಂಡ್ಯದಲ್ಲಿ ಮತ್ತೆ ಜನಸ್ಪಂದನಾ ಕಾರ್ಯಕ್ರಮದ ಬಗ್ಗೆ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು.

ಇದನ್ನು ಓದಿ : KL Rahul bats for Stray Dogs: “ದಯವಿಟ್ಟು ಇದನ್ನು ನಿಲ್ಲಿಸಿ”.. ಬೀದಿ ನಾಯಿಗಳ ಸಾಮೂಹಿಕ ಹತ್ಯೆಗೆ ಮಿಡಿದ ಕ್ರಿಕೆಟಿಗ ಕೆ.ಎಲ್ ರಾಹುಲ್

ಇದನ್ನೂ ಓದಿ : Vinay Kumar : MI ಎಮಿರೇಟ್ಸ್ ತಂಡಕ್ಕೆ ದಾವಣಗೆರೆ ಎಕ್ಸ್‌ಪ್ರೆಸ್ ವಿನಯ್ ಕುಮಾರ್ ಬೌಲಿಂಗ್ ಕೋಚ್

KPCC president DK Shivakumar hinted about another paadayatra

Comments are closed.