Praveen Nettarus final darshan : ಪ್ರವೀಣ್​ ನೆಟ್ಟಾರು ಅಂತಿಮ ದರ್ಶನದಲ್ಲಿ ಹಿಂದೂ ಕಾರ್ಯಕರ್ತರ ಆಕ್ರೋಶ : ಥಂಡಾ ಹೊಡೆದ ಬಿಜೆಪಿ ನಾಯಕರು

ಮಂಗಳೂರು : Praveen Nettaru’s final darshan : ಬಿಜೆಪಿ ಯುವ ಮುಖಂಡ ಹಾಗೂ ಭಜರಂಗದಳದ ನಾಯಕ ಪ್ರವೀಣ್​ ನೆಟ್ಟಾರು ಹತ್ಯೆ ಪ್ರಕರಣ ಹಿಂದೂ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ಪ್ರವೀಣ್​ ನೆಟ್ಟಾರು ಅಂತಿಮ ದರ್ಶನಕ್ಕೆ ಜನ ಸಾಗರವೇ ಹರಿದು ಬಂದಿದ್ದು ಬಿಜೆಪಿ ನಾಯಕರ ಎದುರು ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದ್ದಾರೆ. ಹಿಂದೂ ಕಾರ್ಯಕರ್ತರ ಸಾಲು ಸಾಲು ಪ್ರಶ್ನೆಗಳಿಗೆ ಬಿಜೆಪಿ ನಾಯಕರೇ ಥಂಡಾ ಹೊಡೆದಿದ್ದಾರೆ.


ಸುಳ್ಯ ತಾಲೂಕಿನ ಬೆಳ್ಳಾರೆಯ ಬಸ್​ ನಿಲ್ದಾಣದ ಸಮೀಪದಲ್ಲಿ ಪ್ರವೀಣ್​ ನೆಟ್ಟಾರು ಮೃತದೇಹದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರವೀಣ್​ ನೆಟ್ಟೂರು ಅಂತಿಮ ದರ್ಶನವನ್ನು ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಬೆಳ್ಳಾರೆಯತ್ತ ಧಾವಿಸಿದ್ದಾರೆ. ಹಿಂದೂ ಕಾರ್ಯಕರ್ತರು ಬೇಕೆ ಬೇಕೆ ನಮಗೆ ನ್ಯಾಯ ಬೇಕು ಎಂದು ಘೋಷಣೆ ಕೂಗುತ್ತಿರುವ ದೃಶ್ಯಗಳು ಕಂಡು ಬಂದಿದೆ.


ಪ್ರವೀಣ್​ ನೆಟ್ಟಾರು ಮೃತ ದೇಹದ ಅಂತಿಮ ದರ್ಶನಕ್ಕೆ ಆಗಮಿಸಿದ ಸಚಿವರಾದ ಸುನೀಲ್​ ಕುಮಾರ್​, ಎಸ್​.ಅಂಗಾರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್ ಕಟೀಲ್​ ವಿರುದ್ಧ ಹಿಂದೂ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ. ಹಿಂದೂ ಕಾರ್ಯಕರ್ತನ ಕೊಲೆಗೆ ನಮಗೆ ನ್ಯಾಯ ಕೊಡಿಸಿ, ಆರೋಪಿಗಳನ್ನು ಶಿಕ್ಷಿಸಿ ಎಂದು ಬಿಜೆಪಿ ನಾಯಕರನ್ನು ಸುತ್ತುವರಿದು ಹಿಂದೂ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ. ಅಲ್ಲದೇ ಪ್ರವೀಣ್​ ನೆಟ್ಟಾರು ಹತ್ಯೆ ಆಗುತ್ತೆ ಅಂದಮೇಲೆ ಈ ರಾಜ್ಯದಲ್ಲಿ ನಮಗೆ ಭದ್ರತೆ ಎಲ್ಲಿದೆ ಎಂದು ಹಿಂದೂ ಕಾರ್ಯಕರ್ತರು ಪ್ರಶ್ನೆ ಮಾಡಿದ್ದು ಹಿಂದೂ ಕಾರ್ಯಕರ್ತರ ಸಾಲು ಸಾಲು ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದೇ ಸಚಿವ ಸುನೀಲ್​ ಕುಮಾರ್​, ಎಸ್​. ಅಂಗಾರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲು ಕೈ ಕಟ್ಟಿ ತಲೆ ತಗ್ಗಿಸಿದ ದೃಶ್ಯಗಳು ಕಂಡು ಬಂತು.


ಬೆಳ್ಳಾರೆ ಬಸ್​ ನಿಲ್ದಾಣದ ಸಮೀಪ ಪ್ರವೀಣ್​ ನೆಟ್ಟಾರು ಅಂತಿಮ ದರ್ಶನ ಪೂರ್ಣಗೊಳ್ಳುತ್ತಿದ್ದಂತೆಯೇ ಅಲ್ಲಿಂದ ಮೃತದೇಹವು ಪ್ರವೀಣ್​ ಸ್ವಗ್ರಾಮ ನೆಟ್ಟಾರುವಿಗೆ ತೆರಳಲಿದೆ. ಕುಟುಂಬಸ್ಥರು ಅಂತ್ಯಕ್ರಿಯೆಗೆ ಸಕಲ ಸಿದ್ಧತೆಯನ್ನು ಮಾಡಿಕೊಳ್ತಿದ್ದು ಬಿಲ್ಲವ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಲಿದೆ.

https://youtu.be/R8og_fqKZ6U

ಇದನ್ನು ಓದಿ : Rahul Dravid: “ರಾಹುಲ್ ದ್ರಾವಿಡ್ ಅಲ್ಲ ರಾಹುಲ್ ‘ಡೇವಿಡ್’..” ದಿ ಗ್ರೇಟ್ ವಾಲ್ ಬಿಚ್ಚಿಟ್ಟ “ಹೆಸರು” ರಹಸ್ಯ

ಇದನ್ನೂ ಓದಿ : Praveen Nettaru murder case: ಪ್ರವೀಣ್​ ನೆಟ್ಟಾರು ಹತ್ಯೆ ಪ್ರಕರಣ : ಐವರು ಶಂಕಿತ ಆರೋಪಿಗಳು ವಶಕ್ಕೆ

Outrage from Hindu activists during Praveen Nettaru’s final darshan

Comments are closed.